20.3 C
London
Tuesday, June 18, 2024
Homeಕ್ರಿಕೆಟ್ರಿಯಲ್ ಫೈಟರ್ಸ್ ಮಲ್ಪೆ ತಂಡಕ್ಕೆ ಗಣೇಶ್ ಮೆಮೋರಿಯಲ್ ಕಪ್-2019

ರಿಯಲ್ ಫೈಟರ್ಸ್ ಮಲ್ಪೆ ತಂಡಕ್ಕೆ ಗಣೇಶ್ ಮೆಮೋರಿಯಲ್ ಕಪ್-2019

Date:

Related stories

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ...

ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???

ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು...

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...
spot_imgspot_img

ಕರುನಾಡು ಕ್ರಿಕೆಟರ್ಸ್ ಬೆಂಗಳೂರು ಇವರ ಆಶ್ರಯದಲ್ಲಿ ಅಗಲಿದ ಗೆಳೆಯ ದಿ|ಗಣೇಶ್ ಸ್ಮರಣಾರ್ಥ, ಬೆಂಗಳೂರಿನ ಬಿ.ಟಿ.ಎಮ್ ಲೇಯೌಟ್ 2nd ಸ್ಟೇಜ್ ನ ಉಡುಪಿ ಗಾರ್ಡನ್ ಅಂಕಣದಲ್ಲಿ ನಡೆದ ಎರಡು ದಿನಗಳ ಹಗಲಿನ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟ “ಗಣೇಶ್ ಮೆಮೋರಿಯಲ್ ಕಪ್-2019” ಉಡುಪಿಯ “ಪ್ರಕೃತಿ ರಿಯಲ್ ಫೈಟರ್ಸ್” ಮಲ್ಪೆ ತಂಡ ಗೆದ್ದುಕೊಂಡಿತು.

16 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಲೀಗ್ ಹಂತದ ಕುತೂಹಲಕಾರಿ ಕಾದಾಟದ ಬಳಿಕ ಸೆಮಿಫೈನಲ್ಸ್ ನಲ್ಲಿ ನ್ಯಾಶ್ ತಂಡ ಜೈ ಕರ್ನಾಟಕವನ್ನು ಹಾಗೂ ರಿಯಲ್ ಫೈಟರ್ಸ್, ಹಾಸನಾಂಬಾ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಿಯಲ್ ಫೈಟರ್ಸ್ ತಂಡ, ಆರಂಭಿಕ ಆಟಗಾರ ಡೆರಿನ್ 13 ರನ್ ಹಾಗೂ ಮಧ್ಯಮ ಸರದಿಯಲ್ಲಿ ದಾಂಡಿಗತನಕ್ಕಿಳಿದ ಸಂಪತ್ 12 ಎಸೆತಗಳಲ್ಲಿ ಬಿರುಸಿನ 2 ಸಿಕ್ಸ್ ಹಾಗೂ 1ಬೌಂಡರಿಗಳ ನೆರವಿನಿಂದ 23 ರನ್ ಗಳ ನೆರವಿನಿಂದ ಎದುರಾಳಿ ನ್ಯಾಶ್ ತಂಡಕ್ಕೆ 72 ರನ್ ಗಳ ಸವಾಲಿನ ಗುರಿಯನ್ನು ನೀಡಿತ್ತು.

ರನ್ ಚೇಸಿಂಗ್ ನಲ್ಲಿ ಎಡವಿದ ನ್ಯಾಶ್,ರಿಯಲ್ ಫೈಟರ್ಸ್ ತಂಡದ ತೀಕ್ಷ್ಣ ದಾಳಿಗೆ ಸಿಲುಕಿ 8 ವಿಕೆಟ್ ಕಳೆದುಕೊಂಡು 59 ರನ್ ಗಳಿಸಲಷ್ಟೇ ಶಕ್ತವಾಯಿತು.

ರಿಯಲ್ ಫೈಟರ್ಸ್ ತಂಡ ಪ್ರಥಮ ಪ್ರಶಸ್ತಿಯಾಗಿ 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ನ್ಯಾಶ್ ತಂಡ 50,000 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು.

ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಅರ್ಹವಾಗಿ ಸಂಪತ್ ಪಡೆದುಕೊಂಡರೆ,ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಅಕ್ಷಯ್ ಸಿ.ಕೆ,ಬೆಸ್ಟ್ ಬೌಲರ್ ಶ್ರೀರಾಮ್ ಕ್ರಿಕೆಟರ್ಸ್ ನ‌ ನಿತೀಶ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆಶಿಷ್ ಅಲೆವೂರು ಪಾಲಾಯಿತು.

ವಿಶೇಷವಾಗಿ ಈ ಟೂರ್ನಿಯ ಎಲ್ಲಾ ಪಂದ್ಯಗಳು 8 ಓವರ್ ಗಳಲ್ಲಿ ಸಾಗಿದ್ದು,ವರ್ಷಗಳ ಬಳಿಕ ಪರಿಪೂರ್ಣ ಪಂದ್ಯಾಕೂಟವೆನಿಸಿ ಕ್ರಿಕೆಟ್ ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಯಿತು.

ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಗಿರೀಶ್ ರಾವ್ ಮಾಲೀಕತ್ವದ “ಕ್ರಿಕ್ ಸೇ” ಬಿತ್ತರಿಸಿದರೆ,ವೀಕ್ಷಕ ವಿವರಣೆಯನ್ನು ಪ್ರಶಾಂತ್ ಅಂಬಲಪಾಡಿ ನಿರ್ವಹಿಸಿದ್ದರು.
‌‌‌‌‌‌‌‌‌‌
ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

three × four =