ಭಾರತ vs ಬಾಂಗ್ಲಾದೇಶ: ಪುಣೆಯಲ್ಲಿ ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ, ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು.
ಭಾರತ ತಂಡ ಮಾರಕ ಬೌಲಿಂಗ್ ಮಾಡಿ ಬಾಂಗ್ಲಾದೇಶವನ್ನು 256 ರನ್‌ಗಳಿಗೆ ಸೀಮಿತಗೊಳಿಸಿತು.ಬುಮ್ರಾ, ಜಡ್ಡು ಶಿಸ್ತಿನ ದಾಳಿ ನಡೆಸಿದ ಕಾರಣ ಬಾಂಗ್ಲಾದೇಶ ಭಾರತಕ್ಕೆ ಸಾಧಾರಣ ಗುರಿ ನೀಡಿತು.ಭಾರತದ ಪರ ಬುಮ್ರಾ, ಸಿರಾಜ್ ಮತ್ತು ಜಡೇಜಾ 2-2 ವಿಕೆಟ್ ಪಡೆದರು.
ಭಾರತದ ಅಗ್ರ ಕ್ರಮಾಂಕದ ಅಬ್ಬರಕ್ಕೆ ಬಾಂಗ್ಲಾ ದಾಳಿ ಧೂಳಿಪಟವಾಯಿತು.ರೋಹಿತ್, ಗಿಲ್, ಕಿಂಗ್, ಕೆ ಎಲ್ ಇವರುಗಳ ಧಮಾಕೇದಾರ್ ಬ್ಯಾಟಿಂಗ್ ನಿಂದಾಗಿ, ಭಾರತದ ಅಗ್ರ ಕ್ರಮಾಂಕ ಮತ್ತೊಮ್ಮೆ ಕ್ಲಿಕ್ ಆಗಿರೋದ್ರಿಂದ ಬಾಂಗ್ಲಾ ಎದುರು ಅದ್ಧೂರಿ ಗೆಲುವು ಸಾಧಿಸಿತು.
ಭಾರತದ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡುವ ಮೂಲಕ ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ ಸಂಚಲನ ಮೂಡಿಸಿದರು.
ರೋಹಿತ್ ಶರ್ಮಾ ಉತ್ತಮ ಫಾರ್ಮ್ ನಲ್ಲಿದ್ದು ಈ ಬಾರಿಯೂ ಬೌಲರ್ ಗಳನ್ನು ಸದೆಬಡಿಯುವಲ್ಲಿ ಹಿಂದೆ ಬಿದ್ದಿಲ್ಲ. ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದ ವಿರಾಟ್ ಕೊಹ್ಲಿ ಬ್ಯಾಟ್ ಮತ್ತೊಮ್ಮೆ ಅಬ್ಬರಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಭಾರತ ತಂಡದ ಗೆಲುವನ್ನು ಖಚಿತಪಡಿಸಿದರು. ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ದೊಡ್ಡ ಕೊಡುಗೆ ನೀಡಿದ್ದರು.
ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಬಹುದು. ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರ ರೋಹಿತ್ ಶರ್ಮಾ ಅವರಿಗೆ ಪೈಪೋಟಿ ನೀಡುತ್ತಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರ ಫಾರ್ಮ್ ಭಾರತ ತಂಡಕ್ಕೆ ಸಂತಸದ ಸುದ್ದಿ.
ಈ ವಿಶ್ವಕಪ್‌ನಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಇಲ್ಲಿಯವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಹೆಂಗೆ ನಾವು..!
ನಾವೇ ನಂಬರ್ ವನ್…!
ಸುರೇಶ್ ಭಟ್ ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ