17.3 C
London
Monday, May 13, 2024
Homeಕ್ರಿಕೆಟ್ಭಾರತ ವಿಶ್ವಕಪ್ ವಿಜಯಕ್ಕೆ ಎರಡೇ ಮೆಟ್ಟಿಲು ಬಾಕಿ

ಭಾರತ ವಿಶ್ವಕಪ್ ವಿಜಯಕ್ಕೆ ಎರಡೇ ಮೆಟ್ಟಿಲು ಬಾಕಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಈ ಬಾರಿ ಭಾರತ ಕಪ್ ಗೆಲ್ಲದಿದ್ದರೆ ಮುಂದೆ ಗೆಲ್ಲೋದು ಯಾವಾಗ? 
——————————————–
ವಿಶ್ವಕಪ್ 2023ರ ಲೀಗ್ ಹಂತದ ಪಂದ್ಯಗಳು ಈಗಾಗಲೇ ಮುಕ್ತಾಯದ ಹಂತದಲ್ಲಿವೆ. ಭಾರತಕ್ಕೆ ಈ ವಾರಾಂತ್ಯದಲ್ಲಿ ನೆದರ್ಲೆಂಡ್ ಜೊತೆಗೆ ಒಂದು ಔಪಚಾರಿಕ ಪಂದ್ಯ ಬಾಕಿ ಇದೆ. ಅದರಲ್ಲಿ ಒಂದಿಷ್ಟು ಪ್ರಯೋಗಗಳನ್ನು ಮಾಡಲು ಕೋಚ್ ರಾಹುಲ್ ದ್ರಾವಿಡ್ ಮನಸ್ಸು ಮಾಡಬಹುದು. ಟೇಬಲ್ ಟಾಪ್ ಆಗುವುದರ ಜೊತೆಗೆ ಅತೀ ಹೆಚ್ಚು ಸರಾಸರಿ ಕೂಡ ಪಡೆದು ಸೆಮೀಸ್ ಪ್ರವೇಶ ಮಾಡಿದ ಭಾರತೀಯ ಕ್ರಿಕೆಟ್ ತಂಡದ ಸಾಧನೆಯ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ ಆಗಬಹುದು.
ಭಾರತಕ್ಕೆ ಇದೆ ಉಜ್ವಲವಾದ ಗೆಲ್ಲುವ ಅವಕಾಶ. 
—————————————-
ಭಾರತದ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳ ಮುಂದೆ ಮೈಕ್ ಹಿಡಿದು ಗೆಲ್ಲುವ ಟೀಮ್ ಯಾವುದು ಎಂದು ಕೇಳಿದರೂ ಎಲ್ಲರ ಉತ್ತರ ಭಾರತ ಮತ್ತು ಭಾರತವೇ ಆಗಿರುತ್ತದೆ!
ಅದಕ್ಕೆ ಕಾರಣ ಭಾರತ ಲೀಗ್ ಹಂತದ ಪಂದ್ಯಗಳನ್ನು ಅನಾಯಾಸವಾಗಿ ಗೆದ್ದ ರೀತಿ. ಭಾರತಕ್ಕೆ ಈ ಬಾರಿ ವಿಶ್ವಕಪ್ಪಿನ ಯಾವ ಟೀಮ್ ಕೂಡ ಸವಾಲೇ ಆಗಲಿಲ್ಲ. ಭಾರೀ ದೊಡ್ಡ ಸವಾಲು ಎಂದು ನಿರೀಕ್ಷೆ ಮೂಡಿಸಿದ ದಕ್ಷಿಣ ಆಫ್ರಿಕಾ ಕೋಲ್ಕತ್ತಾದಲ್ಲಿ 83ಕ್ಕೆ ಆಲೌಟ್ ಆದದ್ದು, ಶ್ರೀಲಂಕಾ ತಂಡ 55ಕ್ಕೆ ಕುಸಿದದ್ದು ಇಡೀ ಕ್ರಿಕೆಟ್ ಜಗತ್ತನ್ನು ನಿಬ್ಬೆರಗು ಮೂಡಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ರನ್ನಿಗೆ ಮೂರು ವಿಕೆಟ್ ಪತನವಾಗಿ ಕುಸಿದು ಹೋಗಿದ್ದ ಟೀಮ್ ಇಂಡಿಯಾ ವಿರಾಟ್ ಕೋಹ್ಲಿ ಮತ್ತು ಕೆ ಎಲ್ ರಾಹುಲ್ ಅವರ ಸ್ಮರಣೀಯವಾದ ಜೊತೆಯಾಟದ ಮೂಲಕ ಕಮ್ ಬ್ಯಾಕ್ ಮಾಡಿ ಮ್ಯಾಚ್ ಗೆದ್ದಾಗಲೆ ಭಾರತೀಯ ತಂಡ ಈ ಬಾರಿ ಫೇವರಿಟ್ ಟೀಮ್ ಆಗಿ ಮೂಡಿತ್ತು. ಅಲ್ಲಿಂದ ಭಾರತಕ್ಕೆ ಎಲ್ಲವೂ ಸಲೀಸು. ಸ್ವಲ್ಪ ಬೆವರು ಹರಿಸಿದ್ದು ನ್ಯೂಜಿಲೆಂಡ್ ವಿರುದ್ಧದ ಪಂದ್ಯ. ಅದನ್ನೂ ಭಾರತ ಐದು ವಿಕೆಟ್ ಅಂತರದಲ್ಲಿ ಗೆದ್ದಿತ್ತು. ಈ ಬಾರಿಯ ಅಚ್ಚರಿಯ ತಂಡ ಆಗಿದ್ದ ಅಫ್ಘಾನಿಸ್ತಾನ್ ಕೂಡ ಭಾರತಕ್ಕೆ ಎಂಟು ವಿಕೆಟ್ ಅಂತರದಲ್ಲಿ ಶರಣಾಗಿತ್ತು. ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಭಾರತ ಪಾಕಿಸ್ತಾನ ಪಂದ್ಯ ಕೂಡ ಏಕಪಕ್ಷೀಯ ಆಗಿ ಮುಗಿಯಿತು. ಭಾರತಕ್ಕೆ ಅಲ್ಲಿ ಕೂಡ ಏಳು ವಿಕೆಟ್ ಜಯ. ಪಾಕಿಸ್ತಾನದ ಸ್ಟಾರ್ ಆಟಗಾರರು ರೋಹಿತ್ ಪಡೆಯ ಮುಂದೆ ಮಂಕಾಗಿ ಹೋದರು.
ಭಾರತದ ಎಲ್ಲ ಆಟಗಾರರೂ ಅದ್ಭುತ ಫಾರ್ಮನಲ್ಲಿ ಇದ್ದಾರೆ.
——————————————
ಸಾಮಾನ್ಯವಾಗಿ ಹೊಸ ಪ್ರಯೋಗಗಳಿಗೆ ಹೆಸರಾದ ಕೋಚ್ ರಾಹುಲ್ ದ್ರಾವಿಡ್ ಇಲ್ಲಿ ಹೆಚ್ಚು ಪ್ರಯೋಗ ಮಾಡಲು ಹೋಗಿಲ್ಲ ಎನ್ನುವುದೇ ತಂಡಕ್ಕೆ ಪ್ಲಸ್. ಯಾವಾಗ ಟೀಮ್ ಮ್ಯಾನೇಜಮೆಂಟ್ ಮತ್ತು ಕೋಚ್ ತಂಡದ ಆಟಗಾರರ ನೈತಿಕ ಬೆಂಬಲಕ್ಕೆ ನಿಲ್ಲುತ್ತಾರೆಯೋ ಆಗ ಎಲ್ಲಾ ಆಟಗಾರರೂ ಜೀವ ಬಿಟ್ಟು ಆಡುತ್ತಾರೆ. ಈ ಬಾರಿ ಆದದ್ದೂ ಹಾಗೆಯೇ! ಭಾರತದ ಟಾಪ್ ಫೋರ್ ಬ್ಯಾಟರುಗಳು( ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್) ಭಾರೀ ಫಾರ್ಮ್ನಲ್ಲಿ ಇದ್ದಾರೆ ಅನ್ನೋದು ಭಾರತಕ್ಕೆ ಪ್ಲಸ್. ಈ ನಾಲ್ವರಲ್ಲಿ ಒಬಿಬ್ಬರು ವಿಫಲರಾದರೂ ಉಳಿದಿಬ್ಬರು ಕೊನೆಯತನಕ ಲಂಗರು ಹೊಡೆದು ನಿಲ್ಲುತ್ತಾರೆ ಅನ್ನುವುದು ಲೀಗ್ ಪಂದ್ಯಗಳಲ್ಲಿ ಸಾಬೀತಾಗಿದೆ. ಆರಂಭಿಕರು ಪವರ್ ಪ್ಲೇಯ ಭರ್ಜರಿ ಲಾಭ ಎತುತ್ತಿದ್ದಾರೆ ಅನ್ನೋದು ಭಾರತಕ್ಕೆ ಗ್ರೇಟ್ ನ್ಯೂಸ್. ಕೆ ಎಲ್ ರಾಹುಲ್ ಅವರಿಂದ ಮಿಡಲ್ ಆರ್ಡರ್ ಸ್ಟ್ರಾಂಗ್ ಆಗಿದೆ.
ಸೂರ್ಯಕುಮಾರ್ ಯಾದವ್ ಸ್ವಲ್ಪ ಎಡವಟ್ಟು ಮಾಡದೆ ಆಡಿದರೆ ರನ್ ರೇಟ್ ಭಾರೀ ಹೈಪ್ ಆಗುತ್ತದೆ. ಈ ಬಾರಿ ಅಚ್ಚರಿ ಹುಟ್ಟಿಸಿದ್ದು ರವೀಂದ್ರ ಜಡೇಜಾ ಅವರ ಫಾರ್ಮ್. ಅವರು ಒಬ್ಬ ಯಶಸ್ವೀ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾರೆ. ಇದೆಲ್ಲವೂ ಭಾರತಕ್ಕೆ ಬ್ಯಾಟಿಂಗ್ ವಿಭಾಗದ ಪ್ಲಸ್ ಅಂಶಗಳು. ಅದರಲ್ಲಿಯೂ ರೋಹಿತ್ ಶರ್ಮ ಹತ್ತು ಓವರ್  ಆಡಿದರೂ ಎದುರಾಳಿಗಳ ಫೀಲ್ಡಿಂಗ್ ಚದುರಿಸಿಬಿಡುವ ಸಾಮರ್ಥ್ಯ ಹೊಂದಿದ್ದಾರೆ. ವಿಶ್ವದ  ರಾಂಕ್ ಒನ್ ಬ್ಯಾಟರ್ ಶುಭಮನ ಗಿಲ್ ನಿಂತು ಆಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಲೆಜೆಂಡ್ ಆಟಗಾರ, ಗೆಲುವಿನ ರೂವಾರಿ.
——————————————–
2011ರ ವಿಶ್ವಕಪ್ ಭಾರತ ಗೆದ್ದಾಗ ಅದು ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಆಗಿತ್ತು. ಆಗ ಸಚಿನ್ ಅವರನ್ನು ತನ್ನ ಬಲಿಷ್ಠ ಭುಜಗಳ ಮೇಲೆ ಕೂರಿಸಿ ಇಡೀ ಸ್ಟೇಡಿಯಂ ಸುತ್ತು ಬಂದವರು ಇದೇ ವಿರಾಟ್ ಕೊಹ್ಲಿ. ಆ ದೃಶ್ಯವನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ! ಈಗ ಅದೇ ಕೊಹ್ಲಿ ಸಚಿನ್ ಅವರ ಉತ್ತರಾಧಿಕಾರಿ ಆಗಿ ಕಂಡುಬರುತ್ತಿದ್ದಾರೆ. ಈ ಬಾರಿ ಕೊಹ್ಲಿ ಸಾಕಷ್ಟು ಮಾಗಿದ್ದಾರೆ. ಸನ್ನಿವೇಶಕ್ಕೆ ಸರಿಯಾಗಿ ಆಡುವುದನ್ನು ಕಲಿತಿದ್ದಾರೆ. ಅವಸರದಲ್ಲಿ ವಿಕೆಟ್ ಚೆಲ್ಲಿ ಬರುತ್ತಿದ್ದ ವಿರಾಟ್ ಈ ಬಾರಿಯ ಟೂರ್ನಿಯಲ್ಲಿ ಕಾಣಲೇ ಇಲ್ಲ. ಈ ಬಾರಿಯ ಲೀಗ್ ಪಂದ್ಯಗಳಲ್ಲಿ ಪ್ರತೀ ಒಂದು ಪಂದ್ಯದಲ್ಲಿಯೂ (ಒಂದೆರಡು ಪಂದ್ಯ ಹೊರತುಪಡಿಸಿ) ವಿರಾಟ್ ಕೋಹ್ಲಿ ತಮ್ಮ ವಿರಾಟ್ ರೂಪವನ್ನು ತೋರಿಸಿದ್ದಾರೆ. ಟೂರ್ನಿಯ ಮೂರನೇ ಅತೀ ಹೆಚ್ಚು ಸ್ಕೋರರ್ ಆಗಿದ್ದಾರೆ. ಚೇಸ್ ಮಾಸ್ಟರ್ ಆಗಿ ಶೈನ್ ಆಗಿದ್ದಾರೆ. ಆಕ್ರಮಣಕಾರಿ ಆಗಿ ಗ್ರೌಂಡಿನಲ್ಲಿ ಎಲ್ಲೆಡೆ ಹಾರಾಡುತ್ತಿದ್ದ ಕೋಹ್ಲಿ ಈ ಬಾರಿ ತಣ್ಣಗಿನ ಜ್ವಾಲಾಮುಖಿ ಆಗಿದ್ದಾರೆ. ಈ ವಿಶ್ವಕಪ್ ಕೂಟದಲ್ಲಿಯೇ ವಿರಾಟ್ ಕೊಹ್ಲಿ ಸಚಿನ್ ಅವರ ಶತಕಗಳ ದಾಖಲೆ ಮುರಿಯುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ವಿರಾಟ್ ಅವರನ್ನು ಖಂಡಿತ ನಿರಾಸೆ ಮಾಡುವುದಿಲ್ಲ ಅನ್ನೋದು ನಮ್ಮ ಭರವಸೆ. ವಿರಾಟ್ ಕೋಹ್ಲಿ ಮುಂದೆ ಬರಲಿರುವ ಭಾರತೀಯ ಕ್ರಿಕೆಟ್ ಆಟಗಾರರಿಗೆ ಒಬ್ಬ ಅದ್ಭುತ ಐಕಾನ್ ಆಟಗಾರ ಆಗಿ ನಿಲ್ಲುವುದು ಗ್ಯಾರಂಟೀ.
ಭಾರೀ ಸ್ಟ್ರಾಂಗ್ ಆದ ಬೌಲಿಂಗ್ ಬ್ಯಾಟರಿ! 
——————————————–
ಈ ಹಿಂದಿನ ಯಾವ ವಿಶ್ವಮಟ್ಟದ ಟೂರ್ನಿಯಲ್ಲಿಯು ಭಾರತದ ಬೌಲಿಂಗ್ ಬ್ಯಾಟರಿಯು ಇಷ್ಟೊಂದು ಸ್ಟ್ರಾಂಗ್ ಆಗಿರಲಿಲ್ಲ ಅನ್ನೋದು ಎಲ್ಲರ ಅಭಿಪ್ರಾಯ. ಬುಮ್ರಾ ಸರ್ಜರಿ ಮುಗಿಸಿಕೊಂಡು ಬಂದ ನಂತರ ಎದುರಾಳಿ ಬ್ಯಾಟರಗಳಿಗೆ ಸಿಡಿಲೆ ಆಗಿದ್ದಾರೆ. ಮೊಹಮ್ಮದ್ ಸಿರಾಜ್ ಪವರ್ ಪ್ಲೆ ಹಂತದಲ್ಲಿ ಸುಲಭವಾಗಿ ವಿಕೆಟ್ ಪಡೆಯುತ್ತಿದ್ದಾರೆ. ಮೊದಲ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಂಡ ಮೊಹಮ್ಮದ್ ಶಮ್ಮೀ ಈ ಬಾರಿ ಭಾರತದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಅವರ ಸ್ವಿಂಗ್ ಎಸೆತಗಳಿಗೆ ಈ ಬಾರಿ ಯಾವ ಆಟಗಾರರೂ ಉತ್ತರ ನೀಡಿಲ್ಲ! ಇದರಿಂದಾಗಿ ಭಾರತ ತಂಡದಲ್ಲಿ ಹಾರ್ದಿಕ ಪಾಂಡ್ಯ ಅವರ ಗೈರು ಹಾಜರಿ ಕಾಡಲಿಲ್ಲ! ಇನ್ನು ಇಬ್ಬರು ಸ್ಪಿನ್ ಬೌಲರಗಳು ತಮ್ಮ ಅತ್ಯುತ್ತಮ ಲಯದಲ್ಲಿ ಇದ್ದಾರೆ. ರವೀಂದ್ರ ಜಡೇಜಾ ಹೆಚ್ಚು ಕಡಿಮೆ ಎಲ್ಲಾ ಪಂದ್ಯಗಳಲ್ಲಿಯು ವಿಕೆಟ್ ಗೊಂಚಲು ಕಿತ್ತಿದ್ದಾರೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಇನ್ನೂ ಎದುರಾಳಿ ಬ್ಯಾಟರಗಳಿಗೆ ಸಸ್ಪೆನ್ಸ್ ಆಗಿದ್ದಾರೆ. ಈ ಐದೇ ಬೌಲರಗಳು ಮಿಂಚುತ್ತಿರುವ ಕಾರಣ ಪಾರ್ಟ್ ಟೈಮ್ ಬೌಲರ್ ಅಗತ್ಯವೇ ಭಾರತಕ್ಕೆ ಬೀಳಲಿಲ್ಲ. ಸೆಮೀಸ್ ಹೊತ್ತಿಗೆ ರವಿಚಂದ್ರನ್ ಅಶ್ವಿನ್ ಅಥವಾ ಪ್ರಸಿದ್ಧ ಕೃಷ್ಣ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ಅಶ್ವಿನ್ ಬಂದರೆ ಭಾರತದ ಬೌಲಿಂಗ್ ಇನ್ನಷ್ಟು ಘಾತಕ ಆಗುವ ಸಾಧ್ಯತೆ ಇದೆ.
ಕೆ ಎಲ್ ರಾಹುಲ್ ವಿಕೆಟ್ ಕೀಪಿಂಗ್ ಚೆನ್ನಾಗಿ ಮಾಡುವ ಕಾರಣ ಭಾರತೀಯ ಫೀಲ್ಡಿಂಗ್ ಈ ಬಾರಿ ಅತ್ಯುತ್ತಮ ಆಗಿಯೇ ಇದೆ. ರೋಹಿತ್ ಶರ್ಮಾ ಅವರ ನಾಯಕತ್ವ, ಅವರ ಬೌಲಿಂಗ್ ಬದಲಾವಣೆ, ಫೀಲ್ಡ್ ಸೆಟ್ ಭಾರತವನ್ನು ಸಲೀಸಾಗಿ ಗೆಲ್ಲಿಸುತ್ತಿದೆ. ಭಾರತ ಮೊದಲು ಬ್ಯಾಟ್ ಮಾಡಿ ಅಥವಾ ಚೇಸ್ ಮಾಡಿ ಎರಡೂ ವಿಭಾಗಗಳಲ್ಲಿ ಗೆದ್ದಿದೆ ಅನ್ನೋದು ಆಡೆಡ್ ಅಡ್ವಾಂಟೇಜ್! ಅದೃಷ್ಟವೂ ಭಾರತದ ಕಡೆಗಿದೆ ಅನ್ನೋದು ಮೇಲ್ನೋಟಕ್ಕೆ ಕಾಣುತ್ತದೆ.
ಭರತವಾಕ್ಯ 
—————-
1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ದೇವ್ ಪಡೆ ಮತ್ತು 2011ರಲ್ಲೀ ಗೆದ್ದ ಧೋನಿ ಪಡೆಗಿಂತ ಈ ಬಾರಿಯ ಟೀಮ್ ಇಂಡಿಯಾ ತುಂಬಾ ಬಲಿಷ್ಠ ಆಗಿದೆ. ತಂಡದಲ್ಲಿ ಮೆಚ್ಟುರಿಟಿ ಎದ್ದು ಕಾಣುತ್ತಿದೆ. ಟೀಮ್ ಸ್ಪಿರಿಟ್ ತುಂಬಾ ಸ್ಟ್ರಾಂಗ್ ಇದೆ. ಅದರಲ್ಲಿಯೂ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಗೆ ಇದು ಕೊನೆಯ ವಿಶ್ವಕಪ್ ಎನ್ನುವ ಭಾವನಾತ್ಮಕ ಅಂಶವೇ ಭಾರತವನ್ನು ಗೆಲುವಿನ ಕಡೆಗೆ ಮುನ್ನಡೆಸುತ್ತದೆ. ಲೀಗ್ ಪಂದ್ಯಗಳಲ್ಲಿ ಭಾರತವು ಎಲ್ಲಾ ತಂಡಗಳನ್ನು ಅಧಿಕಾರಯುತವಾಗಿ ಸೋಲಿಸಿರುವ ಕಾರಣ ಅವುಗಳು ಮುಂದೆ ಭಾರತದ ವಿರುದ್ಧ ಆಡುವಾಗ ಭಯದಲ್ಲಿಯೆ ಆಡುತ್ತವೆ ಅನ್ನೋದು ಕಾಮನ್ ಸೆನ್ಸ್. ಇದು ಕೂಡ ಭಾರತಕ್ಕೆ ಪ್ಲಸ್.
ಗೆದ್ದು ಬಾ ಭಾರತ. ಆಲ್ ದ ಬೆಸ್ಟ್. 
ರಾಜೇಂದ್ರ ಭಟ್ ಕೆ.

Latest stories

LEAVE A REPLY

Please enter your comment!
Please enter your name here

fifteen + three =