
ಎನ್‌ಐಪಿಎಂ ಮಂಗಳೂರು ಚಾಪ್ಟರ್ ನಿಂದ ‘ಕ್ರಿಕೆಟ್ ಎಕ್ಸ್‌ಪ್ಲೋಶನ್ – 2026’ ಕಾರ್ಪೊರೇಟ್ ಕ್ರಿಕೆಟ್ ಟೂರ್ನಿ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (NIPM) ಮಂಗಳೂರು ಚಾಪ್ಟರ್ ವತಿಯಿಂದ ‘ಕ್ರಿಕೆಟ್ ಎಕ್ಸ್‌ಪ್ಲೋಶನ್ – 2026’ ಕಾರ್ಪೊರೇಟ್ ಕ್ರಿಕೆಟ್ ಟೂರ್ನಿಯನ್ನು ಮಾರ್ಚ್ 7 ಮತ್ತು 8, 2026ರಂದು ಮಂಗಳೂರಿನ ಎನ್‌ಎಂಪಿಎ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ.

ಈ ಟೂರ್ನಿ ಕಾರ್ಪೊರೇಟ್ ಕ್ಷೇತ್ರದ ಉದ್ಯೋಗಿಗಳಿಗೆ ಕ್ರೀಡಾ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಸ್ಥೆಗಳ ತಂಡಗಳು ಭಾಗವಹಿಸಲಿವೆ. “Where Style Meets Slog” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗುತ್ತಿರುವ ಈ ಪಂದ್ಯಾಟವು ಕ್ರೀಡಾ ಮನೋಭಾವನೆ, ತಂಡಭಾವನೆ ಹಾಗೂ ಸಂಸ್ಥೆಗಳ ನಡುವಿನ ಸ್ನೇಹಬಾಂಧವ್ಯವನ್ನು ಉತ್ತೇಜಿಸುವುದೇ ಉದ್ದೇಶವಾಗಿದೆ.


ಪಂದ್ಯಾಟದಲ್ಲಿ ಉನ್ನತ ಮಟ್ಟದ ಸ್ಪರ್ಧಾತ್ಮಕ ಪಂದ್ಯಗಳು ನಡೆಯಲಿದ್ದು, ಭಾಗವಹಿಸುವ ತಂಡಗಳಿಗೆ ಉತ್ತಮ ಸಂಘಟನೆ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕಾರ್ಪೊರೇಟ್ ಕ್ಷೇತ್ರದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗಾಗಿ
ಮನೋಜ್ – 7259395936,
ನಿತಿನ್ – 9964278937,
ಭರತ್ ಪೂಜಾರಿ – 9742954634
ಸಂಪರ್ಕಿಸಬಹುದು.
ಕಾರ್ಯಕ್ರಮದ ಕುರಿತು ಹೆಚ್ಚಿನ ವಿವರಗಳನ್ನು www.nipmmlr.co.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.




