
ಉಡುಪಿಯಲ್ಲಿ ಮೊಬೈಲ್ ಪ್ರೀಮಿಯರ್ ಲೀಗ್ 2025-MPL ಸೀಸನ್ 5
ದಕ್ಷಿಣ ಕನ್ನಡ ಮತ್ತು ಉಡುಪಿ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ ಹಾಗೂ ಮೊಬೈಲ್ ರಿಟೈಲರ್ಸ್ ಉಡುಪಿ MPL ಸೀಸನ್ 5 ಎನ್ನುವ ಮೊಬೈಲ್ ಪ್ರೀಮಿಯರ್ ಲೀಗ್ ಫ್ಲಡ್ ಲೈಟ್ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಂಡಿದೆ. ಇದು ಉಡುಪಿಯ ನೇಜಾರು ಮೈದಾನದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಿಯಾಗಿದ್ದು, ಫೆಬ್ರವರಿ 25 ಮತ್ತು 26 ರಂದು ನಡೆಯಲಿದೆ.

ಮೊಬೈಲ್ ಫೀಲ್ಡ್ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ಲೀಗ್ ಪಂದ್ಯಾವಳಿಯು ನಡೆಯಲಿದ್ದು ಉಭಯ ಜಿಲ್ಲೆಯ ಮೊಬೈಲ್ ವ್ಯಾಪಾರಿಗಳು ಮತ್ತು ಆ ಕ್ಷೇತದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಬಹಳಷ್ಟು ಉತ್ಸುಹಕರಾಗಿದ್ದಾರೆ.

ಫೆಬ್ರವರಿ 25 ರ ಪಂದ್ಯಗಳು ಉಡುಪಿ ಜಿಲ್ಲೆಯ ಮೊಬೈಲ್ ರಿಟೈಲರ್ಸ್ ಮತ್ತು ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ಗೆ ಸಂಬಂಧಪಟ್ಟ ಉದ್ಯೋಗಿಗಳಿಗಾಗಿದ್ದು ಟೂರ್ನಮೆಂಟ್ ವಿಜೇತರಿಗೆ ರೂ.50K ನಗದು ಮತ್ತು ಪಾರಿತೋಷಕ ನೀಡಲಾಗುವುದು. ರನ್ನರ್ ಅಪ್ ತಂಡ ರೂ.30K ನಗದು ಮತ್ತು ಪ್ರಶಸ್ತಿ ಪಡೆಯಲಿದೆ. ಬೆಸ್ಟ್ ಬ್ಯಾಟ್ಸಮನ್, ಬೆಸ್ಟ್ ಬೌಲರ್, ಮ್ಯಾನ್ ಆ ದಿ ಸೀರೀಸ್ ಮತ್ತು ಇನ್ನೂ ಅನೇಕ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಸರಣಿ ಶ್ರೇಷ್ಠ ಆಟಗಾರನಿಗೆ ಬೈಸಿಕಲ್ ಅನ್ನು ಕೊಡ ಮಾಡಲಾಗುವುದು.
26 ರಂದು ನಡೆಯುವ ಪಂದ್ಯಾಕೂಟವು DKUMRA (Dakshina Kannada and Udupi Mobile Retailers Association) ಸದಸ್ಯರಿಗೆ ನಡೆಸಲಾಗುವುದು. ಇದರಲ್ಲಿ ವಿನ್ನರ್ಸ್ ಮತ್ತೆ ರನ್ನರ್ಸ್ ತಂಡಕ್ಕೆ ಕ್ರಮವಾಗಿ 20,000 ಮತ್ತು 10,000 ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ಇರಲಿದೆ.
ಪ್ರತಿ ಪಂದ್ಯವು ಕೂಡ ನಿಗದಿತ ಐದು ಓವರುಗಳ ಪಂದ್ಯವಾಗಿರುತ್ತದೆ. ಎಲ್ಲಾ ತಂಡಗಳಿಗೂ ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗುತ್ತದೆ. ತಂಡದ ಆಟಗಾರರಿಗೆ ಜೆರ್ಸಿ, ಊಟ ಉಪಹಾರವನ್ನು ಆಯೋಜಕರು ವ್ಯವಸ್ಥೆ ಮಾಡಲಿದ್ದಾರೆ.ಈ ಟೂರ್ನಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪೋಸ್ಟರ್ ನಲ್ಲಿ ನೀಡಲಾಗಿರುವ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.
ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡದಲ್ಲಿ ಈ ಟೂರ್ನಮೆಂಟ್ ಬಿತ್ತರಗೊಳ್ಳಲಿದೆ.




