ಕ್ರಿಕೆಟ್ದುಬೈನಲ್ಲಿ ಕನ್ನಡಿಗರ ಕ್ರೀಡಾ ಹಬ್ಬ- ಯುನೈಟೆಡ್ ಕಾಪು ಟ್ರೋಫಿ-2022 ಟೀಮ್ ಎಲಿಗೆಂಟ್...

ದುಬೈನಲ್ಲಿ ಕನ್ನಡಿಗರ ಕ್ರೀಡಾ ಹಬ್ಬ- ಯುನೈಟೆಡ್ ಕಾಪು ಟ್ರೋಫಿ-2022 ಟೀಮ್ ಎಲಿಗೆಂಟ್ ಚಾಂಪಿಯನ್ಸ್

-

- Advertisment -spot_img
ದುಬೈ-ಅರಬ್ ರಾಷ್ಟ್ರ ಯು‌.ಎ‌.ಇ ಶಾರ್ಜಾದ ಅಲ್ ಧಾಯಿದ್ ಮೈದಾನದಲ್ಲಿ ಸ್ಪಿನ್ ಝೋನ್ ಮತ್ತು ರಿಚ್ಮಂಡ್ ದುಬೈ ಪ್ರಾಯೋಜಕತ್ವದಲ್ಲಿ  ಅಭೂತಪೂರ್ವ,ಅದ್ಧೂರಿ,ಯಶಸ್ವಿಯಾಗಿ 3 ನೇ ಬಾರಿಗೆ  ಜರುಗಿದ ಯುನೈಟೆಡ್ ಕಾಪು ಟ್ರೋಫಿ 2022 ಚಾಂಪಿಯನ್ಸ್ ಪಟ್ಟವನ್ನು  ಟೀಮ್ ಎಲಿಗೆಂಟ್ ಅಲಂಕರಿಸಿತು‌.
ಉಡುಪಿ ಮಂಗಳೂರು  ಪರಿಸರದ ಆಟಗಾರರನ್ನೊಳಗೊಂಡ ಒಟ್ಟು 8 ಪ್ರತಿಷ್ಠಿತ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು.
ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ ಫೈನಲ್ ನಲ್ಲಿ ಟೀಮ್ ಎಲಿಗೆಂಟ್,ನವೀನ್ ಇಲೆವೆನ್ ತಂಡದ ವಿರುದ್ಧ ರೋಚಕ ಗೆಲುವನ್ನು ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಟೂರ್ನಮೆಂಟ್ ನ ಬೆಸ್ಟ್ ಬೌಲರ್ ಪ್ರಶಸ್ತಿ ನವೀನ್ ಇಲೆವೆನ್ ಶಾಜಾನ್ ಮತ್ತು ಟೀಮ್ ಎಲಿಗೆಂಟ್ ನ ಸಫ್ವಾನ್ ಬೆಸ್ಟ್ ಬ್ಯಾಟರ್ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಕಾಪು ಪರಿಸರದ ಪ್ರಸಿದ್ಧ ಆಟಗಾರರಾದ ಶಾಕಿರ್ ವಿಟ್ಲ,ಫೈಜಲ್ ಕಾಪು,ಆಶಿಕ್ ಬೆಳಪು,ಶಫಿ ಮತ್ತು ಆದಿಲ್ ಮುಲ್ಲಾ ಇವರೆಲ್ಲರ ಸಾರಥ್ಯದಲ್ಲಿ, ನಡೆದ 3 ನೇ ಆವೃತ್ತಿಯ ಯುನೈಟೆಡ್ ಕಾಪು ಟ್ರೋಫಿ-2022 ಅತ್ಯಂತ ಶಿಸ್ತುಬದ್ಧ ಹಾಗೂ ಅದ್ಧೂರಿಯಾಗಿ ನಡೆದಿದ್ದು,ಅರಬ್ ರಾಷ್ಟ್ರದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾಟಗಳಲ್ಲೊಂದಾಗಿ ಗುರುತಿಸಿಕೊಂಡು ಮನೆಮಾತಾಗಿದೆ.
ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಿತು ಈ ಸಂದರ್ಭ ಮುಖ್ಯ ಅತಿಥಿಯಾಗಿ ಡಾ.ಮೊಹಮ್ಮದ್ ಖಾಲಿದ್ ಅಜ್ಮನ್,ದೀಪಕ್ ಡಿ.ಜೆ ದುಬೈ, ಎಸ್‌.ಎಫ್.ಎಸ್ ಫ್ರೈಟ್ ಸರ್ವಿಸ್ ದುಬೈ ನ ಶಾಹ್ನವಾಜ್ ಹುಸೇನ್ ,ರೆಹಾನ್ ರಿಚ್ಮಂಡ್ ದುಬೈ,ಸ್ಪಿನ್ ಝೋನ್ ಫೈಸಲ್ ಅಬ್ದುಲ್ ಹಮೀದ್,ಸುಹೇಲ್ ಎಕ್ಸ್ಪರ್ಟ್ ದಾಫ್ಜಾ ದುಬೈ,ಹಸ್ನಾ ಡೆವೆಲಪರ್ಸ್ ನ  ಆದಿಲ್ ಮತ್ತು ಯಾಸೀನ್ ಭಾಗವಹಿಸಿ ಪಂದ್ಯಾಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಡಾ.ಉರಾಳ್ಸ್ ವೆರಿಕೋಸ್ ವೈನ್ಸ್ ಭಾರತ ಇವರು ಕೂಡ  ಟೂರ್ನಮೆಂಟ್ ನ ಸಹಪ್ರಾಯೋಜಕರಾಗಿ ಅತ್ಯುತ್ತಮ ಸಹಕಾರ ನೀಡಿದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

18 + 5 =

Latest news

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’   ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಚಿತ್ರದುರ್ಗ ಇವರ ವತಿಯಿಂದ ಕರ್ನಾಟಕ...

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ ಬೆಂಗಳೂರು ಉತ್ತರದ ಯಲಹಂಕ ನ್ಯೂಟೌನ್‌ನ ಹೊಯ್ಸಳ ಮೈದಾನದಲ್ಲಿ ಮೇ 29, 30 ಮತ್ತು 31ರಂದು “ಯಲಹಂಕ...

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ ಉಡುಪಿ ಜಿಲ್ಲೆಯ ಕಡಿಯಾಳಿ ಶಾಲಾ ಮೈದಾನದಲ್ಲಿ ಮೇ 24, 2026ರಂದು “ಸೈಮಂಡ್ಸ್ ಪ್ರೀಮಿಯರ್ ಲೀಗ್...

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್ ಕಟಪಾಡಿ : ಯುವಕ ಸೇವಾದಳ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ,...
- Advertisement -spot_imgspot_img

ಬೈಂದೂರಿನಲ್ಲಿ ಆರಂಭವಾದ “ವಿಕ್ರಂ ಟ್ರೋಫಿ-2026” ಕ್ರಿಕೆಟ್ ಸಂಭ್ರಮ;  ಇಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು

ಬೈಂದೂರಿನಲ್ಲಿ ಆರಂಭವಾದ “ವಿಕ್ರಂ ಟ್ರೋಫಿ-2026” ಕ್ರಿಕೆಟ್ ಸಂಭ್ರಮ;  ಇಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಬೈಂದೂರು : ವಿಕ್ರಂ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಹಾಗೂ ಉಡುಪಿ ಜಿಲ್ಲಾ...

ಮಹಿಳಾ ಅಂಡರ್-15 ಕ್ರಿಕೆಟ್ ತಂಡಕ್ಕೆ ಸಮೃದ್ಧಿ ಆಯ್ಕೆ

ಮಹಿಳಾ ಅಂಡರ್-15 ಕ್ರಿಕೆಟ್ ತಂಡಕ್ಕೆ ಸಮೃದ್ಧಿ ಆಯ್ಕೆ ಉಡುಪಿ ಜಿಲ್ಲೆಯ ಪ್ರತಿಭಾವಂತ ಕ್ರಿಕೆಟಿಗೆಯಾದ ಸಮೃದ್ಧಿ ಅವರು ಮಹಿಳಾ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ತಂಡಕ್ಕೆ ಆಲ್‌ರೌಂಡರ್‌...

Must read

- Advertisement -spot_imgspot_img

You might also likeRELATED
Recommended to you