ಟೆನಿಸ್ ಬಾಲ್ ಕ್ರಿಕೆಟ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ, ಮತ್ತು ಇದನ್ನು ಸಾಮಾನ್ಯವಾಗಿ ಧರ್ಮವೆಂದು ಪರಿಗಣಿಸಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ರೇಣು ಗೌಡ ಸಾರಥ್ಯದ ರಾಜ್ಯದ ಬಲಿಷ್ಠ ಟೆನಿಸ್ ಬಾಲ್ ಕ್ರಿಕೆಟ್ ತಂಡ ಬೆಂಗಳೂರು ಫ್ರೆಂಡ್ಸ್ , ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಪಂಟರ್‌ಗಳಾಗಿ ಜನಪ್ರಿಯವಾಗಿದ್ದು,ಅಗ್ರಮಾನ್ಯ ತಂಡವಾಗಿ ಬೆಳೆದು ದೊಡ್ಡ ಹೆಸರು ಮಾಡಿದೆ. ಕರ್ನಾಟಕದ ಅತಿದೊಡ್ಡ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ಬೆಂಗಳೂರು ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ಸಿದ್ಧರಾಗಿದ್ದಾರೆ.
ಇದು ರಾಜ್ಯ ಟೆನಿಸ್ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದೆ. ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಬಹುಮಾನವನ್ನು ಈ ಟೂರ್ನಮೆಂಟ್ ಹೊಂದಿದೆ. ಪ್ರಥಮ ಬಹುಮಾನ: ₹ 5,05,000/- ಮತ್ತು ದ್ವಿತೀಯ ಬಹುಮಾನ: ₹ 2,50,000/- ಜೊತೆಗೆ ಪ್ರಶಸ್ತಿ ನೀಡಲಾಗುವುದು. ಹದಿನಾರು ತಂಡಗಳು ಬಹುಮಾನಕ್ಕಾಗಿ ಸ್ಪರ್ಧಿಸುತ್ತವೆ.
ಫ್ರೆಂಡ್ಸ್ ಬೆಂಗಳೂರು ಸಂಸ್ಥೆ ಕಳೆದ ಬಾರಿ ನಡೆಸಿದ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಉಚಿತ ಪ್ರವೇಶಾತಿಯೊಂದಿಗೆ,49 ತಂಡಗಳಿಗೆ ಅವಕಾಶ ಕಲ್ಪಿಸಿದ್ದು,ಈ ಬಾರಿ ಈ ಋತುವಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನಾಡುತ್ತಿರುವ 16 ತಂಡಗಳಿಗೆ ಮಾತ್ರ ಅವಕಾಶ ನೀಡಲಿದೆ. ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನಲ್ಲಿ ಫ್ರೆಂಡ್ಸ್ ಕಪ್ ಟೂರ್ನಮೆಂಟ್ ಅನ್ನು ಅತ್ಯಂತ ಪ್ರತಿಷ್ಠಿತ ಕಪ್ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಪಂದ್ಯಾವಳಿಯ ಮೊದಲ ಆವೃತ್ತಿಯು 2023 ರಲ್ಲಿ ನಡೆಯಿತು. ಉತ್ತಮ ಯೋಜಿತ ಪಂದ್ಯಾಕೂಟಗಳಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಫ್ರೆಂಡ್ಸ್ ಬೆಂಗಳೂರು ಯಶಸ್ವಿಯಾಗಿದೆ. ಗುಣಮಟ್ಟದ ದೃಷ್ಟಿಯಿಂದ ಕ್ರಿಕೆಟ್ ಪ್ರಪಂಚದ ಅತ್ಯಂತ ಪ್ರಮುಖ ಪಂದ್ಯಾವಳಿಗಳಲ್ಲಿ ಒಂದಾಗಿ ಬೆಂಗಳೂರು ಫ್ರೆಂಡ್ಸ್ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ.
ಮಾರ್ಚ್ 21,22,23 ಮತ್ತು 24 ರಂದು ಶ್ರೀರಾಮ ದೇವಸ್ಥಾನದ ಎದುರು ಪೀಣ್ಯ ಎರಡನೇ ಹಂತದ ಆಟದ ಮೈದಾನದಲ್ಲಿ ನ್ಯಾಷನಲ್ ಲೆವೆಲ್ ಫ್ಲಡ್ ಲೈಟ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಗೊಂಡಿದ್ದು 16 ಬಲಿಷ್ಠ ತಂಡಗಳು ಈ ಟೂರ್ನಿಯಲ್ಲಿ ಸೆಣಸಾಡಲಿವೆ. ಕರ್ನಾಟಕದ 10 ಅಗ್ರ ತಂಡಗಳು, ಹೊರರಾಜ್ಯದ ನಾಲ್ಕು ತಂಡಗಳು ಮತ್ತು ಹೊರದೇಶದ ಎರಡು ತಂಡಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಈ ಬಾರಿ ಟೀಮ್ ಸೂಪರ್ ಫ್ಯಾಷನ್ ಶ್ರೀಲಂಕಾ, ಜಾನ್ಸನ್ ಕುಂದಾಪುರ, ಜೈ ಹಿಂದ್ ಶಿವಮೊಗ್ಗ,, ಚೆನ್ನೈ ಇಲೆವೆನ್, ದಾವಣಗೆರೆ ಇಲೆವೆನ್ ಕ್ರಿಕೆಟ್ ಕ್ಲಬ್, ರಿಯಲ್ ಫೈಟರ್ಸ್ ಮಲ್ಪೆ, ಜೈ ಕರ್ನಾಟಕ ಕ್ರಿಕೆಟರ್ಸ್ ಬೆಂಗಳೂರು, ಯುನೈಟೆಡ್ ಜಗ್ವಾರ್ ಮಂಗಳೂರು, ಮೈಟಿ ಕ್ರಿಕೆಟ್ ಕ್ಲಬ್ ಬೆಂಗಳೂರು, ಪ್ರಕೃತಿ ನ್ಯಾಶ್ ಬೆಂಗಳೂರು, ಇಜಾನ್ ಸ್ಪೋರ್ಟ್ಸ್ ಉಡುಪಿ, ಕುಮ್ಹಾಲಿ ಇಲೆವೆನ್ ಛತ್ತೀಸ್‌ಗಢ, ವೀನಸ್ ಬೊಲೊಗ್ನಾ ಶ್ರೀಲಂಕಾ, 108 ಲೈವ್ ಬಾಲಾಜಿ ಇಲೆವೆನ್ ಛತ್ತೀಸ್ಗಡ ,ಸೃಷ್ಟಿ ಬೆಂಗಳೂರು, ದಾಸರಹಳ್ಳಿ ಹೀಗೆ ಒಟ್ಟು 16 ತಂಡಗಳು ಲೀಗ್ ಮತ್ತು ನಾಕೌಟ್-ಶೈಲಿಯ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತವೆ.
ಫ್ರೆಂಡ್ಸ್ ಬೆಂಗಳೂರು ಟ್ರೋಫಿ
ಅಂತರಾಷ್ಟ್ರೀಯ ಮಟ್ಟದ ಹೊನಲುಬೆಳಕಿನ ಕ್ರಿಕೆಟ್
ಪೀಣ್ಯ 2nd ಸ್ಟೇಜ್ ಗ್ರೌಂಡ್
ಮಾರ್ಚ್ 21-22-23-24
—————————— —————————–
ಪೂಲ್ A
Kumhali 11, ಚತ್ತೀಸ್ ಘಡ್
ಇಜಾನ್ ಸ್ಪೋರ್ಟ್ಸ್, ಉಡುಪಿ
ಮೈಟಿ ಬೆಂಗಳೂರು
ಸೂಪರ್ ಫ್ಯಾಷನ್, ಶ್ರೀಲಂಕಾ
ಪೂಲ್ B
ರಿಯಲ್ ಫೈಟರ್ಸ್, ಮಲ್ಪೆ
ಜೈಹಿಂದ್, ಶಿವಮೊಗ್ಗ
ದಾಸರಹಳ್ಳಿ
ವೀನಸ್, ಶ್ರೀಲಂಕಾ
ಪೂಲ್ C
ಸೃಷ್ಟಿ, ಬೆಂಗಳೂರು
ಯುನೈಟೆಡ್ ಜಾಗ್ವಾರ್, ಸುರತ್ಕಲ್
ನ್ಯಾಶ್, ಬೆಂಗಳೂರು
ಚೆನ್ನೈ 11
ಪೂಲ್ D
ಜೈಕರ್ನಾಟಕ ಬೆಂಗಳೂರು
108 ಲೈವ್ ಬಾಲಾಜಿ ಚತ್ತೀಸ್ ಘಡ್
ಜಾನ್ಸನ್ ಕುಂದಾಪುರ
ದಾವಣಗೆರೆ 11
SRB ಸ್ಪೋರ್ಟ್ಸ್ ನಲ್ಲಿ ಟೂರ್ನಮೆಂಟ್ ನ ಲೈವ್ ಸ್ಟ್ರೀಮ್ ನೋಡಬಹುದಾಗಿದೆ. ಯಾವ ತಂಡ ಈ ಬಾರಿ ಫ್ರೆಂಡ್ಸ್ ಕಪ್ ಗೆದ್ದು ಅತ್ಯಂತ ಯಶಸ್ವಿ ತಂಡವಾಗಲಿದೆ ಕಾದು ನೋಡಬೇಕಾಗಿದೆ.
ಬೆಂಗಳೂರು ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ಮಾಲೀಕರ ಭೇಟಿ, ಜೆರ್ಸಿ ಅನಾವರಣ ಮತ್ತು ಪಂದ್ಯಾಟ ವೇಳಾಪಟ್ಟಿ ಬಿಡುಗಡೆ ಸಮಾರಂಭ ಬೆಂಗಳೂರಿನ ಸುಂಕದಕಟ್ಟೆಯ ಜೈ ಮಾರುತಿ ಕನ್ವೆನ್ಷನ್ ಹಾಲ್ ನಲ್ಲಿ ಮಾರ್ಚ್ 14 ರಂದು ಸಂಜೆ 6:00 ಗಂಟೆಗೆ ನಡೆಯಿತು.
“ಅಳಿವಿನಂಚಿನಲ್ಲಿರುವ ಟೆನಿಸ್ಬಾಲ್ ಕ್ರಿಕೆಟ್ ನಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ಈ ಪಂದ್ಯಾಟದ ಸದುದ್ದೇಶವಾಗಿದ್ದು,ಕ್ರೀಡಾಭಿಮಾನಿ ಗಳ ಬೆಂಬಲ ನಿಜಕ್ಕೂ ಅದ್ಭುತ ಎಂದು ಟೂರ್ನಿಯ ಮುಖ್ಯ ರುವಾರಿಗಳು ಆಗಿರುವ ರೇಣು ಗೌಡ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.”
4 ದಿನಗಳ ಕಾಲ ಹೊನಲು ಬೆಳಕಿನಡಿಯಲ್ಲಿ ಸಾಗಲಿರುವ ಈ ಪಂದ್ಯಾಟದ ನೇರ ಪ್ರಸಾರ SRB ಸ್ಪೋರ್ಟ್ಸ್ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.