
IND vs NZ 3ನೇ ಟೆಸ್ಟ್: ಟೀಂ ಇಂಡಿಯಾಗೆ ಬಿಗ್ ಶಾಕ್.. ಸ್ಟಾರ್ ವೇಗಿ ದೂರ!
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್ ಸಿಕ್ಕಿದೆಯಂತೆ. ಸ್ಟಾರ್ ವೇಗಿ ಮತ್ತು ಯಾರ್ಕರ್‌ಗಳ ರಾಜ ಜಸ್ಪ್ರೀತ್ ಬುಮ್ರಾ ತಂಡವನ್ನು ತೊರೆದು ಮನೆಗೆ ತೆರಳಿದ್ದಾರೆ ಎಂಬ ವರದಿಗಳಿವೆ. ಸರಣಿ ಸೋತು ವೈಟ್ ವಾಶ್ ಅಂಚಿನಲ್ಲಿದ್ದ ಟೀಂ ಇಂಡಿಯಾಕ್ಕೆ ಬುಮ್ರಾ ನಿರ್ಗಮನ ಪ್ರಬಲ ಹಿನ್ನಡೆ ಎಂದೇ ಹೇಳಬಹುದು.
ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ ಶುಕ್ರವಾರದಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ನಲ್ಲಿ ಗೆಲುವಿನ ಗುರಿಯೊಂದಿಗೆ ಅಖಾಡಕ್ಕಿಳಿದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2025 ರ ಫೈನಲ್ ತಲುಪಲು ಈ ಪಂದ್ಯವನ್ನು ಗೆಲ್ಲುವುದು ಟೀಮ್ ಇಂಡಿಯಾಕ್ಕೆ ನಿರ್ಣಾಯಕವಾಗಿದೆ.

ಬುಮ್ರಾಗೆ ವಿಶ್ರಾಂತಿ..
ಯಾವುದೇ ಬದಲಾವಣೆಗಳಿಲ್ಲದೆ ಟೀಂ ಇಂಡಿಯಾ ತನ್ನ ಪ್ರಮುಖ ಆಟಗಾರರೊಂದಿಗೆ ಕಣಕ್ಕೆ ಇಳಿಯಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮೂರನೇ ಟೆಸ್ಟ್‌ನಿಂದ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ರಾಷ್ಟ್ರೀಯ ವಾಹಿನಿಯೊಂದು ಹೇಳಿಕೊಂಡಿದೆ. ಮುಂಬರುವ ಬೋರ್ಡರ್
ಗವಾಸ್ಕರ್ ಟ್ರೋಫಿಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತೀಯ ವೇಗಿ ವಿಭಾಗವನ್ನು ಬುಮ್ರಾ ಮುನ್ನಡೆಸಬೇಕಿದೆ. ಈ ಪ್ರವಾಸಕ್ಕೆ ಮೊಹಮ್ಮದ್ ಶಮಿ ಆಯ್ಕೆಯಾಗದಿರುವುದರಿಂದ ಸಂಪೂರ್ಣ ಹೊರೆ ಬುಮ್ರಾ ಮೇಲೆ ಬೀಳಲಿದೆ.