ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದು ಭಾರತ ತಂಡದ ನೈತಿಕ ಸ್ಥೈರ್ಯ ಹೆಚ್ಚಿದೆ. ಭಾರತ ತಂಡವು ಸರಣಿಯ ಮೂರನೇ ಪಂದ್ಯವನ್ನೂ ಗೆಲ್ಲಲು ಬಯಸುತ್ತದೆ.
ಮತ್ತೊಂದೆಡೆ ಆಸ್ಟ್ರೇಲಿಯಾ ಮೂರನೇ ಪಂದ್ಯವನ್ನು ಗೆದ್ದು ತನ್ನ ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಭಾರತಕ್ಕಿದೆ.
ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಎಂದಿಗೂ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿಲ್ಲ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು 3-0 ಯಿಂದ ಗೆಲ್ಲಲು ಬಯಸುತ್ತಾರೆ. ಭಾರತ ತಂಡಕ್ಕೆ ಈವರೆಗಿನ ಸರಣಿ ಅದ್ಭುತವಾಗಿದೆ. ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈ ಮೈದಾನದಲ್ಲಿ ಆಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಮಾನಸಿಕ ಸ್ಥೈರ್ಯ ತುಂಬಲು ಇದೊಂದು ಉತ್ತಮ ಅವಕಾಶ.
ಸದ್ಯ ಭಾರತ ತಂಡದ ಬಹುತೇಕ ಆಟಗಾರರು ಫಾರ್ಮ್‌ನಲ್ಲಿದ್ದಾರೆ. ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆಎಲ್ ರಾಹುಲ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಫಾರ್ಮ್ ಅನ್ನು ತೋರಿಸಿದ್ದಾರೆ. ಇನ್ನು ಮೂರನೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟ್‌ನಿಂದ ರನ್‌ಗಳ ನಿರೀಕ್ಷೆಯಿದೆ. ಈ ಇಬ್ಬರೂ ಆಟಗಾರರು ವಿಶ್ವಕಪ್‌ನ ವಿಷಯದಲ್ಲಿ ಭಾರತೀಯ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು, ಆದ್ದರಿಂದ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಶ್ವಕಪ್‌ಗೆ ಮೊದಲು ತಮ್ಮ ಫಾರ್ಮ್ ಅನ್ನು ಮರಳಿ ಪಡೆಯಲು ಬಯಸುತ್ತಾರೆ.
ನಾಯಕ ರೋಹಿತ್ ಶರ್ಮಾ ಇತಿಹಾಸ ಸೃಷ್ಟಿಸಬಲ್ಲರೇ ಕಾದು ನೋಡೋಣ..
ಸುರೇಶ ಭಟ್, ಮುಲ್ಕಿ
ಸ್ಪೋರ್ಟ್ಸ್ ಕನ್ನಡ