ಕೆ.ಟಿ.ಪಿ.ಎಲ್ 7 ನೇ ಪಂದ್ಯದಲ್ಲಿ ಎಮ್.ಕೆ.ಎಸ್ ಕೋಲಾರ ಮಟ್ಕಲ್ ತುಮಕೂರು ತಂಡವನ್ನು ಸೋಲಿಸಿ ಸತತ 2 ನೇ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಕೆ.ಎಸ್ ಕೋಲಾರ ಆರಂಭಿಕ ಆಟಗಾರರಾದ ನವೀನ್ 17 ಮತ್ತು ಸಾಗರ್ ಭಂಡಾರಿ 16 ರನ್ ನೆರವಿನಿಂದ 8 ಓವರ್ ಗಳಲ್ಲಿ ಎದುರಾಳಿಗೆ 55 ರನ್ ಗಳ ಗುರಿ ನೀಡಿತ್ತು.
ಸವಾಲಿನ ಗುರಿ ಬೆನ್ನತ್ತಿದ ಮಟ್ಕಲ್ ತುಮಕೂರು ಆರಂಭಿಕ ಆಟಗಾರರ ಬ್ಯಾಟಿಂಗ್ ವೈಫಲ್ಯದ ನಡುವೆ,ಅಂತಿಮ ಹಂತದಲ್ಲಿ ಉತ್ತಪ್ಪ ಬಿರುಸಿನ 28 ಮತ್ತು ಆದರ್ಶ 10 ರನ್ ಸಿಡಿಸಿದರೂ,ಅಂತಿಮವಾಗಿ
4 ರನ್ ಗಳ ಅಂತರದ ಸೋಲನುಭವಿಸಿತು.
ಸಾಗರ್ ಭಂಡಾರಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.