15 C
London
Thursday, April 11, 2024
Homeಫುಟ್ಬಾಲ್ಮೆಸ್ಸಿ ಮೆಸ್ಸಿ ಮೆಸ್ಸಿ ಜಗದಗಲ ಮೆಸ್ಸಿ!

ಮೆಸ್ಸಿ ಮೆಸ್ಸಿ ಮೆಸ್ಸಿ ಜಗದಗಲ ಮೆಸ್ಸಿ!

Date:

Related stories

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...

ಕ್ರೀಡೆಯಿಂದ ಸೌಹಾರ್ದಯುತ ಸಮಾಜ ನಿರ್ಮಾಣ-ಜನಾಬ್ ಅಬ್ದುಲ್ ಮದನಿ

ಕಾರ್ಕಳ-ಇಲ್ಲಿನ ಗಾಂಧಿ ಮೈದಾನದಲ್ಲಿ ಏಪ್ರಿಲ್ 29 ಶುಕ್ರವಾರದಂದು ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ)ಕಾರ್ಕಳ...
spot_imgspot_img
ಇನ್ನು ಫುಟ್ಬಾಲ್ ದೇವರು ಆಡುವುದಿಲ್ಲ!
ನಮಗೆಲ್ಲ ತಿಳಿದಿರುವ ಹಾಗೆ ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ. ಶ್ರೀಮಂತ ಕ್ರೀಡೆ ಕೂಡ! ಅದಕ್ಕೆ ಕಾರಣ ದೇವ ಮಾನವರ ಹಾಗೆ ಇರುವ ಫುಟ್ಬಾಲ್ ಆಟಗಾರರು! ಪೀಲೆ, ಮರಡೋನಾ, ಜಿದಾನೆ ಮೊದಲಾದವರೆಲ್ಲ ಫುಟ್ಬಾಲ್ ಪ್ರೇಮಿಗಳ ಆರಾಧ್ಯ ದೇವರೇ ಆಗಿದ್ದವರು. ಕೋಟಿ ಕೋಟಿ ಬೆಲೆಬಾಳುವವರು.
ವರ್ತಮಾನದ ಫುಟ್ಬಾಲ್ ಜಗತ್ತಿನ ದೇವರು ಲಿಯೋನೆಲ್ ಮೆಸ್ಸಿ ತನ್ನ ಜೀವಮಾನದ ಕೊನೆಯ ಪಂದ್ಯವನ್ನು ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡುತ್ತಾರೆ ಎಂದರೆ ಅವರ ಲಕ್ಷಾಂತರ ಅಭಿಮಾನಿಗಳಿಗೆ ಕರುಳು ಹಿಂಡುವ ಅನುಭವ! ಅದು ರೋಮಾಂಚನದ ಪರಾಕಾಷ್ಠೆ!  ಅದು ಸಹಜ ಕೂಡ.
ಮೆಸ್ಸಿ ಮಾಡಿದೆಲ್ಲವೂ ದಾಖಲೆಗಳೇ! 
———————————–
1987 ಜೂನ್ 24ರಂದು ಜನಿಸಿದ ಮೆಸ್ಸಿ ತನ್ನ ಐದನೇ ವಯಸ್ಸಿಗೆ ಫುಟ್ಬಾಲ್ ಆಡಲು ಆರಂಭ ಮಾಡಿದ್ದರು. 13ನೆ ವಯಸ್ಸಿಗೆ ಕ್ಲಬ್ ಮಟ್ಟದಲ್ಲಿ ಆಡುತ್ತ ವೃತ್ತಿಪರ ಫುಟ್ಬಾಲ್ ಆಟಕ್ಕೆ ಪದಾರ್ಪಣ! ಆರಂಭದಲ್ಲಿ ಆಡಿದ್ದು ನ್ಯುವೆಲ್ ಕ್ಲಬ್ ಮೂಲಕ. ನಾಲ್ಕು ವರ್ಷಗಳ ಅವಧಿಯಲ್ಲಿ ಮೆಸ್ಸಿ ಸೋತದ್ದು ಒಂದೇ ಗೇಮ್!
ಎಡಗಾಲಿಂದ ಬಾಲ್ ಡ್ರಿಬಲ್ ಮಾಡುತ್ತ ಆತನು ಫುಟ್ಬಾಲ್ ಮೈದಾನದಲ್ಲಿ ಚಲಿಸುತ್ತಿದ್ದರೆ ಕಣ್ಣು ರೆಪ್ಪೆ ಮಡಚದೆ  ಅಭಿಮಾನಿಗಳು ಮೆಸ್ಸಿ ಮೆಸ್ಸಿ ಎಂದು ಕೂಗುತ್ತ ಸಪೋರ್ಟ್ ಮಾಡುತ್ತಾರೆ. ಆಟ ಮುಗಿಯುವ ತನಕ ಆ ಉದ್ಗೋಷ ನಿಲ್ಲುವುದೇ ಇಲ್ಲ! ಅವನ ನಿಯಂತ್ರಣಕ್ಕೆ ಬಾಲ್ ಬಂತು ಅಂದರೆ ಅದು ಗೋಲ್ ಆಗದೆ ಮೋಕ್ಷ ಕಾಣುವುದಿಲ್ಲ ಎಂಬಲ್ಲಿಗೆ ಮೆಸ್ಸಿ ವಿಶ್ವ ವಿಜಯಿ! ಫುಟ್ಬಾಲ್ಲಿನ ಲೆಜೆಂಡ್!
17 ನೆ ವಯಸ್ಸಿಗೆ ಬಾರ್ಸಿಲೋನಾ ಕ್ಲಬ್ ಪ್ರವೇಶ! 
———————————-
ಅತ್ಯಂತ ಸಣ್ಣ ವಯಸ್ಸಿಗೇ ತನ್ನ ಡ್ರೀಮ್ ಕ್ಲಬ್ ಆದ ಬಾರ್ಸಿಲೋನಾ ಪ್ರವೇಶ ಮಾಡಿದ ಈ ಅದ್ಭುತ ಫಾರ್ವರ್ಡ್ ಆಟಗಾರ ಮಾಡಿದ್ದೆಲ್ಲ ಮಿರಾಕಲಗಳೇ! ಆ ಕ್ಲಬ್ ಮೂಲಕ ಆರು ಬಾರಿ ಗೋಲ್ಡನ್ ಬೂಟ್ ಪಡೆದ ಪರಿಪೂರ್ಣ ಆಟಗಾರ ಆತ!  ಬಾರ್ಸಿಲೋನಾ ಪರವಾಗಿ 672 ಗೋಲ್ ಹೊಡೆದ ವಿಶ್ವದಾಖಲೆಯು ಆತನ ಹೆಸರಲ್ಲಿ ಇದೆ! ಅದರಲ್ಲಿ 36 ಹ್ಯಾಟ್ರಿಕ್ ಗೋಲಗಳು! ಆತನು ಒಳಗೊಂಡ ಬಾರ್ಸಿಲೋನಾ ಕ್ಲಬ್ ಒಟ್ಟು 35 ಜಾಗತಿಕ ಮಟ್ಟದ ಟ್ರೋಫಿಗಳನ್ನು ಪಡೆದು
ವಿಜೃಂಭಿಸಿತ್ತು! ವಿಶ್ವದ ಶ್ರೇಷ್ಟ ಫುಟ್ಬಾಲ್ ಕ್ಲಬ್ ಎಂದು ಕರೆಸಿಕೊಂಡಿತ್ತು!
ನನ್ನ ಉತ್ತರಾಧಿಕಾರಿ ಎಂದರು ಮರಡೋನಾ!
——————————
ಮೆಸ್ಸಿ ಅರ್ಜೆಂಟೀನಾ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಲು ಯಾವ ತೊಂದರೆ ಕೂಡ ಆಗಲಿಲ್ಲ! ಆಗಾಗ ಕಾಡುತ್ತಿದ್ದ ಹಾರ್ಮೋನ್ ಕೊರತೆಯ ಆರೋಗ್ಯ ಸಮಸ್ಯೆಯನ್ನು ತನ್ನ ಪ್ರಬಲ ಇಚ್ಛಾ ಶಕ್ತಿಯ ಮೂಲಕ ಗೆದ್ದವರು ಮೆಸ್ಸಿ! 2006 ಫೆಬ್ರುವರಿ ತಿಂಗಳಲ್ಲಿ ಅದೇ ಅರ್ಜೆಂಟೀನಾದ ಫುಟ್ಬಾಲ್ ಗಾಡ್  ಮರಡೋನಾ ಅವರು ಮೆಸ್ಸಿಯನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದರು! ಅವರಿಬ್ಬರ ಆಟದಲ್ಲಿ ತುಂಬಾ ಹೋಲಿಕೆ ಇದೆ. ಇಬ್ಬರ ಎತ್ತರ ಆಲ್ಮೋಸ್ಟ್ ಒಂದೇ ಇದೆ. ಇಬ್ಬರೂ ಎಡಗಾಲು ಫಾರ್ವರ್ಡ್ ಆಟಗಾರರು! ಅದರ ಜೊತೆಗೆ ಆಕ್ರಮಣಕ್ಕೆ ಹೆಸರಾದವರು. ರಕ್ಷಣಾತ್ಮಕ ಆಟ ಅವರಿಬ್ಬರಿಗೂ ಒಗ್ಗುವುದೇ ಇಲ್ಲ!
ಅರ್ಜೆಂಟೀನಾ ಪರವಾಗಿ ಮೆಸ್ಸಿ ದಾಖಲೆ!
———————————-
ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರವಾಗಿ ಮೆಸ್ಸಿ ಆಡಲು ಆರಂಭ ಮಾಡಿ ದಶಕಗಳೇ ಸಂದಿದೆ. ಜ್ಯೂನಿಯರ್ ವಿಶ್ವಕಪ್ ಸೇರಿ ಐದು ವಿಶ್ವಕಪ್ ಕೂಟಗಳಲ್ಲಿ ಆತ ಅರ್ಜೆಂಟೀನಾ ಪರವಾಗಿ ಆಡಿ  ದಾಖಲೆ ಬರೆದಾಗಿದೆ. ಪೀಲೆ ಮಾಡಿದ 762 ಗೋಲ್ ವಿಶ್ವ ದಾಖಲೆ ಐವತ್ತು ವರ್ಷ ಅಭಾಧಿತ ಆಗಿತ್ತು! ಅದನ್ನು ಮುರಿಯುವ ಸಾಧ್ಯತೆಯ ಹತ್ತಿರ ಮೆಸ್ಸಿ ಇದ್ದಾರೆ.  ಬಾರ್ಸಿಲೋನಾ ಮತ್ತು ಅರ್ಜೆಂಟೀನಾ ಪರವಾಗಿ ಒಟ್ಟು 957 ಪಂದ್ಯಗಳನ್ನು ಆಡಿರುವ ಮೆಸ್ಸಿ ಇದುವರೆಗೆ ಬಾರಿಸಿದ ಒಟ್ಟು ಗೋಲಗಳ ಸಂಖ್ಯೆ 759 ಅಂದರೆ ನಂಬುವುದು ಕಷ್ಟ! ಐದು ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ದಾಖಲೆ ಅದು ಅದ್ಭುತ. ಒಟ್ಟು 25 ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ದಾಖಲೆ ಅದು ಮೆಸ್ಸಿ ಹೆಸರಲ್ಲಿ ಇದೆ. ಅದರಲ್ಲಿ 18 ಬಾರಿ ಆತ ಅರ್ಜೆಂಟೀನಾ ತಂಡದ ಕ್ಯಾಪ್ಟನ್ ಆಗಿ ಆಡಿದ್ದಾರೆ. ಒಟ್ಟು ಹನ್ನೊಂದು ವಿಶ್ವಕಪ್ ಗೋಲಗಳು ಅದೂ ದಾಖಲೆಯೇ ಆಗಿದೆ! ಅದರ ಜೊತೆಗೆ ಒಲಿಂಪಿಕ್ ಚಿನ್ನದ ಪದಕ ಕೂಡ ಆತನ ಶೋಕೇಸಲ್ಲಿ ಇದೆ!
ಮೆಸ್ಸಿ – ರೆನಾಲ್ಡೋ ಹೋಲಿಕೆ ನಿಲ್ಲುವುದೇ ಇಲ್ಲ!
———————————-
ವರ್ತಮಾನದ ಫುಟ್ಬಾಲ್ ಜಗತ್ತಿನಲ್ಲಿ ಮೆಸ್ಸಿ ಮತ್ತು ಪೋರ್ಚುಗಲ್ ಆಟಗಾರ
ರೆನಾಲ್ಡೋ ಇಬ್ಬರೂ ದಂತಕಥೆಗಳು. ಇಬ್ಬರಿಗೂ ಬಹುದೊಡ್ಡ ಫ್ಯಾನ್ ಫಾಲೋವರ್ಸ್ ಇದೆ. ಪೋರ್ಚುಗಲ್ ಮತ್ತು ಅರ್ಜೆಂಟೀನಾ ಮುಖಾಮುಖಿ ಆದರೆ ಅವರಿಬ್ಬರ ಅಭಿಮಾನಿಗಳು ಮುಗಿಬಿದ್ದು ಮ್ಯಾಚ್ ನೋಡುತ್ತಾರೆ. ಗೋಲ್ ಗಳಿಕೆಯಲ್ಲಿ ರೆನಾಲ್ಡೋ ಅವರು ಮೆಸ್ಸಿಗಿಂತ  ಸ್ವಲ್ಪ ಮುಂದೆ ಇದ್ದಾರೆ. ಆದರೆ ಜನಪ್ರಿಯತೆಯಲ್ಲಿ, ಗೋಲ್ಡನ್ ಬೂಟ್ ಗಳಿಕೆಯಲ್ಲಿ, ಮ್ಯಾಚ್ ಗೆಲ್ಲಿಸಿಕೊಡುವ ಶಕ್ತಿಯಲ್ಲಿ, ಶ್ರೀಮಂತಿಕೆಯಲ್ಲಿ, ಆಕ್ರಮಣಕಾರಿ ಆಟದಲ್ಲಿ ಮೆಸ್ಸಿ ಬಹಳ ಮುಂದಿದ್ದಾರೆ. ಈ ಬಾರಿಯ ಕತಾರ್ ವಿಶ್ವಕಪ್ ಸಾಧನೆಯನ್ನು ಪರಿಗಣಿಸಿದಾಗ ಮೆಸ್ಸಿ ರೊನಾಲ್ಡೋ ಅವರಿಗಿಂತ ಗಾವುದ ದೂರ ಇದ್ದಾರೆ ಎಂದೇ ಹೇಳಬಹುದು!
ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ಮೆಸ್ಸಿ! 
——————————
35 ವರ್ಷ ಪ್ರಾಯದ ಆತನ ಜನಪ್ರಿಯತೆ ಮತ್ತು ಆಟದ ಕಸುವು ಒಂದಿಂಚೂ ಮಾಸಿಲ್ಲ ಅನ್ನುವುದೇ ಭರತವಾಕ್ಯ. ಪ್ರತೀ ಪಂದ್ಯದಲ್ಲೂ ಆತ ಗೋಲ್ ಬಾರಿಸಿದ್ದಾರೆ ಅಥವ ಗೋಲ್ ಗಳಿಕೆಗೆ ಸಹಾಯ ಮಾಡಿದ್ದಾರೆ. ಆತ ಇದ್ದರೆ ತಂಡದ ಆಟಗಾರರಿಗೆ ಬೇರೆ ಪ್ರೇರಣೆ ಬೇಕಾಗುವುದಿಲ್ಲ! ಮೈದಾನದಲ್ಲಿ ಮೆಸ್ಸಿ ಮೆಸ್ಸಿ ಮೆಸ್ಸಿ ಕೂಗು……..ಸಮುದ್ರದ ಅಲೆಗಳ ಹಾಗೆ ಅನುರಣನ ಆಗುವಾಗ ಯಾರಿಗಾದರೂ ರೋಮಾಂಚನ ಆಗುತ್ತದೆ. ಕತಾರ್ ವಿಶ್ವಕಪನಲ್ಲಿ ಈಗಾಗಲೇ ಐದು ಗೋಲ್ ಹೊಡೆದಿರುವ ಮೆಸ್ಸಿ ಮತ್ತೊಂದು ಗೋಲ್ಡನ್ ಬೂಟ್ ರೇಸಲ್ಲಿ ಇದ್ದಾರೆ. ಫೈನಲ್ ಪಂದ್ಯದ ಎದುರಾಳಿ ಫ್ರಾನ್ಸ್ ತಂಡದ ನವೋದಿತ ತಾರೆ ಕೈಲಿನ್ ಎಂಬಪ್ಪೆ ಕೂಡ ಐದು ಗೋಲ್ ಹೊಡೆದಿದ್ದಾರೆ ಎಂಬಲ್ಲಿಗೆ ಫೈನಲ್ ಪಂದ್ಯ ಕ್ರೀಡಾಂಗಣದಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಬಹುದು! ಅದು ತನ್ನ ಕೊನೆಯ ಪಂದ್ಯ ಎಂದು ಮೆಸ್ಸಿ ಘೋಷಣೆ ಮಾಡಿ ಆಗಿದೆ.
ಮೆಸ್ಸಿ ಅರ್ಜೆಂಟೀನಾ ತಂಡವನ್ನು ಗೆಲ್ಲಿಸಿ ಮರಡೋನಾ ಮಾಡಿದ ಸಾಧನೆ ರಿಪೀಟ್ ಮಾಡುತ್ತಾರಾ? ಅತೀ ಹೆಚ್ಚು ಗೋಲ್ ಹೊಡೆದು ಚಿನ್ನದ ಬೂಟ್ ಒಲಿಸಿಕೊಳ್ಳುತ್ತಾರಾ? ಅರ್ಜೆಂಟೀನಾ ರಾಷ್ಟ್ರ ಅವರಿಗೆ ಗೆಲುವಿನ ವಿದಾಯವನ್ನು ಕೋರುತ್ತದೆಯಾ?…..ಇವೆಲ್ಲವೂ ಈ ರವಿವಾರದ ರಾತ್ರಿಯ ಫೈನಲ್ ಪಂದ್ಯದ ಕುತೂಹಲಗಳು.
ಓವರ್ ಟು ಕತಾರ್! 
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

12 + three =