10.1 C
London
Tuesday, April 23, 2024
Homeಫುಟ್ಬಾಲ್ಭಾರತೀಯ ಫುಟ್ಬಾಲ್ ದಂತಕತೆ - ಸುನೀಲ್ ಛೇಟ್ರಿ. ಲೆಜೆಂಡ್ ಆಟಗಾರನಿಗೆ ತಡವಾಗಿ ಆದರೂ ಒಲಿದ ಫಿಫಾ...

ಭಾರತೀಯ ಫುಟ್ಬಾಲ್ ದಂತಕತೆ – ಸುನೀಲ್ ಛೇಟ್ರಿ. ಲೆಜೆಂಡ್ ಆಟಗಾರನಿಗೆ ತಡವಾಗಿ ಆದರೂ ಒಲಿದ ಫಿಫಾ ಗೌರವ!

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಸಾಮಾನ್ಯವಾಗಿ ವಿಶ್ವಮಟ್ಟದ ಫುಟ್ಬಾಲ್ ಆಟಗಾರರು 35 ವರ್ಷ ಆಗುವ ಹೊತ್ತಿಗೆ ನಿವೃತ್ತಿ ಘೋಷಣೆ ಮಾಡುತ್ತಾರೆ. ಯಾಕೆಂದರೆ ಫುಟ್ಬಾಲ್ ಅತೀ ಹೆಚ್ಚು ದೈಹಿಕ ದೃಢತೆ ಮತ್ತು ಕ್ಷಮತೆಗಳನ್ನು ಬೇಡುವ ಆಟ ಆಗಿದೆ.
ಆದರೆ ಈ ಭಾರತೀಯ ಫುಟ್ಬಾಲ್ ಆಟಗಾರನ ಸಾಧನೆಯ ಹಸಿವು ಸದ್ಯಕ್ಕಂತೂ  ತಣಿಯುವ ಯಾವ ಸೂಚನೆಯು ಇಲ್ಲ ಎಂದೆನಿಸುತ್ತದೆ! ವರ್ಷ ಮೂವತ್ತೆಂಟು  ದಾಟಿದರೂ ಆತನ ಚರಿಷ್ಮಾ ಒಂದಿಷ್ಟೂ ಕುಸಿದಿಲ್ಲ! ವೇಗ, ನಿಖರತೆ, ಆಕ್ರಮಣ, ಪಾದಗಳ ಚಲನೆಯ ವೇಗ, ಸ್ಟೆಮಿನಾ ಯಾವುದೂ ಕಡಿಮೆ ಆಗಿಲ್ಲ.
ಆತನೇ ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನಿಲ್ ಛೇಟ್ರಿ!
ಅವರ ಇಡೀ ಕುಟುಂಬವೇ ಫುಟ್ಬಾಲಿಗೆ ಸಮರ್ಪಿತ!
————————————————–
ಸುನೀಲ್ ಛೇಟ್ರಿ ಇಡೀ ಕುಟುಂಬವೇ ಫುಟ್ಬಾಲ್ ಕ್ರೀಡೆಗೆ ಸಮರ್ಪಿತ ಆಗಿರುವುದು ವಿಶೇಷ. ಆತನ ತಂದೆ ಕೂಡ  ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಅವರು ಸೇನಾ ತಂಡದ ಪರವಾಗಿ ಆಡಿದ್ದರು. ಅವರ ಅಕ್ಕಂದಿರು, ತಾಯಿ, ಪ್ರೀತಿ ಮಾಡಿ ಕೈ ಹಿಡಿದ ಹೆಂಡತಿ, ಮಾವ ಎಲ್ಲರೂ ಫುಟ್ಬಾಲ್ ಆಟಗಾರರೇ ಆಗಿದ್ದಾರೆ!
ಅದರಿಂದಾಗಿ ಸುನೀಲ್ ಛೇಟ್ರೀ ಫುಟ್ಬಾಲೀನ  ಪ್ರತಿಭೆಯು ಅಮೇಜಾನ್ ನದಿಯ ವೇಗವನ್ನು ಪಡೆಯಿತು. ಅತೀ ಸಣ್ಣ ವಯಸ್ಸಿಗೇ ಫುಟ್ಬಾಲ್ ಆಡಲು ಆರಂಭ ಮಾಡಿದ ಆತ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಫುಟ್ಬಾಲ್ ಆಟದ  ಧ್ವಜವನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ!
ಸುನೀಲ್ ಪ್ರಯಾಣ ಆರಂಭ ಆದದ್ದು ಹೀಗೆ!
——————————————-
2002ರಲ್ಲಿ ಮೋಹನ್ ಬಗಾನ್ ಕ್ಲಬ್  ಪರ ಆಡುವುದರ ಮೂಲಕ ಸುನೀಲ್ ಪ್ರತಿಭೆಯು ಮೊದಲು ಪ್ರಕಾಶನಕ್ಕೆ ಬಂದಿತು. ಇದುವರೆಗೆ ಒಟ್ಟು 13 ಕ್ಲಬ್ ಮಟ್ಟದ ತಂಡಗಳ ಪರವಾಗಿ ಅವರು ಆಡಿದ್ದು ಯಾರೂ ಮುರಿಯಲು ಸಾಧ್ಯವೆ ಆಗದ ದಾಖಲೆಯನ್ನು ಹೊಂದಿದ್ದಾರೆ! ಸುನೀಲ್ ತಂಡದಲ್ಲಿ  ಇದ್ದರೆ ಗೆಲುವು ಖಚಿತ ಎನ್ನುವ ನಂಬಿಕೆಯು ಈವರೆಗೆ ಎಲ್ಲಿಯೂ ಸೋತಿರುವ ಉದಾಹರಣೆ ಇಲ್ಲ.
ಭಾರತ ಫುಟ್ಬಾಲ್ ತಂಡವು ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ತೀರಾ ಕಳಪೆ ಸಾಧನೆ ಮಾಡುತ್ತಾ ಬಂದಿದ್ದರೂ ಸುನೀಲ್ ಛೇಟ್ರಿ ಅವರ ಅಂತಾರಾಷ್ಟ್ರೀಯ ದಾಖಲೆಗಳು ಇಂದಿಗೂ ಪ್ರಕಾಶಮಾನ ಆಗಿವೆ. ಆದಕ್ಕೆ ಕಾರಣ ಆತನ ಶ್ರೇಷ್ಟವಾದ ಪ್ರತಿಭೆ, ಬೆವರು ಸುರಿಸುವ ಸಾಧನೆ ಮತ್ತು ಕಠಿಣ ಪರಿಶ್ರಮ ಎಂದರೆ ಖಂಡಿತ ತಪ್ಪಿಲ್ಲ. ಆತನ ಆಟದಲ್ಲಿ ತೀವ್ರ ಆಕ್ರಮಣ ಇದೆ. ಆದರೆ ಆತ ಮೈದಾನದಲ್ಲಿ ಈವರೆಗೆ ತಾಳ್ಮೆ ತಪ್ಪಿದ್ದೇ ಇಲ್ಲ!
ಜಾಗತಿಕ ಮಟ್ಟದಲ್ಲಿ ಸುನೀಲ್ ಈಗ ನಂಬರ್ 3!
———————————————–
ಸುನೀಲ್ ಈವರೆಗೆ 131 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಹೊಡೆದ ಗೋಲುಗಳ ಸಂಖ್ಯೆ 84! ಕ್ರಿಶ್ಚಿಯನ್ ರೆನಾಲ್ದೋ ಮತ್ತು ಲಿಯೋನೆಲ್ ಮೆಸ್ಸಿ ಬಿಟ್ಟರೆ ಮೂರನೇ ಸ್ಥಾನದಲ್ಲಿ ಈಗ ಇರುವುದು ಸುನೀಲ್ ಛೇಟ್ರೀ ಮಾತ್ರ!
ಅವರಿಬ್ಬರಿಗೂ ಸಿಕ್ಕಿದ ಫೋಕಸ್ ಮತ್ತು ಅವಕಾಶಗಳು ನಮ್ಮ ಸುನೀಲ್ ಅವರಿಗೆ ಸಿಕ್ಕಿದ್ದರೆ ಅವರು ಖಂಡಿತವಾಗಿ ಜಾಗತಿಕ ದಾಖಲೆಗಳನ್ನು ಮಾಡುವ ಸಾಧ್ಯತೆ ಇತ್ತು. ಆದರೆ ದುರದೃಷ್ಟ ಎಂದರೆ ಆತನಿಗೆ ಈವರೆಗೆ ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ಆಡುವ ಅವಕಾಶವು ದೊರೆತಿಲ್ಲ ಅನ್ನುವುದು!
ಕ್ರಿಕೆಟ್ ಆಟ  ಭಾರತದ ನಾಡಿ ಮಿಡಿತವೇ ಆಗಿರುವುದರಿಂದ  ಬೇರೆ ಎಲ್ಲ ಆಟಗಳು ಮಸುಕು ಆಗಿರುವುದು ನಿಜವಾದ ದುರಂತ.
ಆದರೆ ಸುನೀಲ್ ಛೇಟ್ರಿ ಸಾಧನೆಗೆ ಎಣೆಯೇ ಇಲ್ಲ!
———————————————–
ಭಾರತದ ‘ದ ಬೆಸ್ಟ್  ಫಾರ್ವರ್ಡ್’  ಆಟಗಾರ ಆಗಿರುವ ಸುನೀಲ್ ಗೋಲ್ ಬಾರಿಸುವ ಯಾವ ಅವಕಾಶವನ್ನೂ ಈವರೆಗೆ ಕೈ ಚೆಲ್ಲಿದ ಪ್ರಸಂಗ ಇಲ್ಲ. ಮೂರು ಖಂಡಗಳಲ್ಲಿ ಆಡಿರುವ ಏಕೈಕ ಭಾರತೀಯ ಆಟಗಾರ ಅವರು.
AIFF (ಭಾರತೀಯ ಫುಟ್ಬಾಲ್ ಫೆಡರೇಷನ್) ನೀಡುವ ವರ್ಷದ ಫುಟ್ಬಾಲ್ ಆಟಗಾರ ಪ್ರಶಸ್ತಿಯನ್ನು ಏಳು ಬಾರಿ ಪಡೆದಿರುವ ಏಕೈಕ ಆಟಗಾರ ಅವರು! ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳನ್ನು  ಈಗಾಗಲೇ ಅವರು ಗೆದ್ದಾಗಿದೆ! ಎಲ್ಲಕಿಂತ ಹೆಚ್ಚಾಗಿ ದೇಶದ ಶ್ರೇಷ್ಠ ಕ್ರೀಡಾ ಪ್ರಶಸ್ತಿಯಾದ
‘ಖೇಲ್ ರತ್ನ ‘ ಪ್ರಶಸ್ತಿಯನ್ನು  ಪಡೆದಿರುವ ಮೊತ್ತಮೊದಲ ಫುಟ್ಬಾಲ್ ಆಟಗಾರ ಅವರು! ಏಷಿಯನ್ ಫುಟ್ಬಾಲ್ ಒಕ್ಕೂಟ ಅವರಿಗೆ ‘ಏಷಿಯಾದ ಫುಟ್ಬಾಲ್ ಐಕಾನ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಸುನೀಲ್ ಛೇಟ್ರಿ ಭಾರತದ ಬಹುಮೂಲ್ಯ ಆಟಗಾರ.
—————————————————
ಈಗಲೂ ಸುನೀಲ್ ಭಾರತದ  ಅತ್ಯಂತ ಬಹುಮೂಲ್ಯವಾದ  ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. 38ರ ಇಳಿ ಹರೆಯದಲ್ಲಿ ಕೂಡ ಅವರನ್ನು ಖರೀದಿ ಮಾಡಲು ದೇಶದ ಶ್ರೀಮಂತ ಕ್ಲಬಗಳು ತುದಿಗಾಲಲ್ಲಿ ನಿಂತಿವೆ ಅನ್ನೋದು ಅವರ ಪವರ್ ! ಈಗ ಬೆಂಗಳೂರು ಕ್ಲಬ್ ಪರವಾಗಿ ಅವರು ಆಡುತ್ತಿದ್ದಾರೆ.
ತಡವಾಗಿ ದೊರೆಯಿತು ಅಂತಾರಾಷ್ಟ್ರೀಯ ಮಾನ್ಯತೆ!
————————————————-
ಇಷ್ಟೆಲ್ಲ ಸಾಧನೆಯನ್ನು  ಮಾಡಿದ್ದರೂ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫಿಫಾ ಅವರನ್ನು ಗುರುತಿಸಿಲ್ಲ ಎನ್ನುವ ನೋವು ಪ್ರತಿಯೊಬ್ಬ ಭಾರತೀಯನಿಗೂ ಇತ್ತು. ಸುನೀಲ್ ಕೂಡ ಇದರ ಬಗ್ಗೆ ಬಹಳ ದುಃಖ ವ್ಯಕ್ತ ಪಡಿಸಿದ್ದರು. ಆದರೆ ಈಗ ಆ ನೋವಿಗೆ ಒಂದು ಉಪಶಮನ ದೊರೆತಿದೆ.
ಫಿಫಾ ಈಗ ಸುನೀಲ್ ಛೇಟ್ರಿ ಅವರ ಬಗ್ಗೆ ಒಂದು ಸುಂದರ  ಸಾಕ್ಷ್ಯಚಿತ್ರವನ್ನು ಸಿದ್ಧಮಾಡಿ ಅದನ್ನು ತನ್ನ ಅಧಿಕೃತ ವೆಬ್ ತಾಣದಲ್ಲಿ ಅಪ್ಲೋಡ್ ಮಾಡಿದೆ! ಅದು ಮೂರು ಸಂಚಿಕೆ  ಹೊಂದಿದ್ದು ಅದರಲ್ಲಿ ಜಗತ್ತಿನ ಮಹಾ ಮಹಾ ಫುಟ್ಬಾಲ್ ಆಟಗಾರರು ಸುನೀಲ್ ಛೇಟ್ರಿ ಬಗ್ಗೆ ಅಭಿಮಾನದ ಮಾತು ಹೇಳಿದ್ದಾರೆ. ಮೆಸ್ಸಿ, ರೊನಾಲ್ಡೋ ಇಬ್ಬರೂ ಸುನೀಲ್ ಬಗ್ಗೆ ಪ್ರೀತಿಯಿಂದ ಮಾತಾಡಿದ್ದಾರೆ. ಈ ಗೌರವ ಪಡೆದಿರುವ ಮೊದಲ ಏಷಿಯಾದ ಫುಟ್ಬಾಲ್ ಆಟಗಾರ ಸುನೀಲ್ !
ಫಿಫಾ ಆ ವೀಡಿಯೋದ ಕೊನೆಗೆ ಸುನೀಲ್ ಅವರನ್ನು ‘ಭಾರತದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ‘ ಎಂದು ಶ್ಲಾಘಿಸಿದೆ. ಇನ್ನು ಒಂದೇ ತಿಂಗಳಲ್ಲಿ ಫಿಫಾ ವಿಶ್ವಕಪ್ ಆರಂಭವಾಗುವ ಸಂದರ್ಭದಲ್ಲಿ ಭಾರತೀಯ ಆಟಗಾರನಿಗೆ ಸಿಕ್ಕಿದ ಈ ಮಾನ್ಯತೆಯಿಂದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಆಗಿದೆ!
ಇಪ್ಪತ್ತು ವರ್ಷಗಳಿಂದ ಜಾಗತಿಕ ಫುಟ್ಬಾಲನ್ನು ಆಡುತ್ತ ಬಂದಿರುವ ಸುನೀಲ್ ಛೇಟ್ರಿ ಅವರ ಸುವರ್ಣ ಸಾಧನೆಯ ಶಿಖರಬಿಂದು ಈ ಗೌರವ!

Latest stories

LEAVE A REPLY

Please enter your comment!
Please enter your name here

fifteen + 5 =