ಕ್ರಿಕೆಟ್ಹೊಸ ದಾಖಲೆಯತ್ತ ದುಬೈನ ರಾಹುಲ್ ದ್ರಾವಿಡ್ ಕಪ್

ಹೊಸ ದಾಖಲೆಯತ್ತ ದುಬೈನ ರಾಹುಲ್ ದ್ರಾವಿಡ್ ಕಪ್

-

- Advertisment -spot_img

*ಹೊಸ ದಾಖಲೆಯತ್ತ ದುಬೈನ ರಾಹುಲ್ ದ್ರಾವಿಡ್ ಕಪ್*

ಸಂಯುಕ್ತ ಅರಬ್ ರಾಷ್ಟ್ರದ ದುಬೈನಲ್ಲಿ ಉಡುಪಿ ಸೂರಾಲು ಮೂಲದ ರಾಹುಲ್ ದ್ರಾವಿಡರ ಮಹಾನ್ ಅಭಿಮಾನಿ ಶ್ರೀವಿಠಲ ರಿಶಾನ್ ನಾಯಕ್ ಆಯೋಜಿಸುತ್ತಿರುವ ಮಿಸ್ಟರ್ ರಾಹುಲ್ ದ್ರಾವಿಡ್ ಕ್ರಿಕೆಟ್ ಕಪ್ ನಾಲ್ಕನೇ ಸುತ್ತಿನ ಪಂದ್ಯಾಟಗಳು ವಿನೂತನ ದಾಖಲೆಗಳೊಂದಿಗೆ ನಿರೀಕ್ಷೆಗೂ ಮೀರಿ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯುತ್ತಿದೆ.

ನಾಲ್ಕನೇ ಸುತ್ತಿನ ಮೊದಲ ಪಂದ್ಯಾವಳಿಯಲ್ಲಿ ಗಲ್ಫ್ ಗೆಳೆಯರ ಕ್ರಿಕೆಟ್ ಕ್ಲಬ್ ತಂಡವು ಬಲಿಷ್ಠ ಟೆಕ್ನೋ ಟೈಟಾನ್ಸ್ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 11.2 ಓವರಗಳಲ್ಲಿ ತನ್ನೆಲ್ಲಾ ವಿಕೆಟಗಳನ್ನು ಕಳೆದುಕೊಂಡು ಪಂದ್ಯಾಕೂಟದ ಈವರೆಗಿನ ಕನಿಷ್ಠ ಮೊತ್ತ 69ಕ್ಕೆ ಇನ್ನಿಂಗ್ಸನ್ನು ಕೊನೆಗೊಳಿಸಿತು. ಇದಕ್ಕುತ್ತರವಾಗಿ ಟೆಕ್ನೋಟೈಟಾನ್ಸ್ ತಂಡವು ಕೇವಲ 4.4 ಓವರಗಳಲ್ಲಿ ನಾಲಕ್ಕು ವಿಕೆಟ್ ಕಳೆದುಕೊಂಡು 15.24 ಸರಾಸರಿಯ ಗರಿಷ್ಠ ದಾಖಲೆ ರನ್ ದರದಲ್ಲಿ 71 ರನ್ ಗಳಿಸಿ ಪಂದ್ಯಾವಳಿಯಲ್ಲಿ ಅತ್ಯಂತ ವೇಗದ ವಿಜಯವನ್ನು ಪ್ರತಿಷ್ಠಾಪಿಸಿತು.13 ಚೆಂಡುಗಳಲ್ಲಿ 5 ಗಗನಚುಂಬಿ ಸಿಕ್ಸರಗಳನ್ನು ಸಿಡಿಸಿ 34 ರನ್ ಗಳಿಸಿ ಒಂದು ಅಮೂಲ್ಯ ವಿಕೆಟ್ ಪಡೆದ ಟೆಕ್ನೋಟೈಟಾನ್ಸ್ ತಂಡದ ಮಂಗಳೂರು ಕದ್ರಿಯ ವೈಭವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಎರಡನೇಯ ಪಂದ್ಯದಲ್ಲಿ ಸ್ಪಯಿಕರ್ಸ್ ಇಲೆವೆನ್ ತಂಡವು ಝನ್ನು ಅಲನ್ ವಿರುದ್ಧ 14.5 ಓವರ್ ಗಳಲ್ಲಿ ಎಲ್ಲಾ ವಿಕೆಟಗಳನ್ನು ಕಳೆದುಕೊಂಡು 200 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.ಈ ಗುರಿಯನ್ನು ಬೆಂಬತ್ತಿದ ಝನ್ನು ಅಲನ್ ತಂಡವು ಸ್ಪಯಿಕರ್ಸ್ ತಂಡದ ಫೈಜಲ್ ಅಹ್ಮದರ ತೀಕ್ಷ್ಣದಾಳಿಗೆ ತಲೆಬಾಗಿ 11.4 ಓವರಗಳಲ್ಲಿ 121 ರನ್ನುಗಳಿಗೆ ತನ್ನೆಲ್ಲಾ ವಿಕೆಟುಗಳನ್ನು ಒಪ್ಪಿಸಿ 79 ರನ್ನುಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.ಮೂರು
ಓವರಗಳಲ್ಲಿ ಝನ್ನು ಇಲೆವೆನ್ ತಂಡದ ಪ್ರಮುಖ ನಾಲಕ್ಕು ವಿಕೆಟ್ ಉರುಳಿಸಿದ ಫೈಜಲ್ ಅಹ್ಮದ್ ಅರ್ಹವಾಗಿಯೇ ಪಂದ್ಯಪುರುಷೋತ್ತಮ ಪ್ರಶಸ್ತಿ ಗಳಿಸಿದರು.

ಮೂರನೇ ಪಂದ್ಯದಲ್ಲಿ ಫ್ರೆಂಡ್ಸ್ ಕ್ಲಬ್ ದುಬೈ ತಂಡವು ಮೊದಲು ಬ್ಯಾಟ್ ಮಾಡಿ ಗೋಲ್ಡನ್ ಸಿಟಿಬಾಯ್ಸ್ ವಿರುದ್ಧ 15 ಓವರ್ ಗಳಲ್ಲಿ 179 ರನ್ನುಗಳನ್ನು ಪೇರಿಸಿತು.ಈ ಮೊತ್ತವನ್ನು ತಲುಪಲು ಯತ್ನಿಸಿದ ಗೋಲ್ಡನ್ ಸಿಟಿ ಬಾಯ್ಸ್ ತಂಡವು 15ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ132 ರನ್ ಗಳಿಸಲಷ್ಟೇ ಶಕ್ತವಾಗಿ,47ರನ್ ಅಂತರದಲ್ಲಿ ಶರಣಾಯಿತು.34 ಚೆಂಡುಗಳಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಯೊಂದಿಗೆ 98 ರನ್ ಗಳಿಸಿ ಎರಡು ರನ್ನುಗಳಿಂದ ಶತಕದಿಂದ ವಂಚಿತರಾದರೂ ಪ್ರೆಂಡ್ಸ್ ಕ್ಲಬ್ ದುಬೈ ತಂಡದ ವಿಜಯಕ್ಕೆ ಕಾರಣರಾದ ಯಾಸಿನ್ ಪಂದ್ಯದ ವ್ಯಕ್ತಿಯಾಗಿ ಪುರಸ್ಕೃತರಾದರು.
ಬೌಲಿಂಗ್ನಲ್ಲೂ ಮಿಂಚಿದ ಯಾಸಿನ ಒಂದು ವಿಕೆಟನ್ನೂ ಪಡೆದುಕೊಂಡರು.ಯಾಸಿನ್ ಆಟದ ವೈಖರಿಯು ಸಾಮಾಜಿಕ ಜಾಲತಾಣವೂ ಸೇರಿದಂತೆ ಭಾರೀ ಜನಮೆಚ್ಚುಗೆಗೆ ಪಾತ್ರವಾಯಿತು.

ನಾಲ್ಕನೇ ಪಂದ್ಯದಲ್ಲಿ ಸಿಯಾಲ್ಕೊಟ್ ರೈಸಿಂಗ್ ಸ್ಟಾರ್ ಕ್ರಿಕೆಟರ್ಸ್ ತಂಡವು ಮೊದಲು ಬ್ಯಾಟ್ ಮಾಡಿ ಲೆಜೆಂಡ್ಸ್ ಕಪ್ ಯುಎಇ ತಂಡದ ವಿರುದ್ಧ 9 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು.ಈ ಮೊತ್ತವನ್ನು ಬೆಂಬತ್ತಿದ ಲೆಜೆಂಡ್ಸ್ ಕಪ್ ಯುಎಇ ತಂಡವು ದಿಟ್ಟ ಹೋರಾಟ ನೀಡಿದರೂ ಅಂತಿಮವಾಗಿ 19 ರನ್ನುಗಳಿಂದ ಹಿಂದುಳಿದು ಸೋತಿತು.ಸಿಯಾಲಕೊಟ್ ತಂಡದ ಸವ್ಯಸಾಚಿ ಯೆಮ್ಜಾಕಿ 16 ಚೆಂಡುಗಳಲ್ಲಿ ಎರಡು ಆಕರ್ಷಕ ಸಿಕ್ಸರ್ ಒಂದು ಬೌಂಡರಿಯೊಂದಿಗೆ 26 ರನ್ ಗಳಿಸಿದ್ದು ಮಾತ್ರವಲ್ಲ ಬೌಲಿಂಗನಲ್ಲೂ ಮಿಂಚಿ 3 ಓವರಗಳಲ್ಲಿ 2 ವಿಕೆಟಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು.

ಐದನೇಯ ಪಂದ್ಯದಲ್ಲಿ ಬಲಾಡ್ಯ ಬ್ಲಿಟ್ಜ್ ವಾರಿಯರ್ ಡಿಎಕ್ಸಬಿ ತಂಡವು ಬ್ಲೂ ಸ್ಕೈ ಇಲೆವೆನ್ ತಂಡದ ವಿರುದ್ಧ 7 ವಿಕೆಟ್ ಕಳೆದುಕೊಂಡು 159ರನ್ ಗಳಿಸಿತು.ಶ್ರೇಷ್ಠ ದಾಂಡಿಗರನ್ನು ಬ್ಲಿಟ್ಜ್ ವಾರಿಯರ್ ಹೊಂದಿದ್ದರೂ ಬ್ಲೂಸ್ಕೈತಂಡದ ಆಸೀಫ್ ಹಾಸಿಮ್ ರ ಬೌಲಿಂಗ್ ಮೋಡಿಗೆ ಬೆದರಿ ಬೃಹತ್ ಮೊತ್ತ ಸೇರಿಸಲು ವಿಫಲವಾಯಿತು.ಈ ಗುರಿಯನ್ನು ಬೆಂಬತ್ತಿದ ಬ್ಲೂ ಸ್ಕೈ ಇಲೆವೆನ್ ತಂಡವು 13 ಓವರಗಳಲ್ಲಿ ಒಂದಿಷ್ಟೂ ಆತಂಕವಿಲ್ಲದೆ 160ರನ್ನುಗಳನ್ನು ಸಲೀಸಾಗಿ ಗಳಿಸಿ ವಿಜಯಮಾಲೆಯನ್ನು ಧರಿಸಿತು.ಬ್ಲೂಸ್ಕೈತಂಡದ ಅಸೀಫ್ ಹಾಸಿಮ್ 3 ಓವರ್ ಗಳಲ್ಲಿ ಕೇವಲ 18 ರನ್ ನೀಡಿ ಮೂರು ವಿಕೆಟ್ ಪಡೆಯುವುದರ ಮೂಲಕ ಪಂದ್ಯದ ಉತ್ಕೃಷ್ಟವ್ಯಕ್ತಿಯಾಗಿ ಅಭಿನಂದಿತರಾದರು.

ಆರನೇ ಪಂದ್ಯದಲ್ಲಿ ಫಾಲ್ಕನ್ಸ್ ಅಜಮಾನ್ ತಂಡವು ಓಜಿಎಸ್ ಮೆಡಿಕಲ್ಸ್ ತಂಡದ ವಿರುದ್ಧ 6ವಿಕೆಟ್ ಕಳೆದುಕೊಂಡು 185 ರನ್ನುಗಳ ಉತ್ತಮ ಮೊತ್ತ ಗಳಿಸಿತು.ಈ ಮೊತ್ತವನ್ನು ಬೆನ್ನತ್ತಿದ್ದ ಓಜಿಎಸ್ ಮೆಡಿಕಲ್ ತಂಡವು 7 ವಿಕೆಟ್ ಕಳೆದುಕೊಂಡು 141 ರನ್ನುಗಳಿಸಿ 44ರನ್ನುಗಳ ಅಂತರದಲ್ಲಿ ಪರಾಜಿತವಾಯಿತು.38 ಚೆಂಡುಗಳಲ್ಲಿ ನಾಲಕ್ಕು ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಯೊಂದಿಗೆ 58 ರನ್ ಸಿಡಿಸಿದ ಫಾಲ್ಕನ್ಸ್ ಅಜಮಾನ್ ತಂಡದ ಎಸ್ಸೆಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಯುಕ್ತ ಅರಬ್ ರಾಷ್ಟ್ರದ ದುಬೈನಲ್ಲಿ ವಿಠಲ್ ರಿಶಾನ್ ನಾಯಕರ ಸಾರಥ್ಯದಲ್ಲಿ ಸಾಗುತ್ತಿರುವ ಈ ರಾಹುಲ್ ದ್ರಾವಿಡ ಕಪ್ ಪಂದ್ಯಾಟವನ್ನು ಸಾಮಾಜಿಕ ಜಾಲತಾಣದ ದೃಶ್ಯವಾಹಿನಿಯ ಮುಖಾಂತರ ಈ ವರೆಗೆ 11000 ವೀಕ್ಷಕರು ನೇರ ಪ್ರಸಾರದಲ್ಲಿ ವೀಕ್ಷಿಸಿರುವುದು ದುಬೈನ ಟೆನಿಸ್ಬಾಲ್ ಕ್ರಿಕೆಟ್ ಸ್ಪರ್ಧಾಕೂಟದಲ್ಲಿ ನೂತನ ದಾಖಲೆ.ಜೊತೆಗೆ ಈ ಪಂದ್ಯಾಟವು ಬೌಲಿಂಗ್ ಹಾಗೂ ಬ್ಯಾಟಿಂಗನಲ್ಲಿ ಹೊಮ್ಮುತ್ತಿರುವ ಅನೇಕ ನೂತನ ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ.

ಈ ನಡುವೆ ಭಾರತದ ಪ್ರಸಿದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರ,ವೇಗದ ಬೌಲರ್ ಶ್ರೀಶಾಂತ್ ಅವರು ಈ ಪಂದ್ಯಾವಳಿಯ ಸಂಘಟಕ ವಿಠಲ್ ರಿಶಾನ್ ನಾಯಕರನ್ನು ದುಬೈನಲ್ಲಿ ಭೇಟಿ ಮಾಡಿ “ರಾಹುಲ್ ದ್ರಾವಿಡ ಕ್ರಿಕೆಟ್ ಕಪ್” ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪಂದ್ಯಾಕೂಟದ ಯಶಸ್ಸಿಗೆ ತುಂಬು ಹೃದಯದಿಂದ ಹಾರೈಸಿದ್ದಾರೆ.

– ಪಿ‌.ಲಾತವ್ಯ ಆಚಾರ್ಯ

LEAVE A REPLY

Please enter your comment!
Please enter your name here

seventeen − eleven =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you