ಕ್ವೀನ್ಸ್‌ಲ್ಯಾಂಡ್, ಮೇ 15 ರಾತ್ರಿ ಆಸ್ಟ್ರೇಲಿಯಾದ ಲೆಜೆಂಡರಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ (46) ಅವರು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಆಲಿಸ್ ನದಿ ಸೇತುವೆ ಬಳಿಯ ಹರ್ವೆ ರೇಂಜ್ ರಸ್ತೆಯಲ್ಲಿ ಕಾರಿನಲ್ಲಿ ಚಲಿಸುತ್ತಿರುವಾಗ ರಸ್ತೆ ಬಿಟ್ಟು ಸೈಡಿಗೆ ಕಾರು ಉರುಳಿ ಅಪಘಾತದಲ್ಲಿ ಸೈಮಂಡ್ಸ್ ಸಾವನ್ನಪ್ಪಿದ್ದಾರೆ ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಮತ್ತೊಂದು ಬರಸಿಡಿಲು ಬಡಿದಂತಾಗಿದೆ ಮಾರ್ಚ್‌ನಲ್ಲಿ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ಅವರ ದುರಂತ ಸಾವಿನ ನಂತರ ಸೈಮಂಡ್ಸ್ ಈ ವರ್ಷ ಹಠಾತ್ ನಿಧನರಾದ ಮೂರನೇ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆಯಾಗಿದ್ದಾರೆ. ಸೈಮಂಡ್ಸ್ ಸಾವಿನ ಬಗ್ಗೆ ಹಿರಿಯ ಕಿರಿಯ ಕ್ರಿಕೆಟಿಗರು ತಮ್ಮ ಅಳಲನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ ಹಲವರು ಎದೆಗುಂದಿದ್ದಾರೆ. ಸೈಮಂಡ್ಸ್ ಸಾವಿನ ಸುದ್ದಿಗೆ ಆಸ್ಟ್ರೇಲಿಯಾದ ಕ್ರಿಕೆಟ್ ಕೋಚ್ ಮತ್ತು ಮಾಜಿ ಕ್ರಿಕೆಟಿಗ ಜೇಸನ್ ನೀಲ್ ಗಿಲ್ಲೆಸ್ಪಿ ಆಘಾತ ವ್ಯಕ್ತಪಡಿಸಿದ್ದಾರೆ. “ಎಚ್ಚರಗೊಳ್ಳಲು ಭಯಾನಕ ಸುದ್ದಿ” ಎಂದು ಟ್ವೀಟ್ ಮಾಡಿದ ಅವರು, “ಸಂಪೂರ್ಣವಾಗಿ ಧ್ವಂಸಗೊಂಡಿದ್ದೇವೆ. ನಾವೆಲ್ಲರೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಗೆಳೆಯ”. ಎಂದಿದ್ದಾರೆ
ಮಾಜಿ ಸಹ ಆಟಗಾರ ಮತ್ತು ಫಾಕ್ಸ್ ಕ್ರಿಕೆಟ್ ಸಹೋದ್ಯೋಗಿ ಆಡಮ್ ಗಿಲ್‌ಕ್ರಿಸ್ಟ್ “ಇದು ನಿಜವಾಗಿಯೂ ನಮಗೆ ಎಂದು ಮರೆಯದ ನೋವುಂಟುಮಾಡುತ್ತದೆ” ಎಂದು ಬರೆದುಕೊಂಡಿದ್ದಾರೆ. ಹಿರಿಯ ಕ್ರಿಕೆಟ್ ಅಂಗಳದ ಪತ್ರಕರ್ತ ರಾಬರ್ಟ್ ಕ್ರಾಡಾಕ್ ಅವರ ವರದಿಗಳ ಪ್ರಕಾರ, ಶನಿವಾರ ರಾತ್ರಿ ಟೌನ್ಸ್‌ವಿಲ್ಲೆ ನಗರದಿಂದ ಸುಮಾರು 50 ಕಿಮೀ ದೂರದಲ್ಲಿ ಆಸೀಸ್ ಹಿರಿಯ ಆಲ್‌ರೌಂಡರ್ ಆಟಗಾರ ಸೈಮಂಡ್ಸ್ ಗೆ ಅಪಘಾತವಾಗಿ ಸಾವನಪ್ಪಿದ್ದಾರೆ ಎಂದು ವರದಿಮಾಡಿದ್ದಾರೆ. ಕ್ವೀನ್ಸ್‌ಲ್ಯಾಂಡ್ ಪೊಲೀಸ್ ಹೇಳಿಕೆಯ ಪ್ರಕಾರ, ಸೈಮಂಡ್ಸ್ ಚಲಿಸುತ್ತಿದ್ದ ಕಾರು ರಾತ್ರಿ 10:30 ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಅಪಘಾತದ ಮಾಹಿತಿಯ ನಂತರ, ವೈದ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಬಂದರು ಆದರೆ ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಾರಿನಲ್ಲಿದ್ದ ಏಕೈಕ ವ್ಯಕ್ತಿ ಸೈಮಂಡ್ಸ್ ಅಪಘಾತಕ್ಕಿಡಾದ ಸ್ಥಳದಲ್ಲೇ ಲಕ್ಷಾಂತರ ಅಭಿಮಾನಿಗಳ ಜೋತೆಗೆ ಕ್ರಿಕೆಟ್ ಲೋಕವನ್ನು ಬಿಟ್ಟು ಸದ್ದಿಲ್ಲದೆ ಸಾವಿನ ಮನೆ ಸೇರಿದ್ದು ಮಾತ್ರ ದುರಂತವೆ ಹೌದು.
ಸೈಮಂಡ್ಸ್ ಆಸ್ಟ್ರೇಲಿಯಾ ಪರ 26 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 1999 ಮತ್ತು 2007 ರ ನಡುವೆ ವಿಶ್ವದ ಪ್ರಾಬಲ್ಯ ಹೊಂದಿರುವ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡಗಳ ಅವಿಭಾಜ್ಯ ಅಂಗವಾಗಿದ್ದರು. ನಿವೃತ್ತಿಯ ಆಟದಲ್ಲಿ, ವಾರ್ನ್ ಮತ್ತು ಸೈಮಂಡ್ಸ್ ಇಬ್ಬರೂ ಫಾಕ್ಸ್ ಕ್ರಿಕೆಟ್‌ನ ಕಾಮೆಂಟರಿ ತಂಡದ ಮೌಲ್ಯಯುತ ಸದಸ್ಯರಾಗಿದ್ದರು.
ಅದರಲ್ಲೂ ಭಾರತ ತಂಡದ ಹಿರಿಯ ಶ್ರೇಷ್ಠ ಸ್ಫೀನ್ನರ್ ಮಣಿಂದರ್ ಸಿಂಗ್ ಜೋತೆಗೆ ಟೆಸ್ಟ್ ಪಂದ್ಯದ ವೇಳೆ ಭಾರತ ಪ್ರವಾಸದಲ್ಲಿ ಕಿರಿಕ್ ಮಾಡಿಕೊಂಡಿದ್ದು ವಿಶ್ವಾದ್ಯಂತ ದೊಡ್ಡ ಸುದ್ದಿಯಾಗಿತ್ತು ಅದೇನೆ ಇರಲಿ ಸೈಮಂಡ್ಸ್ ವಿಶ್ವದ ಶ್ರೇಷ್ಠ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ ಅದರಲ್ಲೂ ಎದುರಾಳಿ ಬೌಲರ್ ಗಳು ಸೈಮಂಡ್ಸ್ ಆಡಲು ಮೈದಾನಕ್ಕೆ ಬಂದರೆ ಒಂದೊಮ್ಮೆ ನಡುಗ ಮಟ್ಟಕ್ಕೆ ಅವರ ಬ್ಯಾಟಿಂಗ್ ನಲ್ಲಿ ಶಕ್ತಿ ಇತ್ತು ಸಾಕಷ್ಟು ಬಾರಿ ವಿಶ್ವದ ಶ್ರೇಷ್ಠ ಬೌಲರ್ ಗಳ ಬೆವರಿಳಿಸಿದ್ದಾರೆ
ತನಗರಿವಿಲ್ಲದೆ ಅಸಂಖ್ಯಾತ ಅಭಿಮಾನಿಗಳ ಜೊತೆಗೆ ತನ್ನ ಸಹ ಆಟಗಾರ ಜೊತೆಗೆ ತನ್ನ ಮಡದಿ ಮಕ್ಕಳನ್ನು ಬಿಟ್ಟು ಬಾರದ ಲೋಕದೆಡೆ ಹೆಜ್ಜೆ ಹಾಕಿದ್ದಾರೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಕ್ರಿಕೆಟ್ ಅಂಗಳದಲ್ಲಿ ಸೈಮಂಡ್ಸ್ ಅವರ ಕ್ರಿಕೆಟ್ ಬದುಕಿನ ಪ್ರತಿಯೊಂದು ಕ್ಷಣವೂ ಚಿರಕಾಲ ಉಳಿಯಲಿ