2021-22 ರ ಸಾಲಿನ ಅಂಡರ್ 19 ಮಂಗಳೂರು ವಲಯದ ತಂಡದ ಆಟಗಾರರ ಪಟ್ಟಿ ಪ್ರಕಟಗೊಂಡಿದೆ.
ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಇಂಡಿಪೆಂಡೆನ್ಸ್ ಡೇ ಕಪ್ ನಲ್ಲಿ ಸ್ಪೋಟಕ ಶತಕದ ಮೂಲಕ ಟೂರ್ನಮೆಂಟ್ ನ ಅತ್ಯಧಿನ ರನ್ ಗಳಿಕೆಯ ಆಟಗಾರನಾಗಿ ಹೊರಹೊಮ್ಮಿದ ಪ್ರಣಾಮ್ ಕೋಟ ಅಂಡರ್ 19 ಕೆ.ಎಸ್.ಸಿ.ಎ ಮಂಗಳೂರು ವಲಯದ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾನೆ ಮತ್ತು ವಿಕೆಟ್ ಕೀಪರ್ ಆಗಿ ಗೂಟದ ಹಿಂದೆ ಕಾರ್ಯ ನಿರ್ವಹಿಸಲಿದ್ದಾನೆ.
ಬ್ರಹ್ಮಾವರದ ಎಸ್.ಎಮ್.ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಪ್ರಣಾಮ್ ಕೋಟ,
B.A.C.A(ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ)ಯ ಪ್ರಮುಖ ರೂವಾರಿ ವಿಜಯ್ ಆಳ್ವರ ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದಾನೆ.ಪ್ರಣಾಮ್ ಕೋಟ ಸೀತಾರಾಮ್ ಆಚಾರ್ ಮತ್ತು ಪ್ರೇಮಾ ದಂಪತಿಗಳ ಸುಪುತ್ರ.