ಮಂಗಳೂರು: ಕೆಚ್ಚೆದೆಯ ಪ್ರದರ್ಶನ ನೀಡಿದ ಮೂಲ್ಕಿಯ ವೊಳಲಂಕೆ ಫೈಟರ್ಸ್ ತಂಡ ಇಲ್ಲಿ ನಡೆದ ಪ್ರತಿಷ್ಠಿತ ಜಿಪಿಎಲ್ ಕಪ್ ಟೂರ್ನಿಯಲ್ಲಿ ಎರಡನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
ಜಿ ಎಸ್ ಬಿ ಗಳ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಜಿ ಎಸ್ ಬಿ ಪ್ರೀಮಿಯರ್ ಲೀಗ್‌ನ ಎಂಟನೇ ಆವೃತ್ತಿಯು ಫೆಬ್ರವರಿ 23,24 ಮತ್ತು 25ರಂದು ನಡೆಯಿತು. 2017ರಿಂದ ಆಯೋಜನೆ ಆಗುತ್ತಾ ಬಂದಿರುವ ಪ್ರತಿಷ್ಠಿತ ಜಿ ಪಿ ಎಲ್ ಕಪ್ ಟೂರ್ನಿಯಲ್ಲಿ ಈ ಬಾರಿ ಜಿ ಎಸ್ ಬಿ ಗಳ ಬಲಿಷ್ಠ 16 ತಂಡಗಳು ಪಾಲ್ಗೊಂಡಿದ್ದವು. ಜಿಪಿಎಲ್ ಟೂರ್ನಿಯಲ್ಲಿ ವೊಳಲಂಕೆ ಫೈಟರ್ಸ್ ಮುಲ್ಕಿ ಟ್ರೋಫಿ ಗೆದ್ದುಅದು ಟೂರ್ನಿಯ ಇತಿಹಾಸದಲ್ಲೇ ಬಹುದೊಡ್ಡ ಅವಿಸ್ಮರಣೀಯ ಕ್ಷಣವಾಗಿದೆ. ಜಿಪಿಎಲ್ ಇತಿಹಾಸದಲ್ಲಿ 2 ಬಾರಿ ಫೈನಲ್ ಹಂತ ತಲುಪಿದ್ದಆರ್‌ಸಿಬಿ ಎರಡನೇ ಬಾರಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಒಳಲಂಕೆ ಫೈಟರ್ಸ್ ಘಟಾನುಘಟಿ ಆಟಗಾರರನ್ನು ಹೊಂದಿ 2021,2022 ಹಾಗೂ 2024ರಲ್ಲಿ ಫೈನಲ್ ಹಂತ ತಲುಪಿತ್ತು. 2021 ರಲ್ಲಿ ಮುಂಬೈ ಪಲ್ಟಾನ್ಸ್ ಎದುರು ಸೋತು ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶ ಕೈಚೆಲ್ಲಿಕೊಂಡಿತ್ತು. 2022 ರಲ್ಲಿ ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್ ತಂಡವನ್ನು ಬಗ್ಗು ಬಡಿಯುವ ಮೂಲಕ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಮತ್ತೆ ಸ್ಟಾರ್ ಆಟಗಾರರ ಭರ್ಜರಿ ಪ್ರದರ್ಶನದ ಬಲದಿಂದ ಮಿಂಚಿದ ವೊಳಲಂಕೆ ಫೈಟರ್ಸ್ ಪ್ರತಿಷ್ಠಿತ ಜಿಪಿಎಲ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿಎರಡನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಜಯದೊಂದಿಗೆ ವೊಳಲಂಕೆ ಫೈಟರ್ಸ್ ತಂಡ ಜಿಪಿಎಲ್ ಸೀಸನ್ 8 ಸ್ಪರ್ಧೆಯಲ್ಲಿ ಗೆದ್ದು ಮತ್ತೆ ಎರಡನೇ ಬಾರಿ ಚಾಂಪಿಯನ್ಸ್ ಎನಿಸಿಕೊಳ್ಳುವ ಮೂಲಕ ಇತಿಹಾಸ ಬರೆಯಿತು.
ಭಾನುವಾರ ನಡೆದ ಫೈನಲ್‌ನಲ್ಲಿ ಅಧಿಕಾರಯುತ ಪ್ರದರ್ಶನ ತಂದ ವೊಳಲಂಕೆ ಫೈಟರ್ಸ್ ಕಳೆದ ಬಾರಿಯ ಉಪಾಂತ ವಿಜಯಿ ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟುತಂಡವನ್ನು ಭಾರಿ ಅಂತರದಲ್ಲಿ ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಟ್ರೋಫಿ ಎತ್ತಿ ಹಿಡಿಯಿತು. ವೊಳಲಂಕೆ ಫೈಟರ್ಸ್ ತಂಡದ ಪರ ವಿಘ್ನೇಶ್ ಭಟ್ ಕೋಟೇಶ್ವರ, ಸುಹಾಸ್ ಪ್ರಭು ಮತ್ತು ಐಕಾನ್ ಆಟಗಾರರಾದ ಶರತ್ ಪ್ರಭು (ಬುಲ್ಲಿ) ಭರ್ಜರಿ ಜಯ ತಂದುಕೊಟ್ಟರು. ಒಳಲಂಕೆ ಫೈಟರ್ಸ್ ಮೂಲ್ಕಿಗೆ ಜಿಪಿಎಲ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಪದಕ ಗೆದ್ದುಕೊಟ್ಟಿರುವ ಚಾಂಪಿಯನ್ ಆಟಗಾರರಾದ ವಿಘ್ನೇಶ್ ಭಟ್ , ಸುಹಾಸ್ ಮತ್ತು ಶರತ್ ಪ್ರಭು ಸಹೋದರರು ಅಕ್ಷರಶಃ ಮಿಂಚಿನ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಬೌಲಿಂಗ್ ವಿಭಾಗದಲ್ಲೂ ಸುನಿತ್ ಭಟ್, ವೆಂಕಟೇಶ್ ಪ್ರಭು, ಯುವ ಬೌಲರ್ ಪಂಚಮ್ ಭಟ್ ಮತ್ತು ಸಾತ್ವಿಕ್ ಬಾಳಿಗ ಸ್ಮರಣೀಯ ಪ್ರದರ್ಶನ ಹೊರತಂದು ಸ್ಮರಣೀಯ ಜಯ ತಂದುಕೊಟ್ಟರು.
ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ವೊಳಲಂಕೆ ಫೈಟರ್ಸ್ ಫೈನಲ್‌ನಲ್ಲಿ ಅಧಿಕಾರಯುತ ಪ್ರದರ್ಶನ ನೀಡಿ ಹುಬ್ಬೇರುವಂತೆ ಮಾಡಿತು. ಲೀಗ್ ಹಂತದ ಮೂರನೇ ಪಂದ್ಯವನ್ನು ಕಳೆದುಕೊಂಡು ಟೀಮ್ ಒಳಲಂಕೆ ಫೈಟರ್ಸ್ ಒತ್ತಡಕ್ಕೆ ಸಿಲುಕಿದರೂ ಬಳಿಕ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ನಲ್ಲಿ ದಿಟ್ಟ ಆಟವಾಡಿ 9 ವಿಕೆಟ್‌ಗಳಿಂದ ಫೈನಲ್ ಪಂದ್ಯ ಗೆದ್ದುಕೊಂಡಿತು. ಒತ್ತಡಕ್ಕೆ ಸಿಲುಕಿದರೂ ಪುಟಿದೆದ್ದು ಪ್ರವಾಸಿ ಮುಂಬೈ ಪಲ್ಟಾನ್ಸ್ ಪಡೆಗೆ ತಿರುಗೇಟು ನೀಡಿದ ಟೀಮ್ ಒಳಲಂಕೆ ಫೈಟರ್ಸ್ ಕ್ವಾರ್ಟರ್ ಫೈನಲ್ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಸೆಮಿಫೈನಲ್ ನಲ್ಲಿ ಜಿ ಆರ್ ಎಸ್ ಮೈಸೂರು ವಾರಿಯರ್ಸ್ ತಂಡವನ್ನು 8 ವಿಕೆಟ್ ಅಂತರದಲ್ಲಿ ಸೋಲಿಸಿ ಟ್ರೋಫಿ ಗೆಲುವನ್ನು ಖಾತ್ರಿ ಪಡಿಸಿಕೊಂಡಿತು. ಇದಾದ ಬಳಿಕ ಫೈನಲ್ ಪಂದ್ಯದಲ್ಲೂ ಯಶಸ್ಸು ವೊಳಲಂಕೆ ಫೈಟರ್ಸ್ ಪಾಲಾಯಿತು ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು ವಿರುದ್ಧದ ಪಂದ್ಯದಲ್ಲಿ ಸೆಟ್ ಬ್ಯಾಟರ್‌ಗಳಾದ ವಿಘ್ನೇಶ್ ಮತ್ತು ಸುಹಾಸ್ ಮುರಿಯದ 39 ರನ್ ಜೊತೆಯಾಟವಾಡಿ ತಂಡಕ್ಕೆ ಸ್ಮರಣೀಯ ಜಯ ತಂದರು.ಮೊದಲ ವಿಕೆಟ್‌ಗೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ವಿಘ್ನೇಶ್ ಭಟ್ (ಅಜೇಯ 17) ಮತ್ತು ಸುಹಾಸ್ ಪ್ರಭು (ಅಜೇಯ 22) ಮನಮೋಹಕ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.
ಕೋಟೇಶ್ವರ ವಿಘ್ನೇಶ್ ಭಟ್ ಗೆ ಐತಿಹಾಸಿಕ ಸರಣಿ ಪುರುಷೋತ್ತಮ ಪದಕ!
ಮೂಲ್ಕಿ ತಂಡದ ನಂ.1 ಆಟಗಾರ ಕೋಟೇಶ್ವರ ಮೂಲದವರಾದ ವಿಘ್ನೇಶ್ ಭಟ್ ತನ್ನ ಆಲ್ರೌಂಡ್ ಪ್ರದರ್ಶನದ ಗೇಮ್‌ಗಳಿಂದ ಎದುರಾಳಿ ತಂಡದ ಬೌಲರ್ ಗಳನ್ನು ಬಗ್ಗುಬಡಿದರು. ಟೂರ್ನಿಯುದ್ದಕ್ಕೂ ಎಲ್ಲಾ ಇನಿಂಗ್ಸ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟ ವಿಘ್ನೇಶ್ ಭಟ್ ಗೆ ಸರಣಿ ಶ್ರೇಷ್ಠ ಗೌರವ ಒಲಿಯಿತು. ಹೀಗಾಗಿ ಅವರಿಗೆ ಸುಜುಕಿ ಅವೇನಿಸ್ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಮೂಲ್ಕಿಯ ತಂಡ GPLಕಪ್ ಜಯ ದಾಖಲಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯೇ ಹರಿಯಿತು. ವಿವಿಧ ತಂಡದ ಆಟಗಾರರು ಸೇರಿದಂತೆ ಹಲವು ದಿಗ್ಗಜರು ಟ್ರೋಫಿ ಗೆದ್ದ ಒಳಲಂಕೆ ಫೈಟರ್ಸ್ ತಂಡಕ್ಕೆ ಶುಭ ಹಾರೈಸಿದರು. ಇತ್ತೀಚೆಗಷ್ಟೇ 2023 ರ ಅಂತ್ಯದಲ್ಲಿ ಅದ್ದೂರಿಯ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಮುಲ್ಕಿಯಲ್ಲಿ ಆಯೋಜಿಸಿದ ಒಳಲಂಕೆ ಬಳಗ ಮೂರನೇ ಬಾರಿ ಫೈನಲ್ ತಲುಪಿದ ಸಾಧನೆ ಮಾಡಿ ಟ್ರೋಫಿ ಕೂಡ ಗೆದ್ದು ಅತ್ಯಂತ ಸ್ಮರಣೀಯ ಗೆಲುವು ದಕ್ಕಿಸಿಕೊಂಡಿದೆ.