Action Replayಗೆಲುವಿನ ಅಮಲು ನೆತ್ತಿಗೇರಿದರೇ ನಂತರದ ಬದುಕು ಇಳಿಜಾರೇ : ಬೇಕರ್

ಗೆಲುವಿನ ಅಮಲು ನೆತ್ತಿಗೇರಿದರೇ ನಂತರದ ಬದುಕು ಇಳಿಜಾರೇ : ಬೇಕರ್

-

- Advertisment -spot_img

ಮೊದಲ ಬಾರಿಗೆ ಅವನು ಗೆಲುವಿನ ಟ್ರೋಫಿಯನ್ನೆತ್ತಿದಾಗ ವಿಂಬಲ್ಡನ್ ಗೆದ್ದ ಅತಿಕಿರಿಯನೆನ್ನುವ ಖ್ಯಾತಿ ಅವನದ್ದಾಗಿತ್ತು. 17 ವರ್ಷಕ್ಕೆ ಆತ ವಿಂಬಲ್ಡನ್ ಗೆದ್ದಾಗ,’ಇಷ್ಟು ದಿನ ಈ ದೇಶಕ್ಕೆ ಟೆನ್ನಿಸ್‌ನಲ್ಲಿ ಒಬ್ಬ ರೋಲ್ ಮಾಡಲ್ ಇರಲಿಲ್ಲವೆಂಬುದು ಜನರಿಗೆ ಬೇಸರ ತಂದಿತ್ತು.ಆದರೆ ಈಗ ಒಬ್ಬನಿದ್ದಾನೆ’ ಎಂದು ತನ್ನ ಬಗ್ಗೆಯೇ ತಾನು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದ.ಅವನ ಹೇಳಿಕೆಯನ್ನು ಜರ್ಮನ್ನರು ಮನಪೂರ್ವಕವಾಗಿ ಒಪ್ಪಿಕೊಂಡಿದ್ದರು.

ಮುಂದೆ ಆತ ಮತ್ತೆರಡು ವಿಂಬಲ್ಡನ್,ಒಂದು ಯು.ಎಸ್ ಓಪನ್,ಎರಡು ಆಸ್ಟ್ರೆಲಿಯನ್ ಓಪನ್ ಗೆದ್ದಾಗ ಆತ ದೇಶದ ದಂತಕತೆಗಳಲ್ಲಿ ಒಬ್ಬನಾದ. ಆದರೇನು ಮಾಡುವುದು..? ಖ್ಯಾತಿ ಬಂದಿತ್ತು.ವಯಸ್ಸಿನ ಸೊಕ್ಕಿಗೆ ಖ್ಯಾತಿಯ ಜೊತೆಗೂಡಿ ಶೋಕಿಯೂ ಬೆನ್ನು ಹತ್ತಿತ್ತು. ಗೆಲುವಿನ ಮೇಲೆ ಗೆಲುವು ಕಾಣುತ್ತಿದ್ದವನು, ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಪ್ಲೇಯ್ ಬಾಯ್ ಎಂದು ಗುರುತಿಸಿಕೊಂಡಿದ್ದ.ಆದರೆ ಅವನ ಪ್ಲೇಯ್ ಬಾಯ್‌ತನ ತನ್ನನ್ನೇ ನುಂಗಿ ನೀರು ಕುಡಿಯಲಿದೆ ಎಂಬ ಸತ್ಯದರಿವು ಅವನಿಗಾಗಲಿಲ್ಲ. ಅತಿಯಾದ ಸ್ತ್ರೀ ವ್ಯಾಮೋಹ ಆಟದ ಮೇಲಿನ ಅವನ ಏಕಾಗ್ರತೆಯನ್ನು ಕೆಡಿಸಿತ್ತು. ನಿಧಾನಕ್ಕೆ ತನಗಿಂತ ತೀರ ಕೆಳಮಟ್ಟದ ಆಟಗಾರರ ಕೈಯಲ್ಲಿ ಅವನು ಸೋಲತೊಡಗಿದ್ದ.

1984 ರಲ್ಲಿ ವೃತ್ತಿಜೀವನ ಆರಂಭಿಸಿದ್ದ ಬೋರಿಸ್‌ನಿಗೆ ಅದೆಂಥಹ ಸ್ತ್ರೀ ವ್ಯಾಮೊಹ ಅಂಟಿಕೊಂಡಿತೆಂದರೆ 1987ರ ಹೊತ್ತಿಗಾಗಲೇ ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್‌ಗಳಲ್ಲಿ ತೀರ ಅಪರಿಚಿತ ಮತ್ತು ಶ್ರೇಯಾಂಕರಹಿತ ಆಟಗಾರರ ಕೈಯಲ್ಲಿ ಸೋತುಬಿಟ್ಟ. ಆಸ್ಟ್ರೇಲಿಯನ್ ಓಪನ್ ಸೋಲಿನಿಂದ ಅದ್ಯಾವ ಪರಿ ಹತಾಶನಾಗಿದ್ದನೆಂದರೆ ವಿನಾಕಾರಣ ತೀರ್ಪುಗಾರರ ಮೇಲೆ ಕೂಗಾಡಿ,ಅವರೆಡೆಗೆ ಉಗಿದು ವಿವಾದ ಮಾಡಿಕೊಂಡಿದ್ದ ಈ ಜರ್ಮನ್ ಆಟಗಾರ. ‘ಶ್ರೇಯಾಂಕರಹಿತ ಆಟಗಾರರಲ್ಲ,ಬೋರಿಸ್‌ನನ್ನು ಸೋಲಿಸುತ್ತಿರುವುದು ಅವನ ಅತಿಯಾದ ಲೋಲುಪತೆ’ ಎಂಬ ವರದಿಯಿತ್ತು ಪತ್ರಿಕೆಯಲ್ಲಿ. ಬೇಕರ್ ಪ್ರತಿಕ್ರಿಯಿಸಲಿಲ್ಲ.ಪತ್ರಿಕಾ ವರದಿ ಸುಳ್ಳಂತೂ ಅಲ್ಲ ಎಂದಿದ್ದ ಅವನ ತರಬೇತುದಾರ ಗುಂಥೇರ್ ಬಾಷ್.

1990ರ ವೇಳೆಗೆ ಬಾರ್ಬರಾ ಫೆಲ್ಟಸ್ ಎನ್ನುವ ಮಾಡಲ್ ನನ್ನು ಮದುವೆಯಾದ ಬೇಕರ್ ನ ವೈಯಕ್ತಿಕ ಬದುಕು ಕೊಂಚ ಹಾದಿಗೆ ಬಂದಿತು ಎಂದುಕೊಂಡರು ಜನ.ಆದರೆ ಕತೆ ಬೇರೆಯಿತ್ತು.ಮಡದಿ ಗರ್ಭಿಣಿಯಾಗಿ ಆಸ್ಪತ್ರೆ ಸೇರಿಕೊಂಡಾಗ ಇವನಿಲ್ಲಿ ಎಂಜೆಲಾ ಆರ್ಮಕೋವಾ ಎನ್ನುವ ರಷ್ಯನ್ ಮಾಡಲ್‌ಳೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ.’ಆಕೆ ಪದೇ ಪದೇ ನನ್ನತ್ತ ನೋಡುತ್ತಿದ್ದಳು.ನನ್ನ ಎದುರುಗಡೆ ಹತ್ತಾರು ಸಲ ಸುಳಿದಾಡಿದ್ದ ಅವಳ ಕಣ್ಗಳಲ್ಲಿ ನನಗೆ ನೀನು ಬೇಕು ಎನ್ನುವ ಶುದ್ದಾನುಶುದ್ಧ ಬೇಟೆಗಾರನ ಹಪಾಹಪಿಯಿತ್ತು’ ಎನ್ನುತ್ತ ತನ್ನದೇ ಆತ್ಮಚರಿತ್ರೆಯಲ್ಲಿ ಬರೆದುಕೊಂಡ ವಿಲಕ್ಷಣ ವ್ಯಕ್ತಿ ಬೇಕರ್ಬಹುಶ: ಅದೊಂದು ಘಟನೆ ತನ್ನ ವೃತ್ತಿಜೀವನವನ್ನು ಕಬಳಿಸಿಬಿಡುತ್ತದೆನ್ನುವ ಊಹೆಯೂ ಅವನಿಗಿರಲಿಕ್ಕಿಲ್ಲ.ಅವನ ಹೆಣ್ಣುಬಾಕತನಕ್ಕೆ ನೊಂದುಕೊಂಡ ಅವನ ಮಡದಿ ಬಾರ್ಬರಾ ಅವನಿಂದ ವಿಚ್ಷೇದನ ಪಡೆದುಕೊಂಡಳು. ಪರಿಹಾರವಾಗಿ ಅವಳು ಅವನಿಂದ ಕಿತ್ತುಕೊಂಡಿದ್ದು ಬರೋಬ್ಬರಿ 25 ಮಿಲಿಯನ್ ಡಾಲರುಗಳು.ವಿಷಯ ಇಷ್ಟಕ್ಕೆ ನಿಲ್ಲಲಿಲ್ಲ.ಅದೇ ಹೊತ್ತಿಗೆ ಎಂಜೆಲಾ ಇವನಿಂದಾಗಿ ಗರ್ಭಿಣಿಯಾಗಿಹೋಗಿದ್ದಳು.ಅವಳಿಗೂ ಜೀವನಾಂಶವೆಂಬಂತೆ ಸುಮಾರು 1.5 ಮಿಲಿಯನ್ ಡಾಲರುಗಳನ್ನು ಅವನು ಕೊಡಬೇಕಾಗಿ ಬಂತು.ವೈಯಕ್ತಿಕ ಹಗರಣಗಳಿಂದ ಜರ್ಜರಿತನಾದವನಿಗೆ 1991ರ ನಂತರ ಸತತ ಐದು ವರ್ಷಗಳ ಕಾಲಾವಧಿಯಲ್ಲಿ ಒಂದೇ ಒಂದು ಗ್ರಾಂಡ್‌ಸ್ಲಾಮ್ ಗೆಲ್ಲುವುದು ಶಕ್ಯವಾಗಲಿಲ್ಲ.

ಮುಂದೆ 1996ರಲ್ಲಿ ಒಂದು ಆಸ್ಟ್ರೇಲಿಯನ್ ಓಪನ್ ಗೆದ್ದನಾದರೂ ನಂತರ ಅವನ ಆಟದಲ್ಲಿ ಮೊದಲಿನ ಸ್ಥಿರತೆ ಕಾಣಲಿಲ್ಲ. 1999ರ ವೇಳೆಗೆ ವೃತ್ತಿಜೀವನದಿಂದ ನಿವೃತ್ತಿ ಘೋಷಿಸಿದ ಬೇಕರ್ ವೈಯಕ್ತಿಕ ಬದುಕಿನಲ್ಲಿ ತನ್ನ ಬೇಜವಾಬ್ದಾರಿತನವನ್ನು ಮುಂದುವರೆಸಿದ್ದ. ಪರಿಣಾಮವಾಗಿ 2002ರಲ್ಲಿ 20 ಮಿಲಿಯನ್ ಡಾಲರ್ ತೆರಿಗೆ ಹಗರಣವೊಂದು ಕತ್ತಿಗೆ ಬಿದ್ದಿತ್ತು.ಶವಪೆಟ್ಟಿಗೆಯ ಕೊನೆಯ ಮೊಳೆಯೆನ್ನುವಂತೆ ಅವನ ದೊಡ್ಡ ಮೊತ್ತದ ಹೂಡಿಕೆಯಿದ್ದ ನೈಜೀರಿಯಾದ ತೈಲ ಕಂಪನಿಯೊಂದು ದಿವಾಳಿಯೆದ್ದು ಬಾಗಲು ಮುಚ್ಚಿಕೊಂಡಿತ್ತು.ಮಾಡಿಕೊಂಡ ಸಾಲ ತೀರದೇ ಮುಗಿಲು ಮುಟ್ಟಿತ್ತು.ಕಟ್ಟಿಸಿಕೊಂಡಿದ್ದ ಐಶಾರಾಮಿ ಮನೆ,ಎಕರೆಗಟ್ಟಲೆ ಜಮೀನು ಎಲ್ಲವನ್ನೂ ಮಾರಿಕೊಂಡು ಸಾಧ್ಯವಾದಷ್ಟು ಸಾಲ ತೀರಿಸಿದ್ದ ಬೇಕರ್.ಅಷ್ಟಾಗಿಯೂ ಅವನ ಪೂರ್ತಿ ಸಾಲ ತೀರಲಿಲ್ಲ.

ಇಂದು ಜೀವನದ ಅತ್ಯಂತ ಕೆಳಮಟ್ಟದ ಬಿಂದುವನ್ನು ತಲುಪಿಕೊಂಡಿದ್ದಾನೆ ಬೇಕರ್.ಅವನು ಗೆದ್ದ ಅಷ್ಟೂ ಟ್ರೋಫಿಗಳನ್ನು ಹರಾಜಿಗಿಡುವಂತೆ ಆದೇಶಿಸಿದೆ ಕೋರ್ಟು.ತನಗೊಂದಷ್ಟು ಕಾಲಾವಕಾಶ ನೀಡಬೇಕೆನ್ನುವ ಅವನ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ,’ಹಲವಾರು ಅವಕಾಶಗಳನ್ನು ಕೊಟ್ಟ ನಂತರವೂ ಪ್ರಜ್ಞಾವಂತರಂತೆ ವರ್ತಿಸದೇ, ಮರಳಿನಲ್ಲಿ ಮುಖ ಹುದುಗಿಸಿಕೊಂಡು ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಬೇಜವಾಬ್ದಾರಿಯುತ ವ್ಯಕ್ತಿಯಾಗಿ ಗೋಚರಿಸುತ್ತಿದ್ದಾನೆ ಬೇಕರ್’ ಎಂದು ಛೀಮಾರಿ ಹಾಕಿದೆ.

ವಿಚಿತ್ರ ನೋಡಿ,ಯಾವ ಗ್ರಾಂಡ್‌ಸ್ಲಾಮ್‌ ಟ್ರೋಫಿಗಳು ಬದುಕಿನಲ್ಲಿ ಅವನಿಗೆ ಖ್ಯಾತಿ ಮತ್ತು ಹಣವನ್ನು ತಂದುಕೊಟ್ಟವೋ,ಇಂದು ಸೋತ ನಿಂತವನು ಉಳಿವಿಗಾಗಿ ಅವುಗಳನ್ನೇ ಮಾರುತ್ತಿದ್ದಾನೆ.ಗೆಲುವಿಗಾಗಿ ವರ್ಷಗಟ್ಟಲೇ ಕನಸು ಕಂಡು ಗೆದ್ದು ನಿಂತು, ಗೆಲುವಿನ ಅಮಲಿನಡಿ ಮಾಡಿಕೊಂಡ ಎಡವಟ್ಟುಗಳಿಗೆ ಗೆಲುವಿನ ಪ್ರತೀಕಗಳನ್ನೇ ಮಾರಿಕೊಳ್ಳುವ ಪರಿಸ್ಥಿತಿ ಅವನದ್ದು.ಜರ್ಮನಿಯ ಒಂದು ಕಾಲದ ಚಿನ್ನದ ಹುಡುಗನಿಗೆ ಗೆದ್ದ ಚಿನ್ನದ ಪದಕ ಮಾರಿಕೊಳ್ಳುವ ಅನಿವಾರ್ಯತೆ.

ಇಂಥಹ ಘಟನೆಗಳ ಕುರಿತು ಓದಿದಾಗಲೆಲ್ಲ ಬದುಕಿನೆಡೆಗೆ ಮತ್ತೆ ಮತ್ತೆ ಅಚ್ಚರಿಯಿಂದ ನೋಡುತ್ತೇನೆ ನಾನು.ಬದುಕಿಗಿಂತ ದೊಡ್ಡ ಆಟಗಾರನೇ ಇಲ್ಲವೆನೋ ಎನ್ನಿಸಿಬಿಡುತ್ತದೆ ಒಮ್ಮೊಮ್ಮೆ.ಕೊಂಚ ಪ್ರಯತ್ನಿಸಿದರೆ ಇಲ್ಲಿ ಗೆಲುವು ಸಿಗುವುದು ಕಷ್ಟವಿಲ್ಲ.ಆದರೆ ಸಿಕ್ಕ ಗೆಲುವನ್ನು ಕಾಪಿಟ್ಟುಕೊಳ್ಳುವುದು, ತಲೆಗೇರದಂತೆ ಸಂಭಾಳಿಸುವುದಿದೆಯಲ್ಲ,ಅದು ಬಲುಕಷ್ಟ.ಎತ್ತರಕ್ಕೆ ಏರಿಸಿ ನಿಲ್ಲಿಸಿ ಗೆಲುವಿನ ಶೃಂಗವನ್ನು ತೋರಿಸುವ ಬದುಕಿಗೆ ಕೊಂಚ ಯಾಮಾರಿದರೆ ನಮ್ಮನ್ನು ಸೋಲಿನ ಪ್ರಪಾತಕ್ಕೆ ತಳ್ಳುವುದು ಕಷ್ಟವೇ ಅಲ್ಲ.ಅದಕ್ಕೆ ಇರಬೇಕು ಬದುಕಿಗಿಂತ ದೊಡ್ಡ ಗುರುವಿಲ್ಲ ಎಂದಿದ್ದು ತಿಳಿದವರು. ಅವರ ಮಾತನ್ನು ಒಪ್ಪಿಕೊಳ್ಳುತ್ತಲೇ ಬದುಕೆನ್ನುವ ಮಹಾಗುರುವಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ನಾನು.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

2 × five =

Latest news

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ) ವತಿಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ತಂಡಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ) ವತಿಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ತಂಡಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ) ವತಿಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ...

ಮಹಿಳಾ ವಿಶ್ವಕಪ್ 2025: ಜೆಮಿಮಾ ರೊಡ್ರಿಗಸ್ ವಿಜಯದ ಶತಕ.. ಭಾರತ ಫೈನಲ್ ತಲುಪಿತು!

ಮಹಿಳಾ ವಿಶ್ವಕಪ್ 2025: ಜೆಮಿಮಾ ರೊಡ್ರಿಗಸ್ ವಿಜಯದ ಶತಕ.. ಭಾರತ ಫೈನಲ್ ತಲುಪಿತು!    2025 ರ ಮಹಿಳಾ ಏಕದಿನ ವಿಶ್ವಕಪ್ ಪ್ರಶಸ್ತಿಯಿಂದ ಟೀಮ್ ಇಂಡಿಯಾ ಒಂದು ಹೆಜ್ಜೆ...

ಕ್ರಿಕೆಟ್ ಕ್ಷೇತ್ರದ ಶ್ರೇಷ್ಠ ಸಾಧಕ ಡಾ. ಪಿ.ವಿ. ಶೆಟ್ಟಿ ಅವರಿಗೆ ರಾಜ್ಯೋತ್ಸವ ಗೌರವ

ಕ್ರಿಕೆಟ್ ಕ್ಷೇತ್ರದ ಶ್ರೇಷ್ಠ ಸಾಧಕ ಡಾ. ಪಿ.ವಿ. ಶೆಟ್ಟಿ ಅವರಿಗೆ ರಾಜ್ಯೋತ್ಸವ ಗೌರವ ಪಯ್ಯಡೆ ಕ್ರಿಕೆಟ್ ಅಕಾಡೆಮಿಯ ಮೂಲಕ ಭಾರತೀಯ ಕ್ರಿಕೆಟ್‌ಗೆ ಅನೇಕ ಪ್ರತಿಭಾವಂತರನ್ನು ಪರಿಚಯಿಸಿದ ಕ್ರಿಕೆಟ್...

ಮಳೆಯಿಂದ ಮೊದಲ ಟಿ20 ಪಂದ್ಯ ರದ್ದು: ಭಾರತ ಆತ್ಮವಿಶ್ವಾಸದಿಂದ ಎರಡನೇ ಪಂದ್ಯಕ್ಕೆ ಸಜ್ಜು

ಮಳೆಯಿಂದ ಮೊದಲ ಟಿ20 ಪಂದ್ಯ ರದ್ದು: ಭಾರತ ಆತ್ಮವಿಶ್ವಾಸದಿಂದ ಎರಡನೇ ಪಂದ್ಯಕ್ಕೆ ಸಜ್ಜು ಕ್ಯಾನ್‌ಬೆರಾದಲ್ಲಿ ಮಳೆಯಿಂದ ತೊಂದರೆಗೊಳಗಾದ ಮೊದಲ ಪಂದ್ಯದ ನಂತರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20ಐ...
- Advertisement -spot_imgspot_img

IND vs AUS: ಸಿಕ್ಸರ್‌ಗಳ ಮಳೆ ಸುರಿಸಿದ ಸೂರ್ಯಕುಮಾರ್ ಯಾದವ್— ಆಕ್ಷನ್ ಪ್ರದರ್ಶಿಸುವಾಗ ಮಳೆಯಿಂದ ಪಂದ್ಯಕ್ಕೆ ಅಡ್ಡಿ

IND vs AUS: ಸಿಕ್ಸರ್‌ಗಳ ಮಳೆ ಸುರಿಸಿದ ಸೂರ್ಯಕುಮಾರ್ ಯಾದವ್— ಆಕ್ಷನ್ ಪ್ರದರ್ಶಿಸುವಾಗ ಮಳೆಯಿಂದ ಪಂದ್ಯಕ್ಕೆ ಅಡ್ಡಿ ಸೂರ್ಯಕುಮಾರ್ ಹಲವು ತಿಂಗಳ ನಂತರ ಮಿಂಚಿದರು, ಆದರೆ ಮಳೆ...

‘ಮಿಸ್ಟರ್ 360’ ತನ್ನ ಬ್ಯಾಟಿಂಗ್ ಮೌನವನ್ನು ಯಾವಾಗ ಮುರಿಯುತ್ತಾರೆ?

'ಮಿಸ್ಟರ್ 360' ತನ್ನ ಬ್ಯಾಟಿಂಗ್ ಮೌನವನ್ನು ಯಾವಾಗ ಮುರಿಯುತ್ತಾರೆ? ಸೂರ್ಯಕುಮಾರ್ ಯಾದವ್: ಒಂದು ಕಾಲದಲ್ಲಿ ಟಿ20 ಮಾದರಿಯಲ್ಲಿ ವಿನಾಶಕಾರಿ ಬ್ಯಾಟ್ಸ್‌ಮನ್ ಆಗಿದ್ದ, ಟಿ20 ಕ್ರಿಕೆಟ್‌ನ ಹೀರೊ, 'ಮಿಸ್ಟರ್...

Must read

- Advertisement -spot_imgspot_img

You might also likeRELATED
Recommended to you