
ಬೆಂಗಳೂರು ಗ್ರಾಮಾಂತರ-ಇಲ್ಲಿನ ನೆಲಮಂಗಲ ತಾಲೂಕಿನ ಅರಸಿನಕುಂಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಇವರ ವತಿಯಿಂದ ಹೊನಲು ಬೆಳಕಿನ ಶಾರ್ಟ್ ಪಿಚ್ ಕ್ರಿಕೆಟ್ ಪಂದ್ಯಾವಳಿ ASA ಟ್ರೋಫಿ -2024 ಆಯೋಜಿಸಲಾಗಿದೆ.
ನವೆಂಬರ್ 8,9 ಮತ್ತು10 ರಂದು ಅರಸಿನಕುಂಟೆ ಭೈರಣ್ಣ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾಸನಪುರ ಹೋಬಳಿ,
ನೆಲಮಂಗಲ ಟೌನ್ ಮತ್ತು ಚೆನ್ನನಾಯಕನಪಾಳ್ಯ ಪರಿಸರದ 12 ತಂಡಗಳು,2 ಗುಂಪುಗಳಲ್ಲಿ,ಐಪಿಲ್ ಮಾದರಿಯಲ್ಲಿ ಸೆಣಸಾಡಲಿದೆ.

ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 1,60,000,ದ್ವಿತೀಯ ಸ್ಥಾನಿ 80,000,ತೃತೀಯ 40,000 ಹಾಗೂ ಚತುರ್ಥ ಸ್ಥಾನಿ ತಂಡ 20000 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ಭಾಗವಹಿಸುವ ತಂಡಗಳು 40000ರೂ ಪ್ರವೇಶ ದರ ಪಾವತಿಸಬೇಕಿದೆ.
ಜನಪ್ರಿಯ ಕ್ರೀಡಾವಾಹಿನಿ ಸ್ಟಾರ್ ವರ್ಟೆಕ್ಸ್
Sportskannada ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.

ಇದಲ್ಲದೇ ಪುರುಷರಿಗಾಗಿ ವಾಲಿಬಾಲ್,
ಮಹಿಳೆಯರಿಗೆ,ಯುವತಿಯರಿಗೆ ರಂಗೋಲಿ ಸ್ಪರ್ಧೆ ಮತ್ತು ಥ್ರೋಬಾಲ್ ಸ್ಪರ್ಧೆ ಜೊತೆಗೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 985495594,9738251953,9980022953 ಹಾಗೂ 8904754936 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.





