ಕೊಡುಗೈ ದಾನಿ ಗೋವಿಂದ ಬಾಬು ಪೂಜಾರಿ ಇವರಿಗೆ ಭಾರತ ಗೌರವ ಪ್ರಶಸ್ತಿ

ಬೆಂಗಳೂರು : ಇಲ್ಲಿನ ಜನ್ಮಭೂಮಿ ಫೌಂಡೇಶನ್ ರಿ ಇವರ ವತಿಯಿಂದ ಕೊರೋನಾ ವಾರಿಯರ್ಸ್ ಹಾಗೂ ನಾಡಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಚೆಫ್ ಟಾಕ್  ಫುಡ್ ಅಂಡ್ ಹಾಸ್ಪಿಟಾಲಿಟಿ ಪ್ರೈ ಲಿ ಇದರ ವ್ಯವಸ್ಥಾಪಕ ನಿರ್ದೇಶಕರಾದ ಹಾಗೂ ನಮ್ಮ ಕೊಡುಗೈ ದಾನಿ ಗೋವಿಂದ ಬಾಬು ಪೂಜಾರಿ ಅವರಿಗೆ ಭಾರತ ಗೌರವ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಸಮಾರಂಭದಲ್ಲಿ ನಾಡಿನ ಖ್ಯಾತ  ಸಾಹಿತಿ ಡಾ. ಕುಂ  ವೀರಭದ್ರಪ್ಪ , ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್, ಎಸ್ ಹೊಸಮನಿ, ಬೆಂಗಳೂರು ಎಸಿಪಿ,ಸಿಸಿಬಿ ಹೆಚ್ ಎಸ್ ಪರಮೇಶ್ವರ್, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡ ಚಲನಚಿತ್ರದ  ಯುವ ನಟ  ಭುವನ್ ಪೊನ್ನಪ್ಪ,  ಚಿತ್ರನಟಿ ಹಾಗೂ ರೂಪದರ್ಶಿ ಪೂಜಾ ರಮೇಶ್, ಬೆಂಗಳೂರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಇದರ ರಾಜ್ಯಾಧ್ಯಕ್ಷ  ಡಾ ಶಿವಕುಮಾರ ನಾಗರ ನವಿಲೆ, ವಕೀಲರು ಹಾಗೂ  ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ ರಾಜ್ಯಾಧ್ಯಕ್ಷರು ಬಾಬು ಪತ್ತಾರ್,  ಜನ್ಮಭೂಮಿ ಫೌಂಡೇಶನ್ ರಿ ಬೆಂಗಳೂರು ಇದರ ಅಧ್ಯಕ್ಷ ರಘು ಗಂಗೂರು, ಜನ್ಮಭೂಮಿ ಫೌಂಡೇಶನ್ ರಿ ಬೆಂಗಳೂರು ಸಂಘಟಕ ಮಾರುತಿ ಬಡಿಗೇರ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕೋಟ ರಾಮಕೃಷ್ಣ ಆಚಾರ್ಯ

Written by ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published. Required fields are marked *

twenty + 18 =

ಅಂಡರ್ 19 ಕೆ.ಎಸ್.ಸಿ.ಎ ಮಂಗಳೂರು ವಲಯದ ಆರಂಭಿಕ ಆಟಗಾರನಾಗಿ ಪ್ರಣಾಮ್ ಕೋಟ

ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಐಕಾನ್ ಆಗಿರುವ ಗಣೇಶ್ ಕುಲಾಲ್ ಪಂಜಿಮಾರ್