13.5 C
London
Wednesday, May 15, 2024
Homeಫುಟ್ಬಾಲ್ಫಿಫಾ ವಿಶ್ವಕಪ್ ಫುಟ್ಬಾಲ್ 2022!

ಫಿಫಾ ವಿಶ್ವಕಪ್ ಫುಟ್ಬಾಲ್ 2022!

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಇನ್ನು 29 ದಿನ ಫುಟ್ಬಾಲ್ ಅಭಿಮಾನಿಗಳು ಮಲಗುವುದಿಲ್ಲ! 
———————————–
ಬಿಸಿಲ ದೇಶ ಕತಾರಿನಲ್ಲಿ  ನವೆಂಬರ್ 20ರಂದು ಆರಂಭವಾಗಿ  ಮುಂದಿನ 29 ದಿನ ಜಗತ್ತಿನ ಅತೀ ದೊಡ್ಡ ಕ್ರೀಡಾಹಬ್ಬ ವೇದಿಕೆ ಏರಲಿದೆ. ಅದು ಫಿಫಾ ವಿಶ್ವಕಪ್ ಫುಟ್ಬಾಲ್! ಕತಾರನ 5 ನಗರಗಳ 8 ಕ್ರೀಡಾಂಗಣಗಳಲ್ಲಿ ಲಕ್ಷ ಲಕ್ಷ ಫುಟ್ಬಾಲ್ ಅಭಿಮಾನಿಗಳು ಸೇರಿ ಕುಣಿದು ಕುಪ್ಪಳಿಸುತ್ತಾರೆ. ಈ ವಿಶ್ವಕಪ್ ಫುಟ್ಬಾಲ್ ಒಂದು ಜಾಗತಿಕ ಆಕರ್ಷಣೆಯೇ ಸರಿ! ಒಂದು ಅದ್ಭುತ ಸೆಲೆಬ್ರೇಶನ್! ಒಂದು ಅದ್ಭುತ ವೈಬ್ರೇಶನ್! ಒಂದು ಅದ್ಭುತ ದೃಶ್ಯ ಕಾವ್ಯ!
ಫುಟ್ಬಾಲ್ ಜಗತ್ತಿನ ನಂಬರ್ ಒನ್ ಕ್ರೀಡೆ! ಅದಕ್ಕೆ ಹೋಲಿಕೆ ಇಲ್ಲ! 
——————————
1930ರಲ್ಲಿ ಫುಟ್ಬಾಲ್ ವಿಶ್ವಕಪ್ ಮೊದಲ ಬಾರಿಗೆ ನಡೆದಾಗ ಕೇವಲ 13 ತಂಡಗಳು ಭಾಗವಹಿಸಿದ್ದವು. ನಡೆದ ಪಂದ್ಯಗಳು ಕೇವಲ 18. ಒಟ್ಟು ಗೋಲಗಳ ಸಂಖ್ಯೆ 70 ಅಂದರೆ ನಿಮಗೆ ಆಶ್ಚರ್ಯ ಆಗಬಹುದು! ಆಗ ಪ್ರಾಥಮಿಕ  ಹಂತದ ಪಂದ್ಯಗಳು ನಡೆದೇ ಇರಲಿಲ್ಲ! ಆದರೆ ಇಂದು ವಿಶ್ವದಲ್ಲಿ ಇನ್ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಫುಟ್ಬಾಲ್ ಪ್ರಧಾನ ಕ್ರೀಡೆಯೇ ಆಗಿದೆ. ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಖಂಡಗಳಲ್ಲಿ ಜನರಿಗೆ ಫುಟ್ಬಾಲ್ ಆಟ ಇದ್ದರೆ ಊಟ, ತಿಂಡಿ, ನಿದ್ರೆ ಯಾವುದೂ ಬೇಡ!
ಏಷಿಯಾದ ಯಾವ ರಾಷ್ಟ್ರವೂ ಈವರೆಗೆ ವಿಶ್ವಕಪ್ ಅಂತಿಮ ಘಟ್ಟಕ್ಕೆ ತಲುಪಿಲ್ಲ ಅಂದರೆ ನೀವು ನಂಬಲೇ ಬೇಕು! ನಾಲ್ಕು ವರ್ಷಗಳ ಅವಧಿಗೆ ನಡೆಯುವ ಈ ಜಿದ್ದಾಜಿದ್ದಿ ಕೂಟದಲ್ಲಿ ಗೆಲ್ಲಲು ಎಲ್ಲ ರಾಷ್ಟ್ರಗಳು ಅತ್ಯಂತ ಕುತೂಹಲದಿಂದ ಕಾಯುತ್ತವೆ. ತರಬೇತಿಗಾಗಿ ಕೋಟಿ ಕೋಟಿ ಡಾಲರ್ ಖರ್ಚು ಮಾಡುತ್ತವೆ. ಇಡೀ ನಾಲ್ಕು ವರ್ಷ ನಿರಂತರ ತರಬೇತು, ಆಯ್ಕೆ ಸುತ್ತಿನ ಪಂದ್ಯಗಳು  ನಡೆಯುತ್ತವೆ. ಎಲ್ಲ ರಾಷ್ಟ್ರಗಳಿಗೂ ಇದು ಪ್ರತಿಷ್ಠೆಯ ಪ್ರಶ್ನೆ. ಟಿವಿ ಲೈವ್ ಮೂಲಕ ಜಗತ್ತಿನ ಹೆಚ್ಚು ಕಡಿಮೆ ಎಲ್ಲ ರಾಷ್ಟ್ರಗಳು ಫುಟ್ಬಾಲ್ ಪಂದ್ಯಗಳನ್ನು ವೀಕ್ಷಣೆ ಮಾಡುತ್ತವೆ. ಜಗತ್ತಿನಲ್ಲಿ ಈ 92 ವರ್ಷಗಳಲ್ಲಿ ಏನೇನೋ ಆಗಿಹೋಗಿದೆ. ಆದರೆ ಫುಟ್ಬಾಲ್ ಜನಪ್ರಿಯತೆಯು ಒಂದಿಂಚು ಕಡಿಮೆ ಆಗುವುದಿಲ್ಲ!
ಟಿವಿ ಲೈವ್ ಕಾರ್ಯಕ್ರಮದ ಮೂಲಕ ವಿಶ್ವಕಪ್ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಣೆ ಮಾಡುವವರು ಅಂದಾಜು ಸಂಖ್ಯೆ ಈ ಬಾರಿ 370 ಕೋಟಿ ದಾಟುವ ಎಲ್ಲ ಸಾಧ್ಯತೆಯೂ ಇದೆ. ಅದಕ್ಕೆ ಕಾರಣ ಫುಟ್ಬಾಲಿನ ಕ್ರೇಜ್ ಇರುವ ನಿಮ್ಮಂತಹ, ನಮ್ಮಂತಹ ಕ್ರೀಡಾಭಿಮಾನೀಗಳು.
ಫುಟ್ಬಾಲ್ ಅಂಗಳದಲ್ಲಿ ಮಿಂಚಿರುವ ಶತಮಾನದ ಲೆಜೆಂಡಗಳು! 
———————————-
ಬ್ಯುನಸ್ ಐರಿಸನ ಕೊಳೆಗೇರಿಯಲ್ಲಿ ಹುಟ್ಟಿ, ಬಾಲ್ಯದುದ್ದಕ್ಕೂ ಹಸಿವನ್ನು ಉಂಡು ಬೆಳೆದ ಮುಂದೆ ಫುಟ್ಬಾಲ್ ವಿಶ್ವವನ್ನು ದಂಗುಪಡಿಸಿದ ಡಿಗೋ ಮರಡೋನಾ ಫುಟ್ಬಾಲಿನ ಅತೀ ದೊಡ್ಡ ತಾರೆಯಾಗಿ ಬೆಳೆದದ್ದು ನಿಜವಾಗಿಯೂ ಗ್ರೇಟ್! ಆತ ಡಿಗೊ ಮರದೋನಾ. ಫುಟ್ಬಾಲ್ ಜಗತ್ತಿನ ಮೇಲೆ ಆತನು ಬೀರಿದ ಪ್ರಭಾವ ಅದ್ಭುತ ಆದದ್ದು! ಆತನಿಗಿಂತ ತುಂಬಾ ಮೊದಲು ಬ್ರೆಜಿಲ್ ಗಲ್ಲಿ ಗಲ್ಲಿಗಳಲ್ಲಿ ಫುಟ್ಬಾಲ್ ಒದ್ದು ಬೆಳೆದ ಪೀಲೆ ಮುಂದೆ ಜಗತ್ತನ್ನು ದಂಗು ಬಡಿಸಿದ್ದು ತನ್ನ ಅಪ್ರತಿಮ ಫುಟ್ಬಾಲ್ ಕೌಶಲಗಳಿಂದ! ಇತ್ತೀಚಿನ ವರ್ಷಗಳ ಅವಧಿಯಲ್ಲಿ ಲಿಯೊನೆಲ್ ಮೆಸ್ಸಿ, ಕ್ರಿಶ್ಚಿಯನ್ ರೆನಾಲ್ಡೋ, ನೆಮರ್, ರಿವಾಲ್ಡೋ, ರೋಮಾರಿಯೊ ಮೊದಲಾದ ವಿಶ್ವಮಟ್ಟದ ತಾರೆಯರು ಇದ್ದಾರೆ. ಪ್ರತೀ ವರ್ಷವೂ ಹೊಸ ಹೊಸ ದಾಖಲೆಗಳು ಅರಳುತ್ತವೆ. ಫುಟ್ಬಾಲನ ಪರಿಭಾಷೆಗಳು ಬದಲಾಗುತ್ತಿವೆ.
ಇದುವರೆಗೆ ವಿಶ್ವಕಪ್ ಗೆದ್ದದ್ದು ಕೇವಲ ಎಂಟೆ ರಾಷ್ಟ್ರಗಳು!
——————————
ಇದುವರೆಗೆ ನಡೆದ 21 ವಿಶ್ವಕಪ್ ಕೂಟಗಳಲ್ಲಿ ಗೆದ್ದಿದ್ದು ಕೇವಲ ಎಂಟು ರಾಷ್ಟ್ರಗಳು ಅಂದರೆ ನಂಬುವುದು ಕಷ್ಟ ಆಗಬಹುದು. ಅದು ಕೂಡ ಯುರೋಪ್ ಮತ್ತು ದಕ್ಷಿಣ ಅಮೇರಿಕ ಖಂಡಗಳ ರಾಷ್ಟ್ರಗಳು! ಪ್ರತೀ ವಿಶ್ವಕಪ್ ಕೂಟದಲ್ಲಿ ಭಾಗವಹಿಸಿದ ಬ್ರೆಜಿಲ್ ಐದು ಬಾರಿ ವಿಶ್ವಕಪ್ ಗೆದ್ದಿದೆ! ನಾಲ್ಕು ಬಾರಿ ಗೆದ್ದು ದಾಖಲೆ ಮಾಡಿದ ರಾಷ್ಟ್ರಗಳು ಇಟೆಲಿ ಹಾಗೂ ಜರ್ಮನಿಗಳು! ಉರುಗ್ವೆ, ಅರ್ಜೆಂಟೀನಾ ಮತ್ತು ಸ್ಪೇನ್ ತಲಾ ಎರಡು ಬಾರಿ ವಿಶ್ವಕಪ್ ಗೆದ್ದು ಸಾಧನೆ ಮಾಡಿವೆ. ಇಂಗ್ಲೆಂಡ್ ಮತ್ತು ಫ್ರಾನ್ಸ್ ಒಂದು ಬಾರಿ ವಿಶ್ವಕಪ್ ಗೆದ್ದಿವೆ.
ಈ ಬಾರಿ ಫಿಫಾ ಕಪ್ ಯಾರಿಗೆ?
———————————-
ಕ್ರಿಕೆಟಿನ ಹಾಗೆ ಫುಟ್ಬಾಲ್ ತೀರಾ ಅನಿಶ್ಚಿತತೆಯ ಕ್ರೀಡೆ. ಕುತೂಹಲದ ಪರಾಕಾಷ್ಠೆ. ಬ್ರೆಜಿಲನಂತಹ ಚಾಂಪಿಯನ್ ತಂಡವನ್ನು ಸಾಮಾನ್ಯ ತಂಡವಾದ ಮೊರಾಕೊ ಅಡ್ಡ ನೀಟ ಮಲಗಿಸಬಲ್ಲದು!
ಏನಿದ್ದರೂ ಬ್ರೆಜಿಲ್, ಸ್ಪೇನ್, ಇಟೆಲಿ, ಅರ್ಜೆಂಟೀನಾ,ಫ್ರಾನ್ಸ್, ಪೋರ್ಚುಗಲ್ ತಂಡಗಳು ಸೆಮಿ ಹಂತಕ್ಕೆ ಬರುವ ಶಕ್ತಿ ಹೊಂದಿವೆ. ಆದರೆ ಭಾಗವಹಿಸುವ 32 ತಂಡಗಳಲ್ಲಿ ಯಾವ ತಂಡವೂ ಕಪ್ ಗೆಲ್ಲುವ ಛಾತಿ ಹೊಂದಿದೆ.
ಬನ್ನಿ! ನವೆಂಬರ್  20ರಿಂದ ಆರಂಭವಾಗುವ ವಿಶ್ವದ ಮಹೋನ್ನತ ಕೂಟದ ಪ್ರತೀ ಕ್ಷಣ ಆಸ್ವಾದನೆ ಮಾಡೋಣ! ಕ್ರೀಡೆಯನ್ನು ಗೆಲ್ಲಿಸೋಣ! ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಕ್ರೀಡೆ ವಿಶ್ವವನ್ನು ಒಂದು ಮಾಡಲಿ. ಕೊರೋನಾ ಕಾಲದ ಮನೋಕ್ಲೇಶಗಳಿಗೆ ಪೂರ್ಣ ವಿರಾಮ ಕೊಡಲಿ.

Latest stories

LEAVE A REPLY

Please enter your comment!
Please enter your name here

3 + 5 =