
ವಿಶ್ವ ವೃಷ್ಟಿ ಟ್ರೋಫಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಅದ್ಧೂರಿ ಚಾಲನೆ.
ಸಾಲಿಗ್ರಾಮ-ಹಳೆಕೋಟೆ ಮೈದಾನದಲ್ಲಿ ವೃಷ್ಟಿ ಸಾಲಿಗ್ರಾಮ 20 ರ ಸಂಭ್ರಮದ ಅಂಗವಾಗಿ ಆಯೋಜಿಸಿದ ರಾಜ್ಯ ಮಟ್ಟದ ವಿಶ್ವ ವೃಷ್ಟಿ ಟ್ರೋಫಿ-2026 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಿನ್ನಿಸ್ ಬುಕ್ ದಾಖಲೆಯ ಖ್ಯಾತ ಈಜು ಪಟು,ಸುಮಧುರ ಕ್ರಿಕೆಟರ್ಸ್ ಕೋಡಿ ತಂಡದ ಮಾಜಿ ಆಟಗಾರ ಗೋಪಾಲ ಖಾರ್ವಿ ಪಂದ್ಯಾಟಕ್ಕೆ ವಿದ್ಯುಕ್ತ ಚಾಲನೆ ನೀಡಿದರು.


ಈ ಸಂದರ್ಭ ಹಿರಿಯರಾದ ಸುಬ್ರಾಯ ಆಚಾರ್ಯ ಮಣೂರು,ವಿಜೇಂದ್ರ ಆಚಾರ್ಯ ಸಾಲಿಗ್ರಾಮ, ಕೆ.ಎಮ್.ಗಣೇಶ್ ಆಚಾರ್ ಕುಂಭಾಶಿ,ಮನೋಜ್ ಅಚಾರ್ ಕುಂದಾಪುರ, ಸುಬ್ರಮಣ್ಯ ಆಚಾರ್ಯ ನೀರ್ಕೆರೆ,ಕೇಶವ ಕರ್ಕೇರಾ, ರಾಘು ಆಚಾರ್ ಪಾರಂಪಳ್ಳಿ, ಹರೀಶ್ ಆಚಾರ್ ಸಾಲಿಗ್ರಾಮ,ಪ್ರಶಾಂತ್ ಆಚಾರ್ ಸಾಲಿಗ್ರಾಮ ಮತ್ತು ಶಿವನಾರಾಯಣ ಐತಾಳ್ ಕೋಟ ಉಪಸ್ಥಿತರಿದ್ದರು.






