Categories
ಕ್ರಿಕೆಟ್

ನಟ ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕಳುಹಿಸಿದ ರಾಜಸ್ಥಾನ ರಾಯಲ್ಸ್ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್‌‌ ಬಟ್ಲರ್

ಐಪಿಎಲ್‌ನ ಹೆಸರಾಂತ ತಂಡಗಳಲ್ಲಿ ಒಂದಾದ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ  ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರು ಭಾರತದ ಅದರಲ್ಲೂ ಕನ್ನಡದ ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್‌ಗೆ ತಾವು ಈ ಸಾಲಿನ ಐಪಿಎಲ್ ನಲ್ಲಿ ಆಡಿದ ಬ್ಯಾಟ್ ಅನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.
2022ರ ಐಪಿಎಲ್‌ನ ಟೂರ್ನಿಯಲ್ಲಿ ಒಂದು ತಂಡದ ಮತ್ತು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಜೋಸ್‌‌ ಬಟ್ಲರ್ ಈ ಅದ್ಭುತ ಆಟಕ್ಕಾಗಿಯೆ ಜೋಸ್ ಬಟ್ಲರ್‌ಗೆ ಆರೆಂಜ್ ಕ್ಯಾಪ್ ಸಿಕ್ಕಿದೆ.
ಪ್ರತಿ ಪಂದ್ಯದಲ್ಲೂ ಅದ್ಭುತ ಆಟವಾಡುವ ಮುಖಾಂತರ  ತಮ್ಮ ತಂಡವನ್ನು ಫೈನಲ್ ಹಂತದವರೆಗೂ ತೆಗೆದುಕೊಂಡು ಹೋದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕ್ರಿಕೆಟ್ ಪ್ರೀಯರ ನೆಚ್ಚಿನ ಆಟಗಾರರಾಗಿದ್ದಾರೆ ಅವರು 2022ರ ಐಪಿಎಲ್‌ನಲ್ಲಿ ತಾವು ಆಡಿದ್ದ ಬ್ಯಾಟ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ..!!
ಸುದೀಪ್‌ಗೆ ಕಳುಹಿಸಿದ ಬ್ಯಾಟ್‌ನಲ್ಲಿ ಜೋಸ್ ಬಟ್ಲರ್ ಅವರ ಸಹಿ ಕೂಡ ಇದೆ. ಕಿಚ್ಚ ಸುದೀಪ್ ಬಟ್ಲರ್ ಅವರ ಆಭಿಮಾನಿಯಾಗಿದ್ದಾರೆ . ಬಟ್ಲರ್ ಉಡುಗೊರೆಯಾಗಿ ಕಳುಹಿಸಿದ ಬ್ಯಾಟ್ ತಮ್ಮ ಕೈ ಸೇರುತ್ತಿದ್ದಂತೆ
 ಈ ಕುರಿತಾಗಿ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಬಟ್ಲರ್ ಗೆ ಧನ್ಯವಾದ ತಿಳಿಸಿದ್ದಾರೆ ಸುದೀಪ್.
*ರಾಜಸ್ಥಾನ ರಾಯಲ್ಸ್ ತಂಡಕ್ಕೆ ಥ್ಯಾಂಕ್ಸ್*
ಇದೇ ವೇಳೆ ಬಟ್ಲರ್ ಆಡಿದ ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಸಹ ಆಟಗಾರ ಕನ್ನಡಿಗ ಕೆಸಿ ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಕೂಡ ಸುದೀಪ್ ಧನ್ಯವಾದ ತಿಳಿಸಿದ್ದಾರೆ.
ಬಟ್ಲರ್ ಉಡುಗೊರೆಯಾಗಿ ಕಳುಹಿಸಿಕೊಟ್ಟ ಈ ಬ್ಯಾಟ್ ಅನ್ನು ತಮ್ಮ ಜೊತೆಯಲ್ಲಿ ಕೊನೆಯವರೆಗೂ ಕಾಯ್ದಿರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು ಮತ್ತು ನಾನು ಇದನ್ನು ನಿರೀಕ್ಷೆಯೆ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ರಾಜಸ್ಥಾನ ರಾಯಲ್ಸ್ ತಂಡದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ ಎಂದಿದ್ದಾರೆ.
*”ಸಹಿ ಮಾಡಿದ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಧನ್ಯವಾದಗಳು”*
ಈ ವಿಡಿಯೋ ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ. ವೈಯಕ್ತಿಕವಾಗಿ ನೀವು ಸಹಿ ಮಾಡಿದ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಧನ್ಯವಾದಗಳು. ಇದನ್ನು ನಾನು ಇಂದು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ಎಂದು ಸುದೀಪ್ ಟ್ವಿಟ್ಟರ್ ವಿಡಿಯೋದಲ್ಲಿ ಸಂಭ್ರಮಪಟ್ಟಿದ್ದಾರೆ.
ಈ ಸಂದರ್ಭದಲ್ಲಿ 2022ರ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಅವರ ಅತ್ಯುತ್ತಮ ಆಟದ ಬಗ್ಗೆಯೂ ಸುದೀಪ್ ಮೆಚ್ಚುಗೆ ತಿಳಿಸಿದ್ದು, ಖಂಡಿತವಾಗಿ ನಾನು ಈ ಬ್ಯಾಟ್ ಅನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ ಎಂದು ಅಭಿನಯ ಚಕ್ರವರ್ತಿ ಸುದೀಪ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
*ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡದ ನಾಯಕ*
ಕ್ರಿಕೆಟ್‌ ಎಂದರೆ ನಟ ಕಿಚ್ಚ ಸುದೀಪ್‌ಗೆ ತುಂಬಾ ಅಚ್ಚುಮೆಚ್ಚು. ಬಾಲ್ಯದಿಂದಲೂ ಕ್ರಿಕೆಟ್‌ನ ಜೊತೆ ಉತ್ತಮ ನಂಟು ಹೊಂದಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಾರೆ. ಅಲ್ಲದೇ ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸಿದ್ದಾರೆ.
ಸುದೀಪ್ ಅವರ ಮುಂದಿನ ಚಿತ್ರ ವಿಕ್ರಾಂತ್ ರೋಣ ಬಿಡುಗಡೆಯ ಹಂತದಲ್ಲಿದೆ. ಇತ್ತೀಚೆಗೆ ‘ಕ್ರಿಕೆಟ್ ಕಾಶಿ’ ಎಂದೇ ಕರೆಯಲ್ಪಡುವ ಲಂಡನ್‌ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನ ‘ಇಟ್ಟಿಗೆ’ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು ಇದೆ ಅನ್ನುವ ವಿಚಾರವನ್ನು ಸ್ವತಃ ನಟ ಕಿಚ್ಚ ಸುದೀಪ್ ಅವರೇ ಬಹಿರಂಗಪಡಿಸಿದ್ದಾರೆ.
*ಲಾರ್ಡ್ಸ್ ಸ್ಟೇಡಿಯಂ ಗೋಡೆಯ ಇಟ್ಟಿಗೆ ಮೇಲೆ ಸುದೀಪ್ ಹೆಸರು*
ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದ ನಟ ಕಿಚ್ಚ ಸುದೀಪ್, ತಮ್ಮ ಹೆಸರು ಕ್ರಿಕೆಟ್ ಕಾಶಿ ಲಾರ್ಡ್ಸ್ ಸ್ಟೇಡಿಯಂ ಗೋಡೆಯ ಇಟ್ಟಿಗೆ ಮೇಲಿರುವ ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೀಗೆ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಮಹತ್ವದ ಮಾಹಿತಿಯನ್ನು ರಿವೀಲ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಯಾಗಿದೆ
ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಆಟಗಾರನೊಬ್ಬ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಮಾಡಿರುವುದು ತುಂಬಾ ವಿಶೇಷವಾಗಿದೆ ಹಾಗೂ ಕ್ರಿಕೆಟ್ ಮೇಲೆ ನಟ ಕಿಚ್ಚ ಸುದೀಪ್‌ಗೆ ಇರುವ ಅಗಾಧವಾದ ಪ್ರೀತಿ ಎಷ್ಟಿದೆ ಎಂದು  ಗೊತ್ತಾಗುತ್ತದೆ.
ಅದೇನೇ ಇರಲಿ ಬಟ್ಲರ್ ಈ ಸಾಲಿನಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಆರಂಭಿಕ ಆಟಗಾರರಾಗಿ ಐಪಿಎಲ್ ನಲ್ಲಿ ಭರ್ಜರಿಯಾಗಿ ಆಡಿದ ಬ್ಯಾಟ್ ಕಿಚ್ಚಾ ಸುದೀಪ್ ಕೈ ಸೇರಿರುವುದು ಹೆಮ್ಮೆಯ ವಿಷಯವೆ.
*ಜೋಸ್ ಬಟ್ಲರ್ ಗೆ ಧನ್ಯವಾದ ಸಮರ್ಪಿಸಿದ ನಟ ಕಿಚ್ಚ ಸುದೀಪ್*
ವೀಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಹಾಗೂ ಶೇರ್ ಮಾಡಿ.
https://youtu.be/nF-ubhq6jQw

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

19 − one =