ಬೆಂಗಳೂರು-ಪೀಣ್ಯ 2 ನೇ ಹಂತದಲ್ಲಿ,ಫ್ರೆಂಡ್ಸ್ ಬೆಂಗಳೂರು ತಂಡ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಸಜ್ಜುಗೊಳಿಸಿದ ಮೈದಾನದಲ್ಲಿ ಅಂತರಾಷ್ಟ್ರೀಯ ಮಟ್ಟದ ಫ್ರೆಂಡ್ಸ್ ಬೆಂಗಳೂರು ಕಪ್-2023 ಬುಧವಾರದಂದು ಅದ್ಧೂರಿಯ ಚಾಲನೆ ದೊರಕಿದೆ.
ಕರ್ನಾಟಕ ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಉಚಿತ ಪ್ರವೇಶಾತಿ ಮತ್ತು 5 ಲಕ್ಷ ನಗದು ಬಹುಮಾನದ ಜೊತೆಗೆ ಆಕರ್ಷಕ ಉಡುಗೊರೆಗಳ ಮಹಾಪೂರವನ್ನೇ ಹರಿಸಲಾಗುತ್ತಿದ್ದು,ಮೊದಲ ಬಾರಿಗೆ ಶ್ರೀಲಂಕಾ ತಂಡ ಸಾಫ್ಟ್ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದು,ಇತರ ರಾಜ್ಯಗಳ ಒಟ್ಟು 8 ತಂಡಗಳು ಸೇರಿದಂತೆ ಒಟ್ಟು 49 ತಂಡಗಳು ಭಾಗವಹಿಸುತ್ತಿದ್ದು ದಾಖಲೆಯ ಪಂದ್ಯಾಟವಾಗಿ ಹೊರಹೊಮ್ಮಿದೆ.
ಬುಧವಾರದಂದು ಬೆಂಗಳೂರಿನ ತಂಡಗಳಿಗೆ ಅವಕಾಶ ನೀಡಲಾಗಿದ್ದು ಒಟ್ಟು 11 ಪಂದ್ಯಗಳು ನಡೆಯಿತು.
ಎಸ್.ಝಡ್.ಸಿ.ಸಿ ಬೆಂಗಳೂರು
ಸತತ 2 ಗೆಲುವನ್ನು ದಾಖಲಿಸಿದೆ.ಇನ್ನುಳಿದ ವಿಜೇತ ತಂಡಗಳ ಭವಿಷ್ಯ ಶುಕ್ರವಾರ ನಿರ್ಧಾರವಾಗಲಿದೆ.ಇಂದು ಗುರುವಾರ ಹೊರ ಜಿಲ್ಲೆಯ ತಂಡಗಳು ಸ್ಪರ್ಧಿಸಲಿದೆ.
25 ಬುಧವಾರ ಸಂಜೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ಮಂಜುನಾಥ್ ರವರು ದೀಪ ಬೆಳಗಿಸಿದರು.ಈ ಸಂದರ್ಭ ರಾಮೇಗೌಡರು,ಸಮಾಜ ಸೇವಕಿ ಹಾಗೂ ಕ್ರೀಡಾ ಪ್ರೋತ್ಸಾಹಕಿ ಡಾ.ಗಾಯತ್ರಿ ಮುತ್ತಪ್ಪ,ರೇಣು ಗೌಡ,ಕಿರಣ್ ಗೌಡ,ಫ್ರೆಂಡ್ಸ್ ಬೆಂಗಳೂರು ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು…