ಕ್ರಿಕೆಟ್ಆಭರಣ್ ಸಿಸಿಎಲ್ ಸೀಸನ್–4: ಟೆರ್ರಾ ಸ್ಪೋರ್ಟ್ಸ್ ಕ್ಲಬ್ ಚೇಂಪಿಗೆ ಚಾಂಪಿಯನ್ ಕಿರೀಟ

ಆಭರಣ್ ಸಿಸಿಎಲ್ ಸೀಸನ್–4: ಟೆರ್ರಾ ಸ್ಪೋರ್ಟ್ಸ್ ಕ್ಲಬ್ ಚೇಂಪಿಗೆ ಚಾಂಪಿಯನ್ ಕಿರೀಟ

-

- Advertisment -spot_img

ಆಭರಣ್ ಸಿಸಿಎಲ್ ಸೀಸನ್–4: ಟೆರ್ರಾ ಸ್ಪೋರ್ಟ್ಸ್ ಕ್ಲಬ್ ಚೇಂಪಿಗೆ ಚಾಂಪಿಯನ್ ಕಿರೀಟ

ವಿಜಯ ಕ್ರಿಕೆಟರ್ಸ್ ಸಾಲಿಗ್ರಾಮದ ಆಶ್ರಯದಲ್ಲಿ ಜಿಎಸ್‌ಬಿ ಸಮುದಾಯದ 12 ತಂಡಗಳ ಭಾಗವಹಿಸುವಿಕೆಯಿಂದ ಟೆನಿಸ್ ಬಾಲ್ ಫ್ಲಡ್‌ಲೈಟ್ ಕ್ರಿಕೆಟ್ ಟೂರ್ನಿಯನ್ನು ಸಾಲಿಗ್ರಾಮದ ಹಳೇಕೋಟೆ ಮೈದಾನದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು. ಹರಾಜು (ಆಕ್ಷನ್) ಪದ್ಧತಿಯಲ್ಲಿ ರೂಪುಗೊಂಡ ತಂಡಗಳು ಪರಸ್ಪರ ಪೈಪೋಟಿ ನಡೆಸಿ ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಗಳನ್ನು ನೀಡಿದವು.

ಅಂತಿಮ ಹಣಾಹಣಿಯಲ್ಲಿ ಟೆರ್ರಾ ಸ್ಪೋರ್ಟ್ಸ್ ಕ್ಲಬ್, ಚೇಂಪಿ ತಂಡವು ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್, ಮಣಿಪಾಲ ತಂಡವನ್ನು ಮಣಿಸಿ ಆಭರಣ್ ಸಿಸಿಎಲ್ ಸೀಸನ್–4 – ಶ್ರೀ ಲಕ್ಷ್ಮೀವೆಂಕಟರಮಣ ಟ್ರೋಫಿ 2026 ಅನ್ನು ತನ್ನದಾಗಿಸಿಕೊಂಡಿತು. ಆರಂಭದಿಂದ ಅಂತ್ಯದವರೆಗೆ ಸ್ಥಿರ ಪ್ರದರ್ಶನ ನೀಡಿದ ಟೆರ್ರಾ ತಂಡ ಸಮರ್ಥ ಆಟದ ಮೂಲಕ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿತು.

ವಿಜೇತ ತಂಡಕ್ಕೆ ರೂ.50,777 ನಗದು ಬಹುಮಾನ ಹಾಗೂ ಆಕರ್ಷಕ ಚೇಂಪಿ ಪ್ರೀಮಿಯರ್ ಲೀಗ್ ಟ್ರೋಫಿ ಪ್ರದಾನಿಸಲಾಯಿತು. ರನ್ನರ್‌ಅಪ್ ಸ್ಥಾನ ಪಡೆದ ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ರೂ.40,777 ನಗದು ಬಹುಮಾನ ಮತ್ತು ರನ್ನರ್‌ಅಪ್ ಟ್ರೋಫಿ ನೀಡಿ ಗೌರವಿಸಲಾಯಿತು.

ವೈಯಕ್ತಿಕ ಸಾಧನೆಯಲ್ಲಿಯೂ ಹಲವರು ಗಮನ ಸೆಳೆದರು. ಫೈನಲ್ ಪಂದ್ಯದಲ್ಲಿ ಟೆರ್ರಾ ಸ್ಪೋರ್ಟ್ಸ್ ಕ್ಲಬ್‌ನ ವೇದಾಂತ್ ಭಟ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿಗೆ ಪಾತ್ರರಾದರು. ವೀರಾಂಜನೇಯ ಕಾಪು ತಂಡದ ಸೂರಿ ಸಾಸ್ತಾನ ಅವರಿಗೆ ತಮ್ಮ ನಿಖರ ಬೌಲಿಂಗ್ ಮೂಲಕ ‘ಅತ್ಯುತ್ತಮ ಬೌಲರ್’ ಪ್ರಶಸ್ತಿ ಲಭಿಸಿತು. ಟೆರ್ರಾ ಸ್ಪೋರ್ಟ್ಸ್ ಕ್ಲಬ್, ಚೇಂಪಿಯ ವಿವೇಕ್ ಪ್ರಭು ಅಂಬಾಗಿಲು ಅವರು ಆಕರ್ಷಕ ಬ್ಯಾಟಿಂಗ್ ಮೂಲಕ ‘ಅತ್ಯುತ್ತಮ ಬ್ಯಾಟ್ಸ್‌ಮನ್’ ಪ್ರಶಸ್ತಿಯನ್ನು ಪಡೆದರು. ಟೂರ್ನಿಯಿಡೀ ಸಮತೋಲನದ ಆಟವಾಡಿದ ಟೆರ್ರಾ ಸ್ಪೋರ್ಟ್ಸ್ ಕ್ಲಬ್‌ನ ಪ್ರಥಮೇಶ್ ಕಾಮತ್ ಅವರಿಗೆ ‘ಮ್ಯಾನ್ ಆಫ್ ದ ಸೀರಿಸ್’ ಗೌರವ ಸಿಕ್ಕಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯ ಅತಿಥಿಗಳು ವಿಜೇತ, ರನ್ನರ್‌ಅಪ್ ಹಾಗೂ ವೈಯಕ್ತಿಕ ಪ್ರಶಸ್ತಿ ವಿಜೇತರಿಗೆ ಟ್ರೋಫಿ ಮತ್ತು ಬಹುಮಾನಗಳನ್ನು ಪ್ರದಾನಿಸಿದರು. ಈ ಸಂದರ್ಭ ಕ್ರೀಡಾಪಟುಗಳ ಉತ್ಸಾಹ ಹಾಗೂ ಸಂಘಟಕರ ಶ್ರಮವನ್ನು ಶ್ಲಾಘಿಸಿದರು. ಸಮಾರೋಪ ಸಮಾರಂಭದಲ್ಲಿ ಶ್ರೀಕಾಂತ್ ಭಟ್ ಚೇಂಪಿ, ಗೋಪಿನಾಥ್ ಕಾಮತ್, ಗೋವಿಂದರಾಯ ಶೆಣೈ, ನಿತ್ಯಾನಂದ ಶಾನಭೋಗ್, ಉಮೇಶ್ ಪ್ರಭು, ಶ್ರೀಕಾಂತ್ ಶೆಣೈ, ಶ್ರೀನಿವಾಸ್ ಶಾನಭೋಗ್, ಮೋಹನದಾಸ ಸದಾಶಿವ ನಾಯಕ್, ವೆಂಕಟೇಶ್ ಪೈ, ಮಂಜುನಾಥ್ ಸುರೇಶ ಪೈ ಇವರುಗಳು ಉಪಸ್ಥಿತರಿದ್ದರು.

ಟೂರ್ನಿಯನ್ನು ವಿಜಯ ಕ್ರಿಕೆಟರ್ಸ್ ಸಾಲಿಗ್ರಾಮ ತಂಡ ಶಿಸ್ತಿನೊಂದಿಗೆ ಹಾಗೂ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ್ದು, ಪಂದ್ಯಾವಳಿಯನ್ನು ವೀಕ್ಷಿಸಿದ ಸಾವಿರಾರು ಕ್ರೀಡಾಭಿಮಾನಿಗಳು ಆಯೋಜಕರ ಸಂಘಟನೆ, ಸಮಯಪಾಲನೆ ಮತ್ತು ಉನ್ನತ ಮಟ್ಟದ ನಿರ್ವಹಣೆಯನ್ನು ಮನಪೂರ್ವಕವಾಗಿ ಮೆಚ್ಚಿದರು. ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆದ ಈ ಪಂದ್ಯಾವಳಿ ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಕ್ರಿಕೆಟ್‌ಗೆ ಹೊಸ ಉತ್ತೇಜನ ನೀಡಿತು.

ಸ್ನೇಹ, ಸಹಭಾಗಿತ್ವ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ಈ ರೀತಿಯ ಟೂರ್ನಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬೇಕೆಂಬ ಅಭಿಪ್ರಾಯವನ್ನು ಕ್ರೀಡಾಭಿಮಾನಿಗಳು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

3 × two =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you