ಕ್ರಿಕೆಟ್ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

-

- Advertisment -spot_img

 

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

Maharaja Trophy: ಜೂನ್‌ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ

ಐದನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಈ ಬಾರಿಯ ಮಹಾರಾಜ ಟ್ರೋಫಿ ಪಂದ್ಯಗಳು ರಾಜ್ಯದ ಮೂರು ನಗರಗಳಲ್ಲಿ ನಡೆಯಲಿವೆ. ಉದ್ಘಾಟನಾ ಪಂದ್ಯ ಮೈಸೂರಿನಲ್ಲಿ ನಡೆಯಲಿದ್ದು, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ ತಂಡಗಳು ಕಾದಾಟ ನಡೆಸಲಿವೆ. ಜೂನ್ 20 ರಿಂದ ಆರಂಭವಾಗಲಿರುವ ಟಿ20 ಟೂರ್ನಿಯ ಫೈನಲ್ ಪಂದ್ಯ ಜುಲೈ 12 ರಂದು ನಡೆಯಲಿದೆ.

ಆರಂಭದಲ್ಲಿ ಮಹಾರಾಜ ಟ್ರೋಫಿ ಮೈಸೂರಿನಲ್ಲಿ ಆರಂಭವಾಗಲಿದ್ದು, ಜೂನ್‌ 25ರ ವರೆಗೆ ನಡೆಯಲಿದೆ. ಇನ್ನು ಹುಬ್ಬಳ್ಳಿಯಲ್ಲಿ ಜೂನ್‌ 27 ರಿಂದ ಜುಲೈ 3ರ ವರೆಗೆ ನಡೆಯಲಿದೆ. ಬೆಂಗಳೂರಿನಲ್ಲಿ ಜುಲೈ 5 ರಿಂದ ಪಂದ್ಯ ನಡೆಯಲಿದೆ. ಜುಲೈ 9 ರಂದು ಎಲಿಮಿನೇಟರ್‌ ಹಾಗೂ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಜುಲೈ 10 ರಂದು ಕ್ವಾಲಿಫೈಯರ್ 2, ಜುಲೈ 12 ರಂದು ಫೈನಲ್‌ ಪಂದ್ಯ ನಡೆಯಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಪ್ರತಿಷ್ಠಿತ ಮಹಾರಾಜ ಟ್ರೋಫಿ ಟಿ-20 ಟೂರ್ನಿಯ 2026ನೇ ಆವೃತ್ತಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಟೂರ್ನಿ ಅತ್ಯುತ್ತಮ ವೇದಿಕೆಯಾಗಿ ಪರಿಣಮಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ಮಹಾರಾಜ ಟ್ರೋಫಿ ಕರ್ನಾಟಕ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗುವ ಯುವ ಆಟಗಾರರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಈ ಟೂರ್ನಿಯ ಮೂಲಕ ಅವಕಾಶ ಪಡೆದಿದ್ದಾರೆ. ಅನೇಕ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿರುವುದು ಈ ಟೂರ್ನಿಯ ಯಶಸ್ಸಿಗೆ ಸಾಕ್ಷಿಯಾಗಿದೆ.

2026ರ ಆವೃತ್ತಿಯಲ್ಲೂ ರೋಚಕ ಪಂದ್ಯಗಳು, ಬಲಿಷ್ಠ ತಂಡಗಳ ನಡುವಿನ ಪೈಪೋಟಿ ಹಾಗೂ ಯುವ ಪ್ರತಿಭೆಗಳ ಮಿಂಚಿನ ಪ್ರದರ್ಶನ ನಿರೀಕ್ಷಿಸಲಾಗಿದೆ. ಟೂರ್ನಿಯು ಕೇವಲ ಕ್ರಿಕೆಟ್ ಪಂದ್ಯಾವಳಿಯಾಗಿರದೆ, ರಾಜ್ಯದ ಕ್ರೀಡಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವ ಉತ್ಸವವಾಗಿ ರೂಪುಗೊಂಡಿದೆ.

ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣಗಳಲ್ಲಿ ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ಪಂದ್ಯಗಳನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಮಹಾರಾಜ ಟ್ರೋಫಿ ಮತ್ತೊಮ್ಮೆ ದೊಡ್ಡ ಅವಕಾಶವನ್ನು ಒದಗಿಸಲಿದೆ.

ಕರ್ನಾಟಕ ಕ್ರಿಕೆಟ್‌ನ ಭವಿಷ್ಯದ ತಾರೆಗಳನ್ನು ಗುರುತಿಸುವ ವೇದಿಕೆಯಾಗಿರುವ ಮಹಾರಾಜ ಟ್ರೋಫಿ 2026 ಯಶಸ್ವಿಯಾಗಿ ನಡೆಯಲಿ ಎಂಬುದು ಕ್ರೀಡಾಭಿಮಾನಿಗಳ ಆಶಯವಾಗಿದೆ.

ಮಹಾರಾಜ ಟ್ರೋಫಿ ವೇಳಾಪಟ್ಟಿ

ಮೈಸೂರಿನಲ್ಲಿ ನಡೆಯಲಿರುವ ಪಂದ್ಯಗಳು

ಜೂನ್ 20 – ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ (2:30PM)
ಶಿವಮೊಗ್ಗ ಯೋಧಾಸ್ vs ಮೈಸೂರು ವಾರಿಯರ್ಸ್ (7:00PM)

ಜೂನ್ 21 – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಹುಬ್ಬಳ್ಳಿ ಟೈಗರ್ಸ್ (2:30PM)
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಯೋಧಾಸ್ (7:00PM)

22 ಜೂನ್ – ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ (2:30PM)
ಗುಲ್ಬರ್ಗಾ ಮಿಸ್ಟಿಕ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು (7:00PM)

23 ಜೂನ್ – ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಯೋಧಾಸ್ (2:30PM)
ಮೈಸೂರು ವಾರಿಯರ್ಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (7:00PM)

24 ಜೂನ್ – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (2:30PM)
ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಯೋಧಾಸ್ (7:00PM)

25 ಜೂನ್ – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಮೈಸೂರು ವಾರಿಯರ್ಸ್ (2:30PM)
ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ (7:00PM)

ಹುಬ್ಬಳ್ಳಿಯಲ್ಲಿನ ಪಂದ್ಯಗಳ ವೇಳಾಪಟ್ಟಿ

27 ಜೂನ್ – ಶಿವಮೊಗ್ಗ ಯೋಧಾಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (2:30PM)
ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ (7:00PM)

ಜೂನ್ 28 – ಶಿವಮೊಗ್ಗ ಯೋಧಾಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು (7:00PM)

ಜೂನ್ 29 – ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್ (2:30PM)
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು (7:00PM)

ಜೂನ್ 30 – ಶಿವಮೊಗ್ಗ ಯೋಧಾಸ್ vs ಗುಲ್ಬರ್ಗ ಮಿಸ್ಟಿಕ್ಸ್ (2:30PM)
ಮೈಸೂರು ವಾರಿಯರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು (7:00PM)

ಜುಲೈ 1 – ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್ (7:00PM)

ಜುಲೈ 2 – ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್ (2:30PM)
ಕೋಸ್ಟಲ್ ಕಿಂಗ್ಸ್ ಮಂಗಳೂರು vs ಶಿವಮೊಗ್ಗ ಯೋಧಾಸ್ (7:00PM)

ಜುಲೈ 3 – ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್ (2:30PM)
ಹುಬ್ಬಳ್ಳಿ ಟೈಗರ್ಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (7:00PM)

ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳು

ಜುಲೈ 5 – ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್ (2:30PM)
ಶಿವಮೊಗ್ಗ ಯೋಧಾಸ್ vs ಹುಬ್ಬಳ್ಳಿ ಟೈಗರ್ಸ್ (7:00PM)

ಜುಲೈ 6 – ಹುಬ್ಬಳ್ಳಿ ಟೈಗರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು (2:30PM)
ಗುಲ್ಬರ್ಗ ಮಿಸ್ಟಿಕ್ಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (7:00PM)

ಜುಲೈ 7 – ಮೈಸೂರು ವಾರಿಯರ್ಸ್ vs ಶಿವಮೊಗ್ಗ ಯೋಧಾಸ್ (7:00PM)

ಜುಲೈ 8 – ಕೋಸ್ಟಲ್ ಕಿಂಗ್ಸ್ ಮಂಗಳೂರು vs ಗುಲ್ಬರ್ಗ ಮಿಸ್ಟಿಕ್ಸ್ (7:00PM)

ಜುಲೈ 9 – ಎಲಿಮಿನೇಟರ್ (2:30PM)
ಕ್ವಾಲಿಫೈಯರ್ 1 (ಸಂಜೆ 7:00PM)

ಜುಲೈ 10 – ಕ್ವಾಲಿಫೈಯರ್ 2 (7:00PM)

ಜುಲೈ 12 – ಫೈನಲ್ (7:00PM)

LEAVE A REPLY

Please enter your comment!
Please enter your name here

16 + ten =

Latest news

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉಡುಪಿ ಜಿಲ್ಲೆಯ ಮಲ್ಪೆಯ...
- Advertisement -spot_imgspot_img

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ ಕಾಮಧೇನು‌ ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ನಂಚಾರು ಇಲ್ಲಿರುವ ಗೋವುಗಳಿಗಾಗಿ 12 ನೇ...

ವಿದ್ಯಾ ಬೆಳಕು-ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ವಿತರಣೆ

ವಿದ್ಯಾ ಬೆಳಕು-ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ವಿತರಣೆ ಉಡುಪಿ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ಸ್ ಪಿತ್ರೋಡಿ(ರಿ) ಇವರ ವತಿಯಿಂದ ವಿದ್ಯಾ ಬೆಳಕು...

Must read

- Advertisement -spot_imgspot_img

You might also likeRELATED
Recommended to you