14.6 C
London
Monday, September 9, 2024
Homeಕ್ರಿಕೆಟ್ಮಂಗಳೂರು: ಪದುವ ಶಿಕ್ಷಣ ಸಂಸ್ಥೆ ಮತ್ತು ಜುಗಲ್ ಸ್ಪೋರ್ಟ್ಸ್ ಕ್ಲಬ್ (ರಿ) ನ ಲೆದರ್...

ಮಂಗಳೂರು: ಪದುವ ಶಿಕ್ಷಣ ಸಂಸ್ಥೆ ಮತ್ತು ಜುಗಲ್ ಸ್ಪೋರ್ಟ್ಸ್ ಕ್ಲಬ್ (ರಿ) ನ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಕ್ಯಾಂಪ್

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಮಂಗಳೂರು: : ಪದುವ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್  ವತಿಯಿಂದ  ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಗೆ ಸಂಯೋಜಿತವಾದ ಜುಗಲ್ ಸ್ಪೋರ್ಟ್ಸ್ ಕ್ಲಬ್ (ರಿ) ಸಹಯೋಗದಲ್ಲಿ ನಗರದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಕ್ರಿಕೆಟ್ ಕೋಚಿಂಗ್ ಕ್ಯಾಂಪ್  ಏರ್ಪಡಿಸಲಾಗಿದೆ.
 ಜುಗಲ್ ಸ್ಪೋರ್ಟ್ಸ್ ಕ್ಲಬ್ ಮಾಲೀಕರಾದ  ಬಿ ಎಂ ಪುಷ್ಪರಾಜ್ ನೇತೃತ್ವದಲ್ಲಿ ತರಬೇತಿ
ಬೇಸಿಗೆ  ಕ್ರಿಕೆಟ್ ಕೋಚಿಂಗ್  ಶಿಬಿರವು ನಗರದ ನಂತೂರಿನಲ್ಲಿ ಪದುವ ಹೈಸ್ಕೂಲ್ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ. ಈ ಕ್ರಿಕೆಟ್ ತರಬೇತಿ ನೀಡುವ ಶಿಬಿರವನ್ನು ಪದುವ  ಶಿಕ್ಷಣ ಸಂಸ್ಥೆಯು  ಜುಗಲ್ ಸ್ಪೋರ್ಟ್ಸ್ ಕ್ಲಬ್  ತರಬೇತಿ ಕೇಂದ್ರದ ಅಡಿಯಲ್ಲಿ ಆಯೋಜಿಸಲಾಗಿದೆ.
ಈ ಕ್ರಿಕೆಟ್ ತರಬೇತಿ ಶಿಬಿರ ಬಾಲಕರು ಮತ್ತು ಬಾಲಕಿಯರಿಗೆ ಲಭ್ಯವಿದೆ. ಶಿಬಿರದಲ್ಲಿ ಮಕ್ಕಳ ದೈಹಿಕ ಸಾಮರ್ಥ್ಯ ವೃದ್ಧಿ, ಮಾನಸಿಕ ಸ್ಥೈರ್ಯ ತುಂಬಿ ಮನೋಬಲ ಹೆಚ್ಚಿಸುವುದರ ಜೊತೆಗೆ ವೃತ್ತಿಪರ ಕ್ರಿಕೆಟ್ ಗೆ ಪೂರಕವಾಗಿ ತಯಾರಿ ಮಾಡಲಾಗುವುದು ಎಂದು ಜುಗಲ್ ಸ್ಪೋರ್ಟ್ಸ್ ಕ್ಲಬ್ ಹೇಳಿದೆ.
ಹೆಸರನ್ನು ನೊಂದಾಯಿಸುವ ಪೋಷಕರು ಮಕ್ಕಳ ಆಧಾರ್ ಕಾರ್ಡ್ ಮತ್ತು ಫೋಟೋದೊಂದಿಗೆ ಸಂಪರ್ಕಿಸಲು, ಮಕ್ಕಳ ಹೆಸರನ್ನು ನೋಂದಾಯಿಸಲು ತರಬೇತುದಾರ ಬಿ ಎಂ ಪುಷ್ಪರಾಜ್   ಇವರನ್ನು 9986239754, 7204206169 ರಲ್ಲಿ ಸಂಪರ್ಕಿಸಬಹುದಾಗಿದೆ. ಬಿ ಎಂ ಪುಷ್ಪರಾಜ್ ಅವರು ಪ್ರಸ್ತುತ  ಅಂಪೈರ್ ಮತ್ತು ಕೋಚ್ ಆಗಿ  ಸೇವೆ ಸಲ್ಲಿಸುತ್ತಿದ್ದಾರೆ.

Latest stories

LEAVE A REPLY

Please enter your comment!
Please enter your name here

fourteen − ten =