ಕೆ.ಟಿ.ಪಿ.ಎಲ್ 8 ನೇ ಪಂದ್ಯದಲ್ಲಿ ರಾಕರ್ಸ್ ರಾಗಿಗುಡ್ಡ,ಕ್ರಿಕೆಟ್ ನಕ್ಷತ್ರ ತಂಡವನ್ನು ಸೋಲಿಸುವುದರ ಮೂಲಕ ಸತತ 2 ನೇ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕ್ರಿಕೆಟ್ ನಕ್ಷತ್ರ,ಆರಂಭಿಕ ಕ್ರಮಾಂಕದ ಆಟಗಾರರ ಕುಸಿತದ ಬಳಿಕ ಸಚಿನ್ ಮಹಾದೇವ್ ಮತ್ತು ವಿಜಯ್ ತಂಡವನ್ನು ಆಧರಿಸಿ ನಿಗದಿತ 8 ಓವರ್ ಗಳಲ್ಲಿ 48 ರನ್ ಪೇರಿಸಿತ್ತು.
ಓವರೊಂದಕ್ಕೆ ಸರಾಸರಿ 6 ರನ್ ಗಳ ಗುರಿ ಪಡೆದ ಶಿವಮೊಗ್ಗದ ರಾಕರ್ಸ್ ರಾಗಿಗುಡ್ಡ ತಂಡ,ಮೊದಲ ಓವರ್ ನಲ್ಲಿ ಸಚಿನ್ ಮಹಾದೇವ್ ಮೊನಚಾದ ಬೌಲಿಂಗ್ ದಾಳಿಗೆ,6 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.ತದ ನಂತರ ಕ್ರೀಸ್ ಆಗಮಿಸಿದ ಗಿಳಿಯಾರು ನಾಗ ಮತ್ತು ಗಣೇಶ್ ಅಜೇಯವಾಗಿ ಗೆಲುವಿನ ಇನ್ನಿಂಗ್ಸ್ ಕಟ್ಟಿದರು.
ಗಿಳಿಯಾರು ನಾಗ 16 ರನ್ ಗಳಿಸಿದರೆ,ಗಣೇಶ್ ಭರ್ಜರಿ 2 ಸಿಕ್ಸರ್,1 ಆಕರ್ಷಕ ಬೌಂಡರಿಗಳ ಸಹಾಯದಿಂದ 26 ರನ್ ಗಳಿಸಿ 7 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿದರು.
ಅರ್ಹವಾಗಿ ಗಣೇಶ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.