ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಿಸಲು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇಂದು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ದಾವಣಗೆರೆಯಲ್ಲಿ ಸಾವಿರಾರು ಕ್ರೀಡಾಪಟುಗಳಿದ್ದು, ಅರ್ಹ ಬಡ ಕ್ರೀಡಾಪಟುಗಳಿಗೆ ಜಯಪ್ರಕಾಶ ಗೌಡ ಆಹಾರ ಕಿಟ್‍ಗಳನ್ನು ನೀಡುವ ಮೂಲಕ ಸ್ಪಂದಿಸುತ್ತಿರುವುದು ಶ್ಲಾಘನೀಯವೆಂದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಉಪಾಧ್ಯಕ್ಷರುಗಳಾದ ಶಿವಗಂಗಾ ಶ್ರೀನಿವಾಸ್, ಮಹಾದೇವ್ ಸಿ.ಹಂಪನೂರು, ಪ್ರಧಾನ ಕಾರ್ಯದರ್ಶಿ ಕುರುಡಿ ಗಿರೀಶ್, ಖಜಾಂಚಿ ಜಯಪ್ರಕಾಶ್ ಗೌಡ, ಎಂ.ಆರ್.ಮಾಲತೇಶ್, ಪತ್ರಕರ್ತರಾದ ಬಿ.ಎನ್.ಮಲ್ಲೇಶ್, ಎಂ.ಬಿ.ನವೀನ್ ಉಪಸ್ಥಿತರಿದ್ದರು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ ಎಲ್. ಹರೀಶ್ ಬಸಾಪುರ ತಿಳಿಸಿದರು