ಕ್ರಿಕೆಟ್ತಂಗಿಗಾಗಿ ಅಣ್ಣನ ತ್ಯಾಗ.. ಒಡ ಹುಟ್ಟಿದವನ ತ್ಯಾಗ ವ್ಯರ್ಥವಾಗಲು ಬಿಡದ ತಂಗಿ...

ತಂಗಿಗಾಗಿ ಅಣ್ಣನ ತ್ಯಾಗ.. ಒಡ ಹುಟ್ಟಿದವನ ತ್ಯಾಗ ವ್ಯರ್ಥವಾಗಲು ಬಿಡದ ತಂಗಿ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿದಳು..! 

-

- Advertisment -spot_img

ತಂಗಿಗಾಗಿ ಅಣ್ಣನ ತ್ಯಾಗ.. ಒಡ ಹುಟ್ಟಿದವನ ತ್ಯಾಗ ವ್ಯರ್ಥವಾಗಲು ಬಿಡದ ತಂಗಿ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿದಳು..! 

ಉತ್ತರ ಪ್ರದೇಶದ ಆಗ್ರಾದಿಂದ 9 ಕಿ.ಮೀ ದೂರದ ಶಹಗಂಜ್’ನಲ್ಲೊಂದು ಅವಧ್’ಪುರಿ ಎಂಬ ಪುಟ್ಟ ಹಳ್ಳಿ. ಆ ಹಳ್ಳಿಗೆ ಪ್ರವೇಶಿಸುತ್ತಿದ್ದಂತೆ ಒಂದು ರಸ್ತೆ. ಆ ರಸ್ತೆಯ ಹೆಸರು ‘Arjuna Awardee Cricketer Deepti Sharma Marg’. ಆ ಊರಿಗೆ ಅವಳ ಹೆಸರೇ ಲ್ಯಾಂಡ್ ಮಾರ್ಕ್.. 

ಅವಧ್’ಪುರಿಯ ಕೆಳ ಮಧ್ಯಮ ವರ್ಗದ ಮನೆಯಲ್ಲೊಂದು ಅಣ್ಣ ತಂಗಿ ಜೋಡಿ. ಮಧ್ಯಮ ವೇಗದ ಬೌಲರ್ ಆಗಿದ್ದ ಅಣ್ಣ ಭಾರತ ಪರ ಆಡುವ ಕನಸು ಕಂಡಿದ್ದ. ಕನಸು ಕೈಗೂಡುವುದು ಅಸಂಭವ ಎಂಬುದು ಅರಿವಾಗುತ್ತಿದ್ದಂತೆ ತನ್ನ ಕನಸನ್ನು ತಂಗಿಯ ಮೂಲಕ ನನಸು ಮಾಡಲು ನಿಂತು ಬಿಟ್ಟ.. ಜೀವನಕ್ಕೆ ಆಧಾರವಾಗಿದ್ದ ಕೆಲಸಕ್ಕೆ ತಿಲಾಂಜಲಿ ಇಟ್ಟು ತಂಗಿಯ ತರಬೇತಿಗೆ ತನ್ನನ್ನು ಸಮರ್ಪಿಸಿಕೊಂಡ. 

ಸಹೋದರನ ಪ್ರತಿಜ್ಞೆ ಮತ್ತು ತ್ಯಾಗದ ಪ್ರತೀಕವಾಗಿ ನಿಂತಿರುವ ಅದೇ ಹುಡುಗಿ ಇವತ್ತು ದೇಶಕ್ಕೆ ಮೊಟ್ಟ ಮೊದಲ ಮಹಿಳಾ ವಿಶ್ವಕಪ್ ಗೆಲ್ಲಿಸಿದ್ದಾಳೆ. ಅವಳು ದೀಪ್ತಿ ಶರ್ಮಾ.. 

ವಿಶ್ವಕಪ್ ಫೈನಲ್’ನಲ್ಲಿ 58 ರನ್, 5 ವಿಕೆಟ್, ಒಂದು ರನೌಟ್.. ಇಡೀ ಟೂರ್ನಿಯಲ್ಲಿ 215 ರನ್ ಮತ್ತು 22 ವಿಕೆಟ್.. ಸಾಧನೆಗೆ ಕಳಶವಿಟ್ಟಂತೆ ‘ಪ್ಲೇಯರ್ ಆಫ್ ದಿ ಸೀರೀಸ್’ ಕಿರೀಟ.. 

ದೀಪ್ತಿ ಶರ್ಮಾಳ ಅಣ್ಣ ಸುಮಿತ್ ಶರ್ಮಾ ಉತ್ತರ ಪ್ರದೇಶದ ಕ್ರಿಕೆಟಿಗ… ಅಣ್ಣನ ಜೊತೆ ಸಣ್ಣ ವಯಸ್ಸಲ್ಲೇ ಕ್ರಿಕೆಟ್ ಅಭ್ಯಾಸಕ್ಕೆ ಹೋಗುತ್ತಿದ್ದ ದೀಪ್ತಿ ಶರ್ಮಾ ಅಣ್ಣನ ಕನಸನ್ನು ನನಸು ಮಾಡಿದ ತಂಗಿ. 

ಸಹೋದರನ ಜೊತೆ ಕ್ರಿಕೆಟ್ ಅಭ್ಯಾಸಕ್ಕೆ ತೆರಳಿದ್ದ ದೀಪ್ತಿ ಶರ್ಮಾ ಒಂದು ದಿನ ಭಾರತದ ಮಾಜಿ ಕ್ರಿಕೆಟರ್ ಹೇಮಲತಾ ಕಲಾ ಅವರ ಕಣ್ಣಿಗೆ ಬೀಳುತ್ತಾಳೆ. ಅದೂ ಕೂಡ ಆಕಸ್ಮಿಕವಾಗಿ.. ಅಣ್ಣ ಮತ್ತು ಆತನ ಸ್ನೇಹಿತರು ಅಭ್ಯಾಸ ನಡೆಸುತ್ತಿದ್ದಾಗ ಈಕೆ ಅವರಿಗೆ ಕ್ಷೇತ್ರರಕ್ಷಕಿ. 50 ಮೀಟರ್ ದೂರದಿಂದ ಇವಳು ಎಸೆದ ಚೆಂಡೊಂದು ನೇರವಾಗಿ ಸ್ಟಂಪ್’ಗೆ ಬಂದಪ್ಪಳಿಸುತ್ತದೆ. ಅದನ್ನು ನೋಡಿದ ಹೇಮಲತಾ ಕಲಾ ಅವರಿಗೆ ಅಚ್ಚರಿ..

ಹುಡುಗಿಯ ಕೌಶಲ್ಯವನ್ನು ಆರಂಭದಲ್ಲೇ ಗುರುತಿಸಿದ ಹೇಮಲತಾ, ದೀಪ್ತಿಯನ್ನು ತನ್ನ ಗರಡಿಗೆ ಸೇರಿಸಿಕೊಳ್ಳುತ್ತಾರೆ. ದೀಪ್ತಿ ಶರ್ಮಾಳ ಕ್ರಿಕೆಟ್ ಆಸಕ್ತಿಗೆ ಬೆಂಬಲವಾಗಿ ನಿಲ್ಲುವಂತೆ ಅಣ್ಣ ಸುಮಿತ್ ಶರ್ಮಾಗೆ ಸೂಚಿಸುತ್ತಾರೆ. ತನ್ನ ಕನಸನ್ನು ಬದಿಗೊತ್ತಿದ ಅಣ್ಣ, ಉದ್ಯೋಗವನ್ನು ತ್ಯಜಿಸಿ ತಂಗಿಯ ಕ್ರಿಕೆಟ್ ಬದುಕಿಗೆ ಬೆನ್ನೆಲುಬಾಗಿ ನಿಂತು ಬಿಡುತ್ತಾನೆ. ಆಕೆಯ ಪಾಲಿಗೆ ಅಣ್ಣನೇ ಮೊದಲ ಕ್ರಿಕೆಟ್ ಗುರು. 

13ನೇ ವಯಸ್ಸಿಗೆ ಉತ್ತರ ಪ್ರದೇಶ ಅಂಡರ್-19 ತಂಡ.. 17ನೇ ವಯಸ್ಸಿಗೆ ಭಾರತ ತಂಡಕ್ಕೆ ಪದಾರ್ಪಣೆ. ಅದೇ ಹುಡುಗಿ ಈಗ ಭಾರತದ ವಿಶ್ವಕಪ್ ಗೆಲುವಿನ ವಿಜಯಶಿಲ್ಪಿ. ಹೌದು.. ಸಹೋದರನ ತ್ಯಾಗ ವ್ಯರ್ಥವಾಗಲು ಬಿಡದ ತಂಗಿ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿದ್ದಾಳೆ. 

ಅಂದ ಹಾಗೆ ದೀಪ್ತಿ ಶರ್ಮಾಳ ಕ್ರಿಕೆಟ್ ರೋಲ್ ಮಾಡೆಲ್ ಉತ್ತರ ಪ್ರದೇಶದ ಮತ್ತೊಬ್ಬ ವಿಶ್ವಕಪ್ ಹೀರೋ ಸುರೇಶ್ ರೈನಾ..!

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

five − 1 =

Latest news

24D Spin : L’ultime Manuel Complet du Gaming de Pari qui Révolutionne l’Expérience des Gamers

Table des matières Nos Mécanismes Essentiels de Ce Game Stratégie Idéale pour Maximiser Vos Gains Étude Complète des Versions Ce Qui Te Différencie...

24D Spin: Dit Ultieme Casino Spelervaring Voor Authentieke Overwinnaars

Overzicht Spelprincipe en Werking Doordachte Voordelen Terugbetalingspercentages en RTP Bonusfuncties plus Speciale Kenmerken Meest gestelde Vragen Spelprincipe en MechanicaHet spel verenigt de spanning van conventionele...

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...
- Advertisement -spot_imgspot_img

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

Must read

- Advertisement -spot_imgspot_img

You might also likeRELATED
Recommended to you