ಬಾಲ್ ಆಫ್ ದಿ ಸೆಂಚುರಿ ಖ್ಯಾತಿಯ ವಿಶ್ವ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಅಗಲಿದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಾಡ್ ಮಾರ್ಷ್ ಅವರಿಗೆ ಟ್ವಿಟರ್ ಗೋಡೆಯ ಮೇಲೆ ನುಡಿ ನಮನ ಸಲ್ಲಿಸಿದ್ದ ಶೇನ್ ವಾರ್ನ್,
ಅದೇ ದಿನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. 52 ವರ್ಷದ ಮಾಜಿ ಕ್ರಿಕೆಟಿಗ ಥಾಯ್ಲೆಂಡ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಕ್ರಿಕೆಟ್ ಜಗತ್ತಿನ ಹಾಲಿ ಮತ್ತು ಮಾಜಿ ಕ್ರಿಕೆಟಿಗರಲ್ಲಾ ಟ್ವಿಟರ್ ಮೂಲಕ ಅಚ್ಚರಿ ಹೊರಹಾಕಿದ್ದಾರೆ.