ಕ್ರಿಕೆಟ್ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ನಲ್ಲಿ ಯಾರು ಗೆಲ್ಲುತ್ತಾರೆ??

ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ನಲ್ಲಿ ಯಾರು ಗೆಲ್ಲುತ್ತಾರೆ??

-

- Advertisment -spot_img

ಭಾರತ vs ಇಂಗ್ಲೆಂಡ್:  ಲಾರ್ಡ್ಸ್‌ನಲ್ಲಿ ಯಾರು ಗೆಲ್ಲುತ್ತಾರೆ??

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಿರ್ಣಾಯಕ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಾಳೆ ಶುರುವಾಗಲಿದೆ. ಕ್ರಿಕೆಟ್‌ನ ಮೆಕ್ಕಾ ಎಂದು ಕರೆಯಲ್ಪಡುವ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಗುರುವಾರದಿಂದ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಐದು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಜಯದೊಂದಿಗೆ ಸಮಬಲ ಸಾಧಿಸಿರುವುದರಿಂದ, ಲಾರ್ಡ್ಸ್‌ನಲ್ಲಿ ವಿಜೇತರು 2-1 ಮುನ್ನಡೆ ಸಾಧಿಸುತ್ತಾರೆ.

ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯನ್ನು ಆರಂಭಿಸಿತು. ಅವರು ಐದು ವಿಕೆಟ್‌ಗಳಿಂದ ಗೆದ್ದರು. ಆದರೆ ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ಬಲವಾದ ಪ್ರತಿದಾಳಿ ನಡೆಸಿ ಇಂಗ್ಲೆಂಡ್ ಅನ್ನು ಸೋಲಿಸಿತು.

ಶುಭಮನ್ ಗಿಲ್ ನೇತೃತ್ವದ ಭಾರತೀಯ ತಂಡವು ಉತ್ತಮ ತಯಾರಿಯೊಂದಿಗೆ ಲಾರ್ಡ್ಸ್‌ಗೆ ಆಗಮಿಸಲಿದೆ. ಮತ್ತೊಂದೆಡೆ, ಇಂಗ್ಲಿಷ್ ತಂಡವು ತನ್ನ ಬೌಲಿಂಗ್ ಶ್ರೇಣಿಯನ್ನು ಚುರುಕುಗೊಳಿಸಿದೆ. ಅಂಕಿಅಂಶಗಳು, ಆಟಗಾರರು ಮತ್ತು ಎರಡೂ ತಂಡಗಳ ಫಾರ್ಮ್ ಅನ್ನು ಆಧರಿಸಿ, ಯಾರು ಗೆಲ್ಲುತ್ತಾರೆ ಎಂದು ಹೇಳೋದು ತುಂಬಾನೇ ಕಷ್ಟ.

ಭಾರತೀಯ ತಂಡಕ್ಕೆ ಫಾರ್ಮ್‌ನಲ್ಲಿರುವ ನಾಯಕ ಶುಭಮನ್ ಗಿಲ್ ಪ್ರಮುಖರು. ಅವರು ಎರಡು ಟೆಸ್ಟ್‌ಗಳಲ್ಲಿ ಒಂದು ದ್ವಿಶತಕ ಮತ್ತು ಎರಡು ಶತಕಗಳು ಸೇರಿದಂತೆ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ತಂಡಕ್ಕೆ ಮರಳಿರುವ ಎರಡನೇ ಪ್ರಮುಖ ಆಟಗಾರ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ. ಕಳೆದ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು ಮತ್ತು ಲಾರ್ಡ್ಸ್‌ನಲ್ಲಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಲಾರ್ಡ್ಸ್‌ನ ವೇಗಿಗಳಿಗೆ ಬೆಂಬಲ ನೀಡುವ ಪಿಚ್‌ನಲ್ಲಿ ಬುಮ್ರಾ ಬಿರುಗಾಳಿಯಾಗಬಹುದು.

ಕಳೆದ ಪಂದ್ಯದ ಅಚ್ಚರಿಯ ಹೀರೊ ಆಗಿದ್ದ ವೇಗಿ ಆಕಾಶ್‌ದೀಪ್ ಭಾರತದ ಮೂರನೇ ಪ್ರಮುಖ ಆಟಗಾರ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಅವರು ಹತ್ತು ವಿಕೆಟ್‌ಗಳನ್ನು ಕಬಳಿಸಿದರು. ಆಕಾಶ್‌ದೀಪ್ ಎರಡನೇ ಇನ್ನಿಂಗ್ಸ್‌ನಲ್ಲಿ ಆರು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

ವಿಕೆಟ್ ಕೀಪರ್ ಹಾಗೂ ಉಪನಾಯಕ ರಿಷಭ್ ಪಂತ್ ಭಾರತದ ನಾಲ್ಕನೇ ಪ್ರಮುಖ ಆಟಗಾರ. ಈ ಸರಣಿಯಲ್ಲಿ ಅವರು ಅದ್ಭುತ ಫಾರ್ಮ್ ನಲ್ಲಿದ್ದಾರೆ. ಮೊದಲ ಟೆಸ್ಟ್ ನ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಗಳಿಸಿದ್ದ ರಿಷಭ್, ಎರಡನೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲೂ 65 ರನ್ ಗಳಿಸಿದರು.

ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಹೊಸ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಲಾರ್ಡ್ಸ್‌ನಲ್ಲಿ ಭಾರತದ ಮತ್ತೊಬ್ಬ ಪ್ರಮುಖ ಆಟಗಾರ. 2021 ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅವರು ಅದ್ಭುತ ಶತಕ ಗಳಿಸಿದ್ದರು.

ಲಾರ್ಡ್ಸ್‌ನಲ್ಲಿ ನಡೆಯುವ ಟೆಸ್ಟ್‌ನಲ್ಲಿ ಭಾರತವೇ ಫೇವರಿಟ್….

LEAVE A REPLY

Please enter your comment!
Please enter your name here

seventeen + 10 =

Latest news

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ ಮಂಗಳೂರು/ಬೆಂಗಳೂರು: ಪ್ರತಿಷ್ಠಿತ ಆರ್‌ಪಿ ಟ್ರೋಫಿ 2026 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ಅಕುಲ್ ಟೂರಿಸಂ...

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ,...

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...
- Advertisement -spot_imgspot_img

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

Must read

- Advertisement -spot_imgspot_img

You might also likeRELATED
Recommended to you