ಕುಂದಾಪುರ : ಶ್ರೀಯುತ ಗೌತಮ್ ಶೆಟ್ಟಿಯವರ ನೇತೃತ್ವದಲ್ಲಿ ಕ್ರಿಕೆಟ್ ಜೊತೆ ಇನ್ನಿತರ ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಮಂಗಳೂರಿನ ಹಳೆಯಂಗಡಿಯಲ್ಲಿ ಸ್ಥಾಪಿಸಿರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ ಇವರ ವತಿಯಿಂದ ಅಂತರ್ ಶಾಲಾ ಟೇಬಲ್ ಟೆನ್ನಿಸ್ ಸ್ಪರ್ಧೆಯು ಶನಿವಾರದಂದು ನಡೆಯಿತು.
ಈ ಪಂದ್ಯಾಕೂಟವನ್ನು ಶಾರದಾ ವಿದ್ಯಾನಿಕೇತನ ತಲಪಾಡಿಯ ಮುಖ್ಯ ದೈಹಿಕ ಶಿಕ್ಷಕರಾದ ಶ್ರೀಯುತ ವಿನೋದ್ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಆಗ್ನೆಸ್ ನ ದೈಹಿಕ ಶಿಕ್ಷಕಿ ದೇವಿಕಾ, ಮಂಗಳೂರಿನ ಮೌಂಟ್ ಕಾರ್ಮೆಲ್ ಶಾಲೆಯ ದೈಹಿಕ ಶಿಕ್ಷಕಿ ಕ್ಲಾರಾ,ಎಸ್.ಎಮ್.ಎಸ್ ಕಾಲೇಜಿನ ಭಾಸ್ಕರ್, ಉಡುಪಿ ಶಾರದಾ ರೆಸಿಡೆನ್ಷಿಯಲ್ ಶಾಲೆಯ ದೈಹಿಕ ಶಿಕ್ಷಕ ಸುಕೇಶ್, ಕಾರ್ಯಕ್ರಮದ ಮುಖ್ಯ ರೂವಾರಿ ಹಾಗೂ ಟಾರ್ಪಡೋಸ್ ಟೇಬಲ್ ಟೆನ್ನಿಸ್ ನ ತರಬೇತುದಾರರಾಗಿರುವ ಅಶ್ವಿನ್ ಪಡುಕೋಣೆ, ಬ್ಯಾಡ್ಮಿಂಟನ್ ತರಬೇತುದಾರ ಸಂತೋಷ್ ಖಾರ್ವಿ, ಪ್ರತಾಪ್ ಶೆಟ್ಟಿ, ಕೆ.ಪಿ.ಸತೀಶ್,ಭಾಗ್ಯರಾಜ್,ದೀಪಕ್ ಕೋಟ್ಯಾನ್, ನವನೀತ್,ಕಾರ್ತಿಕ್ ಇವರು ಉಪಸ್ಥಿತರಿದ್ದರು.
ಈ ಪಂದ್ಯಾಕೂಟಕ್ಕಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ 45 ಶಾಲೆಯ ತಂಡಗಳು ಆಗಮಿಸಿದ್ದು,295 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
– ಆರ್.ಕೆ.ಆಚಾರ್ಯ ಕೋಟ