ಈ ಬಾರಿಯ ಫ್ರೆಂಡ್ಸ್ ಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದೆ. ದಿನಾಂಕ 21, 22, 23 ಮತ್ತು 24 ರಂದು ಬೆಂಗಳೂರಿನಲ್ಲಿ ಫ್ರೆಂಡ್ಸ್ ಕಪ್ ಕ್ರಿಕೆಟ್ ಫೆಸ್ಟಿವಲ್ ಅಂತಾನೇ ಹೇಳಬಹುದು .
ಈಗಾಗಲೇ ಎಲ್ಲಾ ತಂಡದ ಆಟಗಾರರು ಫ್ರೆಂಡ್ಸ್ ಕಪ್ ಸಲುವಾಗಿ ಸಮರಾಭ್ಯಾಸ ಆರಂಭಿಸಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಂಡದ ಆಟವನ್ನು ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ. ಇನ್ನು ಎಲ್ಲಾ ತಂಡಗಳು ಕೂಡ ಟ್ರೋಫಿ ಗೆಲ್ಲುವಂತಹ ಚಿತ್ತವಿಟ್ಟು ಈ ಬಾರಿ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ತಮ್ಮ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಿಕೊಂಡಿವೆ.
ವಿದೇಶಿ ಆಟಗಾರರು ಕೂಡ ಈ ಟೂರ್ನಿಯಲ್ಲಿ ಭಾಗವಹಿಸುತ್ತಾ ಇರುವುದು ಈ ಟೂರ್ನಿಯ ವಿಶೇಷತೆ. ವಿದೇಶದ ಎರಡು ತಂಡಗಳು ಅಂದರೆ ಶ್ರೀಲಂಕಾ ದೇಶದ ಎರಡು ಟೆನ್ನಿಸ್ ಬಾಲ್ ಕ್ರಿಕೆಟ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಫ್ರೆಂಡ್ಸ್ ಕಪ್ ಟೂರ್ನಿಯಲ್ಲಿ ಆಡುವುದಕ್ಕೆ ಸಿಂಹಳೀಯರು ಈಗಾಗಲೇ ಉದ್ಯಾನ ನಗರಿಗೆ ಬಂದಿಳಿದಿದ್ದಾರೆ. ಲಂಕನ್ನರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ತುಂಬಾ ಉತ್ಸುಕರಾಗಿದ್ದಾರೆ ಹಾಗೂ ತಮ್ಮ ಉತ್ಕೃಷ್ಠ ಆಟವನ್ನು ಪ್ರದರ್ಶಿಸುವ ಹುರುಪಿನಲ್ಲಿದ್ದಾರೆ.
ರಾಜ್ಯದ ಅಗ್ರ ಹತ್ತು ಕ್ರಿಕೆಟ್ ತಂಡಗಳು, ಹೊರರಾಜ್ಯದ ನಾಲ್ಕು ತಂಡಗಳು ಮತ್ತು ವಿದೇಶದ ಎರಡು ತಂಡಗಳು ಸೀಮಿತ ಓವರ್‌ಗಳ ಪಂದ್ಯಾವಳಿಯಲ್ಲಿ ಫ್ರೆಂಡ್ಸ್ ಕಪ್ ಗಾಗಿ ಸ್ಪರ್ಧಿಸಲಿವೆ. 4 ದಿನಗಳ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಭರವಸೆಯ ಆರಂಭಿಕ ಪಂದ್ಯವು ಗುರುವಾರ ಸಾಯಂಕಾಲ 6 ಗಂಟೆಗೆ ಮೈಟಿ ಕ್ರಿಕೆಟ್ ಕ್ಲಬ್ ಬೆಂಗಳೂರು ಮತ್ತು ಸೂಪರ್ ಫ್ಯಾಷನ್ಸ್ ಶ್ರೀಲಂಕಾ ನಡುವೆ ನಡೆಯಲಿದೆ. ದಿನದ ಎರಡನೇ ಪಂದ್ಯದಲ್ಲಿ ದಾಸರಹಳ್ಳಿ ಇಲೆವೆನ್ ಮತ್ತು ವೀನಸ್ ಶ್ರೀಲಂಕಾ ಪರಸ್ಪರ ಮುಖಾಮುಖಿಯಾಗಲಿವೆ. ತದನಂತರ ಮೂರು ದಿನಗಳ ಕಾಲ ಹಗಲು ಮತ್ತು ರಾತ್ರಿಯಾಗಿ ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯಲ್ಲಿಗೆಲುವು ಸಾಧಿಸಿದ ತಂಡಕ್ಕೆ 5,05,000 ರೂ ಪ್ರಥಮ ಬಹುಮಾನ , ಎರಡನೇ ಬಹುಮಾನ 2,50,000 ರೂ. ಹಾಗೂ ಟ್ರೋಫಿ ನೀಡಲಾಗುವುದು. ಅಲ್ಲದೆ ವೈಯಕ್ತಿಕ ಬಹುಮಾನ ಸೇರಿದಂತೆ ಪ್ರತಿ ಪಂದ್ಯದಲ್ಲಿಉತ್ತಮ ಆಟ ಪ್ರದರ್ಶಿಸಿದ ಆಟಗಾರರಿಗೆ ಬಹುಮಾನ ನೀಡಲಾಗುವುದು.
ಹುಣ್ಣಿಮೆಯ ರಾತ್ರಿಯಲ್ಲಿ ಆಕಾಶವು ಬೆಳಗುವಂತೆ ಫ್ಲಡ್‌ಲೈಟ್‌ಗಳು ಕ್ರೀಡಾಂಗಣವನ್ನು ಬೆಳಗಲಿವೆ. ಪಂದ್ಯಾಟದ ವೀಕ್ಷಣೆಗೆ ಜನಸಾಗರ ಮೈದಾನವನ್ನು ತುಂಬಲಿದೆ. ಪಂದ್ಯಾವಳಿಗೆ ಸುಸಜ್ಜಿತ ವಿಸ್ತಾರವಾದ ಕ್ರೀಡಾಂಗಣವನ್ನು ಸಿದ್ಧಪಡಿಸಲು ಖರ್ಚಿನ ಬಹುತೇಕ ಭಾಗವನ್ನು ಫ್ರೆಂಡ್ಸ್ ಬೆಂಗಳೂರು ಕ್ಲಬ್‌ನ ಸದಸ್ಯರು ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೇ ಎಲ್ಲಾ ಸದಸ್ಯರುಗಳು ಕೂಡ ಮುಕ್ತ ಮನಸ್ಸನ್ನು ತೋರಿದ್ದಾರೆ. ಫ್ರೆಂಡ್ಸ್ ಬೆಂಗಳೂರು ಅವರಾಗಿಯೇ ದೇಣಿಗೆಯನ್ನು ಎಲ್ಲಿಯೂ ಸಂಗ್ರಹಿಸಿಲ್ಲ. ಕೆಲ ಕ್ರೀಡಾ ಪ್ರೇಮಿಗಳು ಸ್ವಇಚ್ಚೆಯಿಂದ ಫ್ರಾಂಚೈಸಿ ಮಾಲೀಕರಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಫ್ರೆಂಡ್ಸ್ ಬೆಂಗಳೂರು ನಡೆಸುವ ಪಂದ್ಯಾವಳಿಗಳು ಟೆನಿಸ್ ಬಾಲ್ ಕ್ರಿಕೆಟ್ ಗೆ ಏಕೆ ಸರ್ವೋತ್ಕೃಷ್ಟವಾಗಿವೆ ಎಂಬುದನ್ನು ಇದು ಮತ್ತೊಮ್ಮೆ ತೋರಿಸಲಿದೆ. ಇತ್ತೀಚಿಗೆ ನಡೆದ ಓನರ್ಸ್ ಮೀಟ್, ಜೆರ್ಸಿ ಲಾಂಚ್ ಸಂದರ್ಭ ಫ್ರೆಂಡ್ಸ್ ಬೆಂಗಳೂರಿನ ಸಾರಥಿ ರೇಣು ಗೌಡ ಟೂರ್ನಿಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಟಗಾರರನ್ನು ಪ್ರೋತ್ಸಾಹಿಸಬೇಕು ಎಂದು ಫ್ರೆಂಡ್ಸ್ ಬೆಂಗಳೂರಿನ ಶ್ರೀಯುತ ರೇಣು ಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಬೆಂಗಳೂರಿನಲ್ಲಿ ಆಯೋಜಿಸಿರುವುದು ಗೌರವದ ಸಂಗತಿ. ಅವರ ಸಾಹಸಕ್ಕೆ ಫ್ರೆಂಡ್ಸ್ ಬೆಂಗಳೂರು ತಂಡದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು. ಬೆಂಗಳೂರು ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ನ ಸಮರ್ಪಣೆ ಮತ್ತು ಕಠಿಣ ಪರಿಶ್ರಮವು ವೈಭವಕ್ಕೆ ಅನುವಾದಿಸಲಿ. ಪಂದ್ಯಾವಳಿಗೆ ಆಲ್ ದಿ ಬೆಸ್ಟ್ ಹೇಳುತ್ತಾ ಕರ್ನಾಟಕದ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಂದ ಶುಭಾಶಯಗಳು ಮತ್ತು ಧನ್ಯವಾದಗಳು