*ಆಹ್ವಾನಿತ ತಂಡಗಳ ನಡುವಿನ ರೋಚಕ ಹಣಾಹಣಿ-ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಗರಿಷ್ಟ ನಗದು ಬಹುಮಾನ*
ಟೆನಿಸ್ಬಾಲ್ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಸುಮಾರು ಎರಡೂವರೆಗಳ ದಶಕಗಳ ಯಶಸ್ಸಿನ ಯಶೋಗಾಥೆ ಬರೆದು, ರಾಜ್ಯದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸಂಪಾಸಿದ ತಂಡ ಫ್ರೆಂಡ್ಸ್ ಬೆಂಗಳೂರು.ಸಹೃದಯಿ ಕ್ರೀಡಾ ಪೋಷಕರಾದ ರೇಣು ಗೌಡರ ಸಾರಥ್ಯದಲ್ಲಿ ರಾಜ್ಯದಾದ್ಯಂತ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಜಯಿಸಿ ದಾಖಲೆ ಬರೆದ ಫ್ರೆಂಡ್ಸ್ ಬೆಂಗಳೂರು ಈ ಬಾರಿ ವಿನೂತನ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ.
ಫ್ರೆಂಡ್ಸ್ ಬೆಂಗಳೂರು ತಂಡ ಹಿರಿಯ-ಕಿರಿಯರು,ತಂಡದ ಬೆಂಬಲಿಗರ ಸಹಯೋಗದೊಂದಿಗೆ 2023 ಜನವರಿ
26,27,28,29 ರಂದು ಪೀಣ್ಯ 2 ನೇ ಹಂತದ ಬಳಿ ಇರುವ ಮೈದಾನದಲ್ಲಿ ಪಂದ್ಯಾಟ ನಡೆಸಲು ಭರದಿಂದ ಸಿದ್ಧತೆ ನಡೆಯುತ್ತಿದೆ.
ರಾಷ್ಟ್ರೀಯ ಮಟ್ಟದಲ್ಲೇ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಡೆಯಲಿರುವ ಈ ಐತಿಹಾಸಿಕ ಕ್ರಿಕೆಟ್ ಪಂದ್ಯಾವಳಿ
ಯಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ ತಂಡ ಗರಿಷ್ಠ ನಗದು 5,05,000 ರೂ,ದ್ವಿತೀಯ 2,50,000 ನಗದು ಬಹುಮಾನ ಸಹಿತ ವಿಶಿಷ್ಟ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.
*”ಇತ್ತೀಚಿನ ದಿನಗಳಲ್ಲಿ ತಂಡದ ಮಾಲೀಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಮನಗಂಡು, ಫ್ರೆಂಡ್ಸ್ ಬೆಂಗಳೂರು ಈ ಪಂದ್ಯಾಟದಲ್ಲಿ ಈ ಬಗ್ಗೆ ವಿಶಿಷ್ಟವಾದ ಯೋಜನೆಗಳನ್ನು ರೂಪಿಸಲಿದ್ದು,
ತಮ್ಮಂತೆಯೇ ಕಳೆದ ಎರಡು ದಶಕಗಳಿಂದ ತಂಡಗಳನ್ನು ಮುನ್ನಡೆಸುತ್ತಿರುವ ತಂಡದ ವ್ಯವಸ್ಥಾಪಕರಿಗೆ ಈ ಪಂದ್ಯಾಟ ಅರ್ಪಿಸಲಾಗುವುದು”ಎಂದು ತಂಡದ ವ್ಯವಸ್ಥಾಪಕರು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*