19.7 C
London
Saturday, May 18, 2024
Homeಕ್ರಿಕೆಟ್ಗೆಲುವಿನ ಕ್ಯಾಪ್ ಧರಿಸಿ ಟೇಬಲ್ ಟಾಪ್ ಮಾಡಿದ ಆರ್.ಸಿ.ಬಿ

ಗೆಲುವಿನ ಕ್ಯಾಪ್ ಧರಿಸಿ ಟೇಬಲ್ ಟಾಪ್ ಮಾಡಿದ ಆರ್.ಸಿ.ಬಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬಾಲಿಂಗ್ ಮಾಡಿತು. ಆರ್.ಸಿ.ಬಿ ಬ್ಯಾಟ್ಸಮನಗಳನ್ನ ಯಾರ್ಕರ್ ಬಾಲ್ಗಳ ಮೂಲಕ ಎಡೆಬಿಡದೆ ಕಾಡಿತು. ವಿರಾಟ್ ವಿಕೆಟು ಬೇಗ ಕೊಟ್ಟಾಗಿತ್ತು. 3 ಬೌಂಡರಿಗಳ ನಂತರ ದೇವರು ಕೈ ಬಿಟ್ಟಾಗಿತ್ತು.
ಮೂರಕ್ಕೇರಿದ ಪಾಟಿದಾರ ಆಟ ಚೂರು ಸಮಾಧಾನಕರ. 1 ಸಿಕ್ಸು 2 ಬೌಂಡರಿ ಮಾತ್ರ ಬಾರಿಸಿ ಮಿನಿಮಮ್ ಆದ ಮ್ಯಾಕ್ಸು, 75 ರನ್ನು ಬಾರಿಸಿದ ಆರ್ಸಿಬಿಯ ಆಪತ್ಬಾಂಧವ ಎಬಿ ಡಿವಿಲಿಯರ್ಸ್ ಮತ್ತೆ ರಾಕ್ಸು.
ಗೆಲ್ಲಲು 172 ರನ್ನುಗಳ ಗಳಿಸಬೇಕಿದ್ದ ಡೆಲ್ಲಿ ಹೈರಾಣಾಯಿತು ಆರಂಭಿಕ ವಿಕೆಟ್ಗಳ ಚೆಲ್ಲಿ. ಕೇವಲ 6 ರನ್ನುಗಳಿಗೆ ಉರುಳಿದ ಶಿಖರ
4 ರನ್ನುಗಳಿಗೆ ಚಿತ್ತಾದ ಸ್ಮಿತ್ತು. ಮೂರು ಬೌಂಡರಿಗಳ ನಂತರ ತಿರುಗದ ಪೃಥ್ವಿ, 22 ರನ್ನುಗಳಿಗಿಂತ ಹೆಚ್ಚು ಮಾರ್ಕಾಗದ ಮಾರ್ಕು.
ವಿಕೆಟ್ ಮೇಲೆ ವಿಕೆಟ್ ಹೋದರು ಹೆದರಲಿಲ್ಲ ಪಂತು ಕೊನೆಯ ಕ್ಷಣದವರೆಗೂ ಹೋರಾಡಿದ ಕ್ರೀಸ್ ಮೇಲೆ ನಿಂತು. ಆದರೆ ಸೋಲುತಿದ್ದ ತಂಡವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಅಸಲಿ ವಾರಿಯರ್ ಸಿಕ್ಸುಗಳ ಸುರಿಮಳೆಗೈದ ಸಿಮ್ರನ್ ಹೆಟ್ಮಾಯರ್.
ಇನ್ನೇನು ಗೆದ್ದೇ ಬಿಟ್ರು ದಿಲ್ಲಿ ಅನ್ನುವಾಗಲೇ ಒಂದ್ನಿಮಿಷ ನಿಲ್ಲಿ ಅಂತ  ಬಂದ ಸಿರಾಜ್ ಭಾಯ್ ಎರಡು ಬೌಂಡರಿ ಕೊಟ್ರೂ ಗೆಲ್ಲಲು ಬಿಡದೆ ಡೆಲ್ಲಿಗೆ ಹೇಳಿದ ಬಾಯ್ ಬಾಯ್.
ನಾಯಕನ ಆಟ ಆಡಿದ ಪಂತು, ಮೀಸ್ಟೇಕ್ ಮಾಡೇಬಿಟ್ಟ ಅಂತೂ. ಹೆಟ್ಟುತ್ತಿದ್ದ ಹೆಟ್ಮಾಯರಗೆ ಕೊನೆ ಎರಡು ಬಾಲು ಸಿಗಲೇ ಇಲ್ಲ. ಟೇಬಲ್ ಟಾಪ್ ಗೆ ಹಾರಿದ ಆರ್.ಸಿ.ಬಿ ನೋಡಿ ‘ಎಲ್ಲೋ’ ಕೆಲವರು ನಗಲೇ ಇಲ್ಲ

Latest stories

LEAVE A REPLY

Please enter your comment!
Please enter your name here

twenty − 16 =