ಬೆಂಗಳೂರಿನಲ್ಲಿ ‘ಪಾರ್ಥಸಾರಥಿ ಪ್ರೀಮಿಯರ್ ಲೀಗ್’ ಜಿ ಎಸ್ ಬಿ ಕ್ರಿಕೆಟ್
ಜಿ ಎಸ್ ಬಿ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿರುವ ಬೆಂಗಳೂರು ‘ಪಾರ್ಥಸಾರಥಿ ಪ್ರೀಮಿಯರ್ ಲೀಗ್’ಜಿ ಎಸ್ ಬಿ ಕ್ರಿಕೆಟ್ ಟೂರ್ನಮೆಂಟ್ 2024, ಡಿಸೆಂಬರ್ 7 ಮತ್ತು 8 ರಂದು ಬೆಂಗಳೂರಿನ ಸ್ಥಳೀಯ ವೆಟರ್ನರಿ ಕಾಲೇಜು ಮೈದಾನ ಹೆಬ್ಬಾಳದಲ್ಲಿ ನಡೆಯಲಿದೆ.
7 ಓವರ್ ಗಳ ಈ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ 10 ತಂಡಗಳನ್ನು ಆಯ್ಕೆ ಮಾಡಲಾಗಿದೆ. ಕಪ್ ಗೆದ್ದವರಿಗೆ ನಗದು ಬಹುಮಾನ ಜೊತೆಗೆ ಟ್ರೋಫಿಯನ್ನು ನಿಗದಿಗೊಳಿಸಲಾಗಿದೆ.
ಪಾರ್ಥಸಾರಥಿ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುವ ತಂಡಗಳು ಹೀಗಿವೆ:
1. ಪಾರ್ಥಸಾರಥಿ ಸ್ಮಾಷರ್ಸ್
2. ಜೈಕಾರ್ ಸ್ಟ್ರೈಕರ್ಸ್
3. ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್
4. ಬಂಟಕಲ್ ಬ್ರದರ್ಸ್ ಉಡುಪಿ
5. SCC ಕ್ರಿಕೆಟ್ ಅನಂತ್ ನಗರ
6. ಭುವನೇಂದ್ರ ಬ್ಲಾಸ್ಟರ್ಸ್
7. ಎಸ್ವಿಟಿ ಮುಂಡ್ಕೂರು
8. ತೆಂಕಪೇಟೆ ಫ್ರೆಂಡ್ಸ್
9. ಪಾರ್ಥಸಾರಥಿ ವಾರಿಯರ್ಸ್
10. ಫಸ್ಟ್ ಅಸ್ಸೆಟ್ಜ್ (First Assetz)ಬೆಂಗಳೂರು
ಈ ಟೂರ್ನಮೆಂಟ್ ಜಿ ಎಸ್ ಬಿ ಕ್ರಿಕೆಟ್ ಉತ್ಸಾಹಿಗಳು ಮತ್ತು ಆಟಗಾರರನ್ನು ಒಟ್ಟುಗೂಡಿಸಿ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಸೆಂಚುರಿ ರಿಯಲ್ ಎಸ್ಟೇಟ್ ಈ ಟೂರ್ನಿಯ ಶೀರ್ಷಿಕೆ ಪ್ರಾಯೋಜಕರಾಗಿರುತ್ತಾರೆ ಎಂದು ಟೂರ್ನಿಯ ಆಯೋಜಕರು ಸ್ಪೋರ್ಟ್ಸ್ ಕನ್ನಡ ಕ್ಕೆ ತಿಳಿಸಿರುತ್ತಾರೆ.