Categories
ಸ್ಪೋರ್ಟ್ಸ್

ಮನಬಿಚ್ಚಿ ಮಾತನಾಡಿದ ಗುರುರಾಜ್ ಪೂಜಾರಿ: ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪದಕ ಗೆದ್ದವರಿಗೆ ತೀರಾ ಕಡಿಮೆ ಪ್ರೋತ್ಸಾಹ ಧನ

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ತೀರಾ  ಕಡಿಮೆ ಪ್ರೋತ್ಸಾಹಧನ ಘೋಷಣೆ ಮಾಡಲಾಗುತ್ತಿದೆ ಎಂದು ಗುರುರಾಜ್ ತಮ್ಮ ನೋವನ್ನು ಹೇಳಿಕೊಂಡರು. ಹರ್ಯಾಣ, ಪಂಜಾಬ್ ,ಆಂಧ್ರಪ್ರದೇಶದ ಇನ್ನಿತರೆ ರಾಜ್ಯಗಳಲ್ಲಿ ಕಂಚಿನ ಪದಕ ಗೆದ್ದವರಿಗೂ 40 ರಿಂದ 50 ಲಕ್ಷ ರೂ. ಈಗಾಗಲೇ ಪದಕ ಗೆದ್ದವರಿಗೆ ಘೋಷಣೆ ಮಾಡಲಾಗಿದೆ.
ಆದರೆ ಕರ್ನಾಟಕ ಸರಕಾರ ಮಾತ್ರ ಕಂಚು ಗೆದ್ದ ನನಗೆ ಕೇವಲ ಎಂಟು ಲಕ್ಷ ರೂ. ಘೋಷಣೆ ಮಾಡಿದೆ ಇಲ್ಲಿ ಹಣದ ಆಸೆ ಅಲ್ಲ ನನಗೆ ಪ್ರತಿ ತಿಂಗಳು ದೇಹವನ್ನು ದಂಡಿಸಿ ಅಭ್ಯಾಸಿಸಲು ಮೂವತ್ತರಿಂದ ನಲವತ್ತು ಸಾವಿರ ರೂಪಾಯಿ ವೆಚ್ಚವಾಗುತ್ತದೆ ಈ ಕಾರಣದಿಂದ  ಹೆಚ್ಚಿನ ಸಹಕಾರವನ್ನು ( ಹೆಚ್ಚಿನ ಮೊತ್ತವನ್ನು ) ನಾನು ಸರಕಾರದ ಕಡೆಯಿಂದ ಬಯಸುತ್ತೇನೆ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೇಟ್ ಲಿಫ್ಟಿಂಗ್ ತರಬೇತಿ ಪಡೆಯುವುದು ಸುಲಭದ ಹಾದಿಯಲ್ಲ ತುಂಬಾ ದುಬಾರಿ ಆಗಿದೆ. ಇದಕ್ಕೆ ತಿಂಗಳಿಗೆ ಸಾಕಷ್ಟು ಖರ್ಚು ತಗಲುತ್ತದೆ. ಇದಕ್ಕಾಗಿ ಪ್ರೋತ್ಸಾಹಧನವನ್ನು ನಮ್ಮ ಸರ್ಕಾರ ಹೆಚ್ಚು ನೀಡಿದರೆ ಹೆಚ್ಚು ತರಬೇತಿ ಪಡೆದು ಹೆಚ್ಚಿನ ಪದಕಗಳನ್ನು ಗಳಿಸಲು ಅನುಕೂಲವಾಗುತ್ತದೆ ಎಂದು ನೊಂದು ನುಡಿದರು
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯ ತುಂಬಾ ಹಿಂದೆ ಇದೆ. ಹರ್ಯಾಣ, ಪಂಜಾಬ್ ರಾಜ್ಯಗಳಲ್ಲಿ ಕಂಚು ಪದಕ ಗೆದ್ದವರಿಗೆ ನಲವತ್ತ ರಿಂದ ಐವತ್ತು ಲಕ್ಷ ರೂ. ಘೋಷಣೆ ಮಾಡಲಾಗಿದೆ. ಕರ್ನಾಟಕ ಸರಕಾರ ಕಂಚು ಗೆದ್ದ ನನಗೆ ಕೇವಲ ಎಂಟು ಲಕ್ಷ ರೂ. ಘೋಷಣೆ ಮಾಡಿದೆ ಗೆದ್ದ ಖಷಿ ಇದೆ ಬಿಟ್ಟರೆ ನಮ್ಮ ಸರ್ಕಾರ ಕ್ರೀಡಾಪಟುಗಳಿಗೆ ಪ್ರೋತ್ಸಹಿಸುತ್ತಿರುವುದನ್ನು ನೋಡಿದರೆ ನಮ್ಮ ಸ್ಫೂರ್ತಿ ಕುಗ್ಗಿ ಹೋಗುತ್ತದೆ ಎಂದರು ಇನ್ನು ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡುತ್ತೇನೆ. ಇದರಿಂದ ಕ್ರೀಡಾ ಕ್ಷೇತ್ರದಲ್ಲಿ ಇನ್ನುಷ್ಟು ಸಾಧನೆ ಮಾಡಿ ದೇಶ, ಕರ್ನಾಟಕಕ್ಕೆ ಪದಕ ತರಲು ಸಾಧ್ಯವಾಗುತ್ತದೆ ಎಂದರು.
ಪ್ರಸ್ತುತ ನಾನು ಚಂಢೀಗಡದ ಏರ್‌ಪೋರ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕಳೆದ ಎಂಟು ವರ್ಷಗಳಿಂದ ಊರು ಬಿಟ್ಟು ಅಲ್ಲಿ ಇರುವುದರಿಂದ ತುಂಬಾ ಸಮಸ್ಯೆ ಆಗುತ್ತಿದೆ. ಆದುದರಿಂದ ಕರ್ನಾಟಕ ಸರಕಾರ ನನಗೆ ರಾಜ್ಯ ದಲ್ಲಿಯೇ ಉದ್ಯೋಗ ನೀಡಿದರೆ ಹೆಚ್ಚಿನ ಸಹಾಯ ಮಾಡಿದಂತಾಗುತ್ತದೆ ಇದರಿಂದ ನನ್ನ ತವರು ನೆಲದಲ್ಲಿಯೆ ತರಭೇತಿ ಪಡೆಯಲು ಸುಲಭವಾಗುತ್ತದೆ. ಅಲ್ಲದೆ ಕುಟುಂಬಕ್ಕೂ ಹತ್ತಿರದಲ್ಲಿದ್ದು ಬೆಂಬಲವಾಗಿರಲು ಸಹಾಯವಾಗುತ್ತದೆ ಎಂದು ಅವರು ಮನವಿ ಮಾಡಿದರು.
ಉಡುಪಿ ಜಿಲ್ಲೆಗೆ ಸುಸಜ್ಜಿತ ಕ್ರೀಡಾಂಗಣ ಹಾಗೂ ವೇಟ್ ಲಿಫ್ಟಿಂಗ್ ಸೆಟ್ ಬೇಕಾಗಿದೆ. ಒಲಪಿಂಕ್ ಗುಣಮಟ್ಟದ ಒಂದು ಜಿಮ್ ಇದ್ದರೆ ವೇಟ್ ಲಿಫ್ಟಿಂಗ್ ನಲ್ಲಿ ಸಾಧನೆ ಮಾಡಲು ಇಲ್ಲಿನ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಈ ಮೂಲಕ ಜಿಲ್ಲೆಯ ಮಕ್ಕಳಿಗೆ ವೇಟ್ಹ್ ಲಿಫ್ಟಿಂಗ್ ಕ್ರೀಡೆಯನ್ನು ಪರಿಚಯಿಸಬಹು ದಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿ ಸಾಧನೆ ಮಾಡಬಹುದಾಗಿದೆ ಎಂದರು.
*ಪದಕ ವಿಜೇತರಿಗೆ ಬೆಲೆಯೇ ಇಲ್ಲ!*
ರಾಜ್ಯ ಸರಕಾರ ಕ್ರೀಡೆಯ ಬಗ್ಗೆ ಸಾಕಷ್ಟು ನಿರ್ಲಕ್ಷ್ಯ ತೋರುತ್ತಿದೆ. ಅಂತಾರಾಷ್ಟ್ರೀಯ  ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹಧನ ವನ್ನು ಒಂದು ವರ್ಷದೊಳಗೆ ನೀಡುವ ಬದಲು ಎರಡು, ಮೂರು ವರ್ಷಗಳಿಗೆ ಮುಂದೂಡಲಾಗುತ್ತಿದೆ ಎಂದು ಗುರುರಾಜ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಪದಕ ವಿಜೇತರಿಗೆ ಇಲ್ಲಿ ಬೆಲೆಯೇ ಇಲ್ಲ. ಆದುದರಿಂದ ಸರಕಾರ ಅಂತಾರಾಷ್ಟ್ರೀಯ ಪದಕ ವಿಜೇತರಿಗೆ ಪ್ರೋತ್ಸಾಹಧನವನ್ನು ಘೋಷಣೆ ಮಾಡಿ ಕೂಡಲೇ ನೀಡಬೇಕು. ಇದರಿಂದ ಮುಂದಿನ ಕ್ರೀಡಾಕೂಟಕ್ಕೆ ಸಜ್ಜಾಗಲು ಸಹಾಯವಾಗುತ್ತದೆ ಎಂದು ಗುರುರಾಜ್ ಪೂಜಾರಿ ನೊಂದು ನುಡಿದರು.
   ಹೌದು ಯಾಕೆ ನಮ್ಮ ರಾಜ್ಯಸರ್ಕಾರ ಕ್ರೀಡಾ ಪಟುಗಳನ್ನು ಕಡೆಗಣಿಸುತ್ತಿದೆ ಇನ್ನಾದರು ಎಚ್ಚೆತ್ತುಕೊಂಡು ಕ್ರೀಡಾ ಪಟುಗಳಿಗೆ ಸ್ಫೂರ್ತಿ ತುಂಬಿ ಪ್ರತಿ ಜಿಲ್ಲೆ ತಾಲ್ಲೂಕು ಮಟ್ಟದಲ್ಲೂ ತರಬೇತಿ ಪಡೆಯಲು ಯುವ ಕ್ರೀಡಾಪಟುಗಳಿಗೆ ಎಲ್ಲಾ ಪ್ರತಿ ಕ್ರೀಡೆಗೆ ಸಂಭಂದಿಸಿದ ವ್ಯವಸ್ಥೆಯನ್ನು ಮಾಡಿಕೊಟ್ಟು  ಹೆಚ್ಚು ಪದಕ ಗೆಲ್ಲುವ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ದೇಶ ರಾರಾಜಿಸುವಂತಾಗಲಿ ಎನ್ನುವುದು ನಮ್ಮೆಲ್ಲರ ಅಶಯಾವಾಗಿದೆ…

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

seven − 2 =