
ಮಕರ ಸಂಕ್ರಾಂತಿ ಪ್ರಯುಕ್ತ ಹೊಸೂರು ಪ್ರೀಮಿಯರ್ ಲೀಗ್-2026
ಕುಂದಾಪುರ-ಮಹಾಲಿಂಗೇಶ್ವರ ಫ್ರೆಂಡ್ಸ್ ಹಾಗೂ ಸ್ಪೂರ್ತಿ ಯುವ ವೇದಿಕೆ ಹೊಸೂರು ಇವರ ಆಶ್ರಯದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಮೊದಲ ಬಾರಿಗೆ ಲೀಗ್ ಮಾದರಿಯ 60 ಗಜಗಳ ಅದ್ಧೂರಿಯ ಕ್ರಿಕೆಟ್ ಪಂದ್ಯಾಟ “ಹೊಸೂರು ಪ್ರೀಮಿಯರ್ ಲೀಗ್-2026” ಆಯೋಜಿಸಲಾಗಿದೆ.

ಜನವರಿ 14 ರಂದು ಹೊಸೂರು ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ಹೊಸೂರು,ಕೆರಾಡಿ,ಬೆಳ್ಳಾಲ ಮತ್ತು ನಂದ್ರೋಳ್ಳಿ ಭಾಗದ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಥಮ ಬಹುಮಾನ 25,555 ರೂ ನಗದು,ದ್ವಿತೀಯ ಬಹುಮಾನ 15,555 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಪಂದ್ಯಾಟದ ನೇರ ಪ್ರಸಾರ ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು,ಹೆಚ್ಚಿನ ಮಾಹಿತಿಗಾಗಿ 9731195912,9686921672 ಮತ್ತು 9731864279 ಈ ನಂಬರ್ ಗಳನ್ನು ಸಂಪರ್ಕಿಸಬಹುದು.




