Categories
ಕ್ರಿಕೆಟ್

ಎಮ್.ಎನ್ ಕಪ್-2022 ಮಿಂಚಿದ ನಿತಿನ್.ಮುಲ್ಕಿ, ಇಬ್ರಾಹಿಂ ಆತ್ರಾಡಿ-ಸಿಟಿ ಕ್ರಿಕೆಟ್ ಕ್ಲಬ್ ತೀರ್ಥಹಳ್ಳಿಗೆ ಪ್ರಶಸ್ತಿ

ಬೆಂಗಳೂರು-ಎಮ್.ಎನ್‌.ಗ್ರೂಪ್ಸ್ ಬೆಂಗಳೂರು ಇವರ ಆಶ್ರಯದಲ್ಲಿ ಬೆಂಗಳೂರಿನ ಅಶೋಕ ಇಂಟರ್ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆದ 40ರ ವಯೋಮಿತಿ ಯ  ಎಮ್.ಎನ್.ಕಪ್-2022-ಟಿ-20 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ನಿತಿನ್.ಜಿ.ಮುಲ್ಕಿ  ಬೆಸ್ಟ್ ಬ್ಯಾಟರ್ ಗೌರವಕ್ಕೆ ಭಾಜನರಾದರು.
ಸಿಟಿ ಕ್ರಿಕೆಟ್ ಕ್ಲಬ್ ತೀರ್ಥಹಳ್ಳಿ ತಂಡದ ಪರವಾಗಿ ಆಡಿದ ನಿತಿನ್‌.ಜಿ.ಮುಲ್ಕಿ ತಾನಾಡಿದ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 94 ರನ್ ಸಿಡಿಸಿದ್ದರು.ಇದರಲ್ಲಿ ಭರ್ಜರಿ 5 ಸಿಕ್ಸರ್ ಮತ್ತು 10 ಬೌಂಡರಿಗಳು ಒಳಗೊಂಡಿತ್ತು.
ದ್ವಿತೀಯ ಪಂದ್ಯದಲ್ಲಿ 38 ಎಸೆತಗಳಲ್ಲಿ 10 ಮನಮೋಹಕ ಬೌಂಡರಿಗಳ ನೆರವಿನಿಂದ 55 ರನ್ ಸಿಡಿಸಿದ್ದರು.ಫೈನಲ್ ನಲ್ಲಿ ಪಿ.ಎಲ್.ಗ್ಲೋಬಲ್ ತಂಡದ ವಿರುದ್ಧ ಜಯಗಳಿಸಿ ಸಿಟಿ ಕ್ರಿಕೆಟ್ ಕ್ಲಬ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
*ಇಬ್ರಾಹಿಂ ಆತ್ರಾಡಿ ಸರ್ವಾಂಗೀಣ ಆಟ*
ಅಬ್ದುಲ್ ಕಲಾಂ ನಾಯಕತ್ವದ ಸಿಟಿ ಕ್ರಿಕೆಟ್ ಕ್ಲಬ್ ನ ಪರವಾಗಿ ನಿತಿನ್ ಮುಲ್ಕಿ,ವಿಶ್ವನಾಥ್,ಪ್ರಶಾಂತ್ ಬ್ರಾಗ್ಸ್ ಮತ್ತು ಉಡುಪಿಯ ಇಬ್ರಾಹಿಂ ಆತ್ರಾಡಿ ಪ್ರತಿನಿಧಿಸಿದ್ದರು.
ಈ ಪೈಕಿ ತನ್ನ ಶ್ರೇಷ್ಠ ಸರ್ವಾಂಗೀಣ ಆಟ ಪ್ರದರ್ಶಿಸಿದ ಇಬ್ರಾಹಿಂ ಆತ್ರಾಡಿ ತಾನಾಡಿದ ಮೊದಲ ಪಂದ್ಯದಲ್ಲಿ
21,ದ್ವಿತೀಯ ಪಂದ್ಯದಲ್ಲಿ 25 ಮತ್ತು ಫೈನಲ್ ನಲ್ಲಿ 60 ರನ್ ಗಳಿಸಿದ್ದರು.ಕೀಪಿಂಗ್ ವಿಭಾಗದಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ ಇಬ್ರಾಹಿಂ ಆತ್ರಾಡಿ ಫೈನಲ್ ನಲ್ಲಿ 3 ಸ್ಟಂಪಿಂಗ್ ನಡೆಸಿದ್ದರು.ಅರ್ಹವಾಗಿಯೇ ಫೈನಲ್ ನ
ಪಂದ್ಯ ಶ್ರೇಷ್ಠ, ಬೆಸ್ಟ್ ಫೀಲ್ಡರ್ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

14 − ten =