
ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಜೀವಂತವಾಗಿರಲು ಪಾಕಿಸ್ತಾನ ತನ್ನ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿತ್ತು.ಸೋಲಿನ ಸರಪಳಿ ಕಳಚಲು ಬಾಬರ್ ಪಡೆ ಬಲಿಷ್ಠ ದಕ್ಷಿಣ ಆಫ್ರಿಕಕ್ಕೆ ಸವಾಲಿನ ಗುರಿ ನೀಡಿತ್ತು.
ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ಕೊನೆ ಕ್ಷಣದಲ್ಲಿ ಪಂದ್ಯ ರೋಚಕವಾಯಿತು. ಪಾಕಿಸ್ತಾನಕ್ಕೆ ಒಂದು ವಿಕೆಟ್ ಅಗತ್ಯವಿತ್ತು.ಆದರೆ ಸೌತ್ ಆಫ್ರಿಕಾದ ಕೇಶವ್ ಮಹಾರಾಜ್ ಒಂದು ಬೌಂಡರಿ ಬಾರಿಸಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗೆ 271 ರನ್‌ಗಳಿಗೆ ತೆಗೆದುಕೊಂಡು ಹೋಗಿ ಪಂದ್ಯವನ್ನು ಗೆದ್ದರು.ಈ ರೋಚಕ ಪಂದ್ಯದಲ್ಲಿ ಪಾಕಿಸ್ತಾನ 1 ವಿಕೆಟ್‌ನಿಂದ ಸೋಲನುಭವಿಸಬೇಕಾಯಿತು. ಪಾಕ್ ತಂಡ ಈಗ ಬಹುತೇಕ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿದೆ.

*ಗೆದ್ದೇ ಬಿಟ್ವಿ ಅಂತಿದ್ದ ಪಾಕಿಸ್ತಾನಕ್ಕೆ ಗುಮ್ಮಿದ ದ. ಆಫ್ರಿಕಾದ ‘ಮಹಾರಾಜ’..!*
ರಣರೋಚಕ ಪಂದ್ಯದಲ್ಲಿ ಹೋರಾಟದ ಪ್ರದರ್ಶನ ನೀಡಿದರೂ ಪಾಕಿಸ್ತಾನಕ್ಕೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಯ ಒಂದು ವಿಕೆಟ್ ಪಡೆಯಲು ವಿಫಲವಾದ ಪಾಕಿಸ್ತಾನ ತಂಡ ಗೆಲುವಿನ ಅತ್ಯಂತ ಸನಿಹಕ್ಕೆ ಬಂದು ಶರಣಾಯಿತು.’ಸೆಮಿ’ ಕನಸು ಕನಸಾಗಿಯೇ ಉಳಿಯಿತು.ಗೆಲುವಿನ ಸನಿಹದಲ್ಲಿದ್ದ ಪಾಕ್‌ಗೆ ದಕ್ಷಿಣ ಆಫ್ರಿಕಾದ ಟೈಲೆಂಡರ್ ಗಳು ಶಾಕ್ ನೀಡಿದರು. ಬಾಬರ್ ಪಡೆಯ ಸೋಲಿನ ಸರಪಳಿ ಮುಂದುವರೆಯುತ್ತಾ ಹೋಯಿತು.

ಸತತ 4ನೇ ಲೀಗ್ ಪಂದ್ಯವನ್ನು ಸೋತಿರುವ ಪಾಕಿಸ್ತಾನದ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಬಹುತೇಕ ಮುಗಿದಂತೆ ಕಾಣುತ್ತಿದೆ. ಪಾಕಿಸ್ತಾನವು ಚೆನ್ನೈನಲ್ಲಿ ಕಳಪೆ ಆಟ ಆಡಿ ಈ ಸ್ಥಳದಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಕಳೆದುಕೊಂಡಿತು. ಸೋಮವಾರ ಚೆನ್ನೈನಲ್ಲಿ ಅಫ್ಘಾನಿಸ್ತಾನ ಕೂಡ ಪಾಕಿಸ್ತಾನವನ್ನು ಸದೆ ಬಡೆದಿದ್ದು ಪಾಕ್ ಪೇಚಾಟ ಮುಂದುವರೆದಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಇದು ಸತತ ನಾಲ್ಕನೇ ಸೋಲು. ಭಾರತ ಮತ್ತು ಆಸ್ಟ್ರೇಲಿಯಾದ ನಂತರ, ಪಾಕಿಸ್ತಾನ ತಂಡವನ್ನು ಅಫ್ಘಾನಿಸ್ತಾನ ಸೋಲಿಸಿತ್ತು. ಮತ್ತು ಈಗ ದಕ್ಷಿಣ ಆಫ್ರಿಕಾ ಹತ್ತಿರ ಬಂದು ಒಂದು ವಿಕೆಟ್‌ನಿಂದ ಸೋಲಿಸಿತು. ಈ ಸೋಲು ಪಾಕಿಸ್ತಾನಕ್ಕೆ ಹೆಚ್ಚು ತೊಂದರೆಯಾಗಿದೆ.ಸೋಲನುಭವಿಸಿದ ಪಾಕಿಸ್ತಾನ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನವು ಇದೀಗ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಿಂದ ಬಹುತೇಕ ಹೊರಗಿದೆ, ಅವರಿಗೆ ಕೇವಲ ಮೂರು ಪಂದ್ಯಗಳು ಉಳಿದಿವೆ.

ನಾವು ಸೆಮಿಸ್ ಗೆ ರೀಚ್ ಆಗ್ತೇವೆ, ನಾವು ಫೈನಲ್ ನಲ್ಲಿ ಮತ್ತೆ ಭಾರತವನ್ನು ಎದುರಿಸಲು ಕಾತರರಾಗಿದ್ದೇವೆ, ಫೈನಲ್ ನಲ್ಲಿ ಮತ್ತೆ ಭೇಟಿಯಾಗೋಣ ಎನ್ನುತ್ತಿದ್ದ ಪಾಕಿಗಳಿಗೆ ಭಾರಿ ಮುಖಭಂಗವಾಗಿದೆ. ಪಾಕಿನ ‘ಸೆಮಿ’ ಕನಸು ಸರ್ವನಾಶವಾಗಿದೆ !


ಸುರೇಶ್ ಭಟ್, ಮೂಲ್ಕಿಟೀಂ ಸ್ಪೋರ್ಟ್ಸ್ ಕನ್ನಡ




