VPL ಆರಂಭಕ್ಕೆ ಕ್ಷಣಗಣನೆ; ಒಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಜಿ ಎಸ್ ಬಿ ಗಳಿಗಾಗಿ ಮೂಲ್ಕಿಯಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಇದೇ ಮೊದಲ ಬಾರಿಗೆ ನಡೆಯುತ್ತಿರುವ ಹರಾಜು ಆಧಾರಿತ ಸರಣಿಯು ಡಿಸೆಂಬರ್ 9ರಿಂದ 2 ದಿನಗಳ ಕಾಲ ನಡೆಯಲಿದೆ. ‘ಒಳಲಂಕೆ ಪ್ರೀಮಿಯರ್ ಲೀಗ್ ‘ (VPL) ಶುರುವಾಗಲಿದ್ದು. ವಿಪಿಎಲ್‌ನ ಟೂರ್ನಮೆಂಟ್ ಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಕಪ್ ಗೆಲ್ಲುವ ಉತ್ಸಾಹದೊಂದಿಗೆ ರಾಜ್ಯದ ಮತ್ತು ಹೊರರಾಜ್ಯದ ತಂಡಗಳು ಅಖಾಡಕ್ಕೆ ಇಳಿದಿವೆ. ಒಟ್ಟು 12 ತಂಡಗಳು ಕಪ್‌ಗಾಗಿ ಹಣಾಹಣಿ ನಡೆಸಲಿವೆ.
ಈಗಾಗಲೇ ನಿಧಾನವಾಗಿ ಮತ್ತೆ ಕ್ರಿಕೆಟ್ (Cricket) ಜ್ವರ ದೇಶದಲ್ಲಿ ಹೆಚ್ಚುತ್ತಿದೆ. ಜಿ.ಎಸ್.ಬಿ ಕ್ರಿಕೆಟ್ ಪ್ರೇಮಿಗಳಿಗಾಗಿ ಸಾಲು ಸಾಲು ಟೂರ್ನಿಗಳು ನಡೆಯುತ್ತಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಈ ಬಾರಿ ರಸದೌತಣ ಎಂಬಂತಾಗಿದೆ. ಇನ್ನೇನು ಕಲವೇ ತಿಂಗಳುಗಳಲ್ಲಿ ಜಿಪಿಎಲ್ ಸಹ ಸನಿಹದಲ್ಲಿದ್ದು, ಇವುಗಳ ನಡುವೆ ಮುಲ್ಕಿಯಲ್ಲಿ ಒಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್ ಸಹ ಘೋಷಣೆ ಆಗಿದ್ದು, ಸಖತ್ ಥ್ರಿಲ್ ನೀಡಲಿದೆ. ಹೌದು, ಇದೇ ತಿಂಗಳ 9ರಿಂದ 2 ದಿನಗಳ ಕಾಲ ವಿಪಿಎಲ್ (VPL) ಟೂರ್ನಿ ಅದ್ಧೂರಿಯಾಗಿ ಜರುಗಲಿದೆ.
ಮಳೆಗಾಲದ ಕಾರಣದಿಂದ ‘ಒಳಲಂಕೆ ಕ್ರಿಕೆಟ್ ಲೀಗ್’ಗೆ ಕೊಂಚ ಬ್ರೇಕ್ ಬಿದ್ದಿತ್ತು. ಹಲವು ದಿನಗಳಿಂದ ವಿಪಿಎಲ್ ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್‌ಗೆ ಈಗ ಮತ್ತೊಮ್ಮೆ ಜಿ ಎಸ್ ಬಿ ಗಳ ಕ್ರಿಕೆಟ್ ಅನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.
*ಆರಂಭವಾಗ್ತಿದೆ ಒಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ :*
ಹೌದು, ಪ್ರತಿ ಬಾರಿಯಂತೆ ಈ ಬಾರಿಯೂ ಮುಲ್ಕಿಯಲ್ಲಿ ಜಿ ಎಸ್ ಬಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಒಳಲಂಕೆ ಪ್ರೀಮಿಯರ್ ಲೀಗ್ (ವಿಪಿಎಲ್) ಆರಂಭವಾಗಲಿದೆ. ಡಿಸೆಂಬರ್ 9 ಮತ್ತು 10ರ ವರೆಗೆ ಡೇ ಅಂಡ್ ನೈಟ್ ಕ್ರಿಕೆಟ್ ನಡೆಯಲಿದ್ದು ಈ ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ಅರ್ಥಪೂರ್ಣವಾಗಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ 12 ಫ್ರಾಂಚೈಸಿಗಳು ಭಾಗಿಯಾಗಲಿದ್ದು, ಪಂದ್ಯಾಕೂಟಕ್ಕೆ ಸಜ್ಜಾಗುತ್ತಿವೆ!
ವಿಪಿಎಲ್ ಪಂದ್ಯಾವಳಿಯಲ್ಲಿ ಬರೋಬ್ಬರಿ 12 ತಂಡಗಳು ಕಾಣಿಸಿಕೊಳ್ಳಲಿವೆ. ಡೆಡ್ಲಿ ಪ್ಯಾಂಥರ್ಸ್ , ವೀರಾಂಜನೇಯ ಕ್ರಿಕೆಟರ್ಸ್ ಕಾಪು ,ಆಲ್ಫಾ ಟ್ರೂಪರ್ಸ್,ಕೆದಿಂಜೆ ರಾಯಲ್ ಟೈಗರ್ಸ್,ಮಲ್ಪೆ ಯುನೈಟೆಡ್, ಪೇಟೆ ಶ್ರೀ ವೆಂಕಟರಮಣ ಕ್ರಿಕೆಟರ್ಸ್,ರೈಸಿಂಗ್ ಸ್ಟಾರ್ಸ್ ಮಂಗಳೂರು,ಉಡುಪಿ ಬ್ಲಾಸ್ಟರ್ಸ್, ಕೊಡಿಯಾಲ್ ಸೂಪರ್ ಕಿಂಗ್ಸ್ ,ಕೊಂಕಣ್ ಎಕ್ಸ್ಪ್ರೆಸ್ ಕೋಟೇಶ್ವರ, ಮಾಲ್ಸಿ ಸ್ಮಾಶರ್ಸ್, ಇರ್ವತ್ತೂರ್ ಸ್ಪೋರ್ಟ್ಸ್ ಕ್ಲಬ್ ತಂಡಗಳು ವಿಪಿಎಲ್ ಟೂರ್ನಿಯಲ್ಲಿ ಸ್ಪರ್ಧಿಸಲಿವೆ. ಒಟ್ಟು 12 ತಂಡಗಳು ಈ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದು, ಈ ಹನ್ನೆರಡು ತಂಡಗಳಿಗೆ ಮಾಲೀಕರುಗಳನ್ನು ಒಳಗೊಂಡಿದೆ. ಈ ಟೂರ್ನಿಯಿಂದ ಬಂದಂತಹ ಹಣವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.
ವಿವಿಧ VPL ಫ್ರಾಂಚೈಸ್ ತಂಡಗಳಿಗೆ ಆಯ್ಕೆಯಾದ ಎಲ್ಲಾ ಆಟಗಾರರಿಗೆ ಸ್ಪೋರ್ಟ್ಸ್ ಕನ್ನಡದ ಪರವಾಗಿ ಅಭಿನಂದನೆಗಳು!
ವೊಳಲಂಕೆ ಪ್ರೀಮಿಯರ್ ಲೀಗ್ ಕಪ್‌ಗಾಗಿ ಉತ್ಸಾಹವು ಪ್ರಾರಂಭವಾಗಲಿ!!
ಸುರೇಶ್ ಭಟ್, ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಹವ್ಯಾಸಿ ಅಂಕಣಕಾರ