10.4 C
London
Thursday, October 3, 2024
Homeಕ್ರಿಕೆಟ್ಅಕ್ಟೋಬರ್ 13ರಂದು ಕುಂದಾಪುರ ಚಾಲೆಂಜ್ ಅಂಗಣದಲ್ಲಿ ಚಾಲೆಂಜ್ ಪ್ರಿಮಿಯರ್ ಲೀಗ್- 2019

ಅಕ್ಟೋಬರ್ 13ರಂದು ಕುಂದಾಪುರ ಚಾಲೆಂಜ್ ಅಂಗಣದಲ್ಲಿ ಚಾಲೆಂಜ್ ಪ್ರಿಮಿಯರ್ ಲೀಗ್- 2019

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಟೆನ್ನಿಸ್ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಕುಂದಾಪುರದ ತಂಡಗಳು ಎಂದೆಂದಿಗೂ ಅಚ್ಚಳಿಯದ ಇತಿಹಾಸವನ್ನು ಬರೆದಿರುತ್ತದೆ. ಪ್ರಮುಖ ತಂಡಗಳಾದ ಚಕ್ರವರ್ತಿ ಹಾಗೂ ಟೊರ್ಪೆಡೋಸ್ ತಂಡ ಉತ್ಕೃಷ್ಟ ಮಟ್ಟದ ಸಾಧನೆಗೈದು ರಾಜ್ಯಾದ್ಯಂತ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ ತಂಡಗಳು. ಈ ಎರಡು ತಂಡಗಳ ಸಮಕಾಲೀನವಾಗಿ ಬೆಳೆದು ನಿಂತ ತಂಡ ಚಾಲೆಂಜ್ ಕುಂದಾಪುರ.

ನಾಯಕ ಚಂದ್ರರವರ ಸಾರಥ್ಯದಲ್ಲಿ ಹಲವಾರು ಜಿಲ್ಲಾ ಹಾಗೂ ರಾಜ್ಯ ಮಟ್ಟದ 30 ಗಜಗಳ ಪಂದ್ಯಾಕೂಟಗಳಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿದ್ದಲ್ಲದೇ, ಕಳೆದೆರೆಡು ವರ್ಷಗಳ ಹಿಂದೆ ಪಡುಬಿದ್ರಿಯಲ್ಲಿ ನಡೆದ ವರ್ಣರಂಜಿತ “ವೆಂಕಟೇಶ ಮೆಮೋರಿಯಲ್ ಟ್ರೋಫಿ”ಯಲ್ಲಿ ಚಂದ್ರ ಹಾಗೂ ಮೆಂಟರ್ ಕೆ.ಪಿ.ಸತೀಶ್ ರವರ ಮಾಸ್ಟರ್ ಮೈಂಡ್ ಚಾಲೆಂಜ್ ಗೆ ಚಾಂಪಿಯನ್‌ ಕಿರೀಟ ತೊಡಿಸುವಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿತ್ತು.

ಚಾಲೆಂಜ್ ತಂಡ ಮುಂಬರುವ ಪಂದ್ಯಾಕೂಟಗಳಿಗೆ ತಂಡದ ಸಂಯೋಜನೆ ಹಾಗೂ ಯುವ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ ಅಕ್ಟೋಬರ್ 13 ರವಿವಾರದಂದು ಕುಂದಾಪುರದ ಚಾಲೆಂಜ್ ಅಂಗಣದಲ್ಲಿ “ಚಾಲೆಂಜ್ ಪ್ರಿಮಿಯರ್ ಲೀಗ್-2019” ಹಗಲಿನ ಪಂದ್ಯಾಕೂಟವನ್ನು ಏರ್ಪಡಿಸಿದ್ದಾರೆ.

ಒಟ್ಟು 8 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಕಾದಾಡಲಿದ್ದು ಫ್ರಾಂಚೈಸಿಗಳ ವಿವರ ಈ ಕೆಳಗಿನಂತಿದೆ.1 ಮೆಂಡನ್ ಲಯನ್ಸ್, 2 ಆಧೀಶ್ ಚಾಲೆಂಜರ್ಸ್, 3 ಸುನಿಲ್ ಸ್ಮ್ಯಾಶರ್ಸ್, 4 ಶಾರ್ಕ್ ಫೈಟರ್ಸ್, 5 ಅಹನಾ ಅವೆಂಜರ್ಸ್, 6 ಟಿ.ಆರ್.ಬುಲ್ಸ್, 7 ಶ್ರೀಯಾನ್ ಸ್ಟ್ರೈಕರ್ಸ್, 8 ಭುವನ್ ಬ್ಲಾಸ್ಟರ್ಸ್

ಈ ಪಂದ್ಯಾಕೂಟದಲ್ಲಿ ಕರ್ನಾಟಕ ಕಂಡ ಚಮತ್ಕಾರಿ ಗೂಟರಕ್ಷಕ ಕೆ.ಪಿ.ಸತೀಶ್(ಚಕ್ರವರ್ತಿ),ಟೆನ್ನಿಸ್ ಕ್ರಿಕೆಟ್ ವಸೀಮ್ ಅಕ್ರಮ್ ಖ್ಯಾತಿಯ ನಿತಿನ್ ಸಾರಂಗ್ (ಟೊರ್ಪೆಡೋಸ್) ಪ್ರಮುಖ ಆಕರ್ಷಣೆಯಾಗಿದ್ದಾರೆ.

ಪಂದ್ಯಾಕೂಟದ ವಿಜೇತ ಹಾಗೂ ರನ್ನರ್ಸ್ ತಂಡ ಆಕರ್ಷಕ ಟ್ರೋಫಿ ಸಹಿತ ನಗದು ಬಹುಮಾನಗಳನ್ನು ಪಡೆಯಲಿದ್ದಾರೆಂದು “ಸ್ಪೋರ್ಟ್ ಕನ್ನಡ” ಕ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

5 × 5 =