Categories
ಕ್ರಿಕೆಟ್

ಕುಂಬ್ಳೆ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ : ಭಾರತೀಯರ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆದು ಇತಿಹಾಸ ನಿರ್ಮಿಸಿದ ಪಟೇಲ್

ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನೆಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನವಾದ ಇಂದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಎಲ್ಲಾ ಹತ್ತು ವಿಕೆಟ್ ಗಳನ್ನು ಸ್ಪಿನ್ನರ್ ಅಜಾಜ್ ಪಟೇಲ್ ಪಡೆದಿದ್ದಾರೆ.
 ಅವರು 45.5 ಓವರ್ ಬೌಲ್ ಮಾಡಿ ಹನ್ನೆರಡು ಮೇಡನ್ ಓವರ್ ನೊಂದಿಗೆ 119 ರನ್ ನೀಡಿ ಭಾರತೀಯರ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದಾರೆ ನ್ಯೂಜಿಲೆಂಡ್ ತಂಡಕ್ಕೂ ಕ್ರಿಕೆಟ್ ಅಭಿಮಾನಿಗಳಿಗೂ ಇಂದು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ದಿನ ಕ್ಷಣ….. ಈ ಸಾಧನೆಯನ್ನು ಮಾಡಿದವರ ಪಟ್ಟಿಯಲ್ಲಿ ಅಜಾಜ್ ಪಟೇಲ್ ಮೂರನೆಯವರು
ಈ ಹಿಂದೆ ಈ ಸಾಧನೆಯನ್ನು ಇಂಗ್ಲೆಂಡ್ ತಂಡದ ಬೌಲರ್ ಜೀಮ್ ಲೇಕರ್ ಅವರು ಆಸ್ಟ್ರೇಲಿಯಾ ವಿರುದ್ಧ 1956 ರನೇ ಇಸವಿಯಲ್ಲಿ  ಇಂಗ್ಲೆಂಡ್ ನ ಮ್ಯಾಂಚೆಸ್ಟರ್‌ ಅಂಗಳದಲ್ಲಿ  ಜುಲೈ 26 ರಿಂದ 31 ರ ವರೆಗೆ ನಡೆದಂತಹ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎರಡನೇ ಇನಿಂಗ್ಸ್ ನಲ್ಲಿ ಎಲ್ಲಾ ಆಟಗಾರರನ್ನು ಬಲಿ ಪಡೆದು ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆದು ವಿಶ್ವ ಕ್ರಿಕೆಟ್ ನ ಮೊದಲ ಆಟಗಾರನಾಗಿ ಇತಿಹಾಸ ನಿರ್ಮಿಸಿದ್ದರು,
ಜೀಮ್ ಲೇಕರ್ ಅವರು 51.2 ಓವರ್ ಗಳನ್ನು ಬೌಲ್ ಮಾಡಿ 23 ಮೆಡನ್ ಓವರ್ ನೊಂದಿಗೆ ಎದುರಾಳಿಗಳಿಗೆ 51 ರನ್ ನೀಡಿ ಆಸ್ಟ್ರೇಲಿಯಾದ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದಿದ್ದರು ಜೀಮ್ ಲೇಕರ್ ಅವರು ಮೊದಲ ಇನಿಂಗ್ಸ್ ನಲ್ಲು ಆಸ್ಟ್ರೇಲಿಯಾದ ಒಂಬತ್ತು ವಿಕೆಟ್ ಬಿಳಿಸಿದ್ದರು ಒಂದು ವಿಕೆಟ್ ನಿಂದ ಹತ್ತು ವಿಕೆಟ್ ಪಡೆದು ಕೊಳ್ಳುವುದರಿಂದ ವಂಚಿತರಾಗಿದ್ದರು ಜೀಮ್ ಲೇಕರ್ ಅಂದು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ ನಲ್ಲಿ ಒಟ್ಟು 19 ವಿಕೆಟ್ ಪಡೆದು ಇತಿಹಾಸದ ಪುಟ ಸೇರಿದ್ದರು..
ಅ ನಂತರದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಅವರು 1999 ನೇ ಇಸವಿಯಲ್ಲಿ ಪೆಬ್ರವರಿ 7ನೇ ತಾರೀಖು ಪೀರೋಜ್ ಶಾ ಕೊಟ್ಲಾ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧದ ಎರಡನೇ ಟೆಸ್ಟ್‌ ನ ಎರಡನೇ ಇನಿಂಗ್ಸ್ ನಲ್ಲಿ 26.3 ಓವರ್ ಗಳನ್ನು ಬೌಲ್ ಮಾಡಿ 9 ಮೆಡನ್ ನೊಂದಿಗೆ 73 ರನ್ ನೀಡಿ ಪಾಕಿಸ್ತಾನ ತಂಡದ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದರು..
  ಈಗ ಮತ್ತೆ ಇತಿಹಾಸ ಮರುಳಿಸಿದೆ ನ್ಯೂಜಿಲೆಂಡ್ ತಂಡದ ಅಜಾಜ್ ಪಟೇಲ್ ಅವರು ಭಾರತ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಭಾರತೀಯರ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆದು ಇತಿಹಾಸದ ಪುಟ ಸೇರಿದ್ದಾರೆ. ಅಜಾಜ್ ಪಟೇಲ್ ಅವರು ಭಾರತ ವಿರುದ್ಧ 47.5 ಓವರ್ ಗಳನ್ನು ಬೌಲ್ ಮಾಡಿ 12 ಮೇಡನ್ ಓವರ್ ನೊಂದಿಗೆ 119 ರನ್ ನೀಡಿ  ಭಾರತೀಯರ *10* ವಿಕೆಟ್ ಗಳನ್ನು ಪಡೆದುಕೊಂಡು ಇತಿಹಾಸ ನಿರ್ಮಿಸಿದ್ದಾರೆ     ಈ ಹಿಂದೆ ಈ ಸಾಧನೆಯನ್ನು *ಜೀಮ್ ಲೇಕರ್* ಮೊದಲ ಬಾರಿಗೆ ಮಾಡಿದ್ದರು. ಹತ್ತು ವಿಕೆಟ್ ಗಳ ಸಾಧನೆಯನ್ನು ಎರಡನೇ ಯವರಾಗಿ ಸಾಧನೆ ಮಾಡಿದವರು ನಮ್ಮ ಭಾರತೀಯ ಅದರಲ್ಲೂ ನಮ್ಮ ಹೆಮ್ಮೆಯ ಕನ್ನಡಿಗ *ಅನಿಲ್ ಕುಂಬ್ಳೆ* ಅವರು ಈಗ ಈ  ಸಾಧನೆಯನ್ನು ಮಾಡಿದವರು ನ್ಯೂಜಿಲೆಂಡ್ ತಂಡದ ಸ್ಪಿನ್ ಮಾಂತ್ರಿಕ ಅಜಾಜ್ ಪಟೇಲ್ ಅವರು ಭಾರತೀಯರ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆಯುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಇಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ *ಅಜಾಜ್ ಪಟೇಲ್* ಅವರ ಹೆಸರನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ದಿನ.
 ” ಶುಭಾಶಯಗಳು ” ಅಜಾಜ್ ಪಟೇಲ್ ಅವರಿಗೆ

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

one × 2 =