ಮಂಗಳೂರು-ಸುರತ್ಕಲ್ ಸ್ಫೋರ್ಟ್ಸ್& ಕಲ್ಚರಲ್ ಕ್ಲಬ್ (ರಿ ) ಸಂಸ್ಥೆಯು ಮಾರ್ಚ್ 2 ಮತ್ತು 3ರಂದು ಸುರತ್ಕಲ್ ನ ಗೋವಿಂದ ದಾಸ ಕಾಲೇಜು ಮೈದಾನದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರಿಗಾಗಿ ಮೂರನೆಯ ಆವೃತ್ತಿಯ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ಟೆನಿಸ್ಬಾಲ್ ಕ್ರಿಕೆಟ್ ನ ಗತ ವೈಭವವನ್ನು ಮರು ಸೃಷ್ಟಿಸುವ ವಿಶೇಷ ಪರಿಕಲ್ಪನೆಯ ಈ ಪಂದ್ಯಾಟದಲ್ಲಿ ಬೆಂಗಳೂರು,ಮೈಸೂರು,
ಅರಸೀಕೆರೆ,ಶಿವಮೊಗ್ಗ,ದಕ್ಷಿಣ ಕನ್ನಡ, ಉಡುಪಿ ಹೀಗೆ ರಾಜ್ಯದ ವಿವಿಧ ಭಾಗಗಳಿಂದ 45 ವರ್ಷ ಮೇಲ್ಪಟ್ಟ ಆಟಗಾರರ ಒಟ್ಟು12 ಹಿರಿಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ.
ಸುರತ್ಕಲ್ ಸ್ಫೋರ್ಟ್ಸ್& ಕಲ್ಚರಲ್ ಕ್ಲಬ್ (ರಿ ) ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ಮತ್ತು ಸಂಸ್ಥೆಯ ಮಹಾಪೋಷಕರಾದ ಎ.ಸಿ.ಪಿ ಅಧಿಕಾರಿ ಎಸ್ ಮಹೇಶ್ ಕುಮಾರ್ ಇವರ ಸಾರಥ್ಯದಲ್ಲಿ ಹಾಗೂ ಸುರತ್ಕಲ್ ಪರಿಸರದ ಹಿರಿಯ ಹಾಗೂ ಕಿರಿಯ ಆಟಗಾರರ ಬೆಂಬಲದೊಂದಿಗೆ ಪಂದ್ಯಾವಳಿ ನಡೆಯಲಿದೆ.
ವಿಜೇತ ಮತ್ತು ರನ್ನರ್ ಅಪ್ ತಂಡಗಳಿಗೆ ಕ್ರಮವಾಗಿ ರೂ. 1,00,001 ಮತ್ತು 50,005 ನಗದು ಬಹುಮಾನ ಮತ್ತು ಟ್ರೋಫಿ ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ. ಪಂದ್ಯಾವಳಿಯ ನೇರ ಪ್ರಸಾರ ಬೆದ್ರಾ ಮೀಡಿಯಾ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಮಾರ್ಚ್ 4 ರಂದು ತೃತೀಯ ವಾರ್ಷಿಕೋತ್ಸವ ಸಮಾರಂಭ
ಸುರತ್ಕಲ್ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ನ ತೃತೀಯ ವಾರ್ಷಿಕೋತ್ಸವ ಮಾರ್ಚ್ 4 ರಂದು ಸಂಜೆ 6 ಗಂಟೆಗೆ ಗೋವಿಂದ ದಾಸ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದೆ.ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ,ಸನ್ಮಾನ ಸಮಾರಂಭದ ಬಳಿಕ ಕಲಾ ಸಂಗಮ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ರವರ ಶಿವದೂತೆ ಗುಳಿಗೆ ನಾಟಕದ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ಇವರು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.