ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ನ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಸೆಮಿಫೈನಲ್‌ನಿಂದ ಬಹುತೇಕ ಹೊರಬಿದ್ದಿದೆ. ಪಾಕಿಸ್ತಾನಕ್ಕೆ ಸೆಮಿಫೈನಲ್ ತಲುಪಲು ಕಠಿಣ ಹಾದಿಯಿದೆ. ಇನ್ನೂ ಜೀವಂತವಾಗಿರಬೇಕಾದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಊಹಿಸಲೂ ಸಾಧ್ಯವಾಗದಂತಹ ಸಾಧನೆ ಮಾಡಬೇಕಿದೆ.
ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡಿದರೆ ಪಾಕಿಸ್ತಾನ ತಂಡ ಔಟ್ಆದ ಹಾಗೇನೆ . ಇಂಗ್ಲೆಂಡ್ ತಂಡ ನೀಡಿದ ಗುರಿಯನ್ನು ಪಾಕಿಸ್ತಾನ ಕೇವಲ 156 ಎಸೆತಗಳಲ್ಲಿ ಸಾಧಿಸಬೇಕಾಗಿದೆ. ಅದು ಎಲ್ಲಿಂದಲಾದರೂ ಸಾಧ್ಯವಾಗುವಂತೆ ಕಾಣುತ್ತಿಲ್ಲ. ಇದಲ್ಲದೇ ಪಾಕಿಸ್ತಾನ ಮೊದಲು ಆಡಿದರೆ ಇಂಗ್ಲೆಂಡ್ 287 ರನ್ ಗಳಿಂದ ಸೋಲನುಭವಿಸಬೇಕಾಗುತ್ತದೆ. ಇದೂ ಸಾಧ್ಯವಾಗುತ್ತಿಲ್ಲವಂತೆ.
ಮೊದಲು ಆಡುವಾಗ ಪಾಕಿಸ್ತಾನ 300 ರನ್ ಗಳಿಸಿದರೆ, ಇಂಗ್ಲೆಂಡ್ 13 ರನ್‌ಗೆ ಔಟಾಗಬೇಕಾಗುತ್ತದೆ. ಅದೇ ರೀತಿ 400ರನ್ ಸ್ಕೋರ್ ನಲ್ಲಿ ಇಂಗ್ಲೆಂಡ್ 113 ರನ್ ಗಳಿಗೆ ಆಲೌಟ್ ಆಗಬೇಕಿದೆ. 450 ರನ್ ಗಳಿಸಿದ ನಂತರ ಪಾಕ್ ತಂಡದ ಬೌಲರ್‌ಗಳು ಆಂಗ್ಲ ತಂಡವನ್ನು ಒಟ್ಟು 162 ರನ್‌ಗಳಿಗೆ ಆಲೌಟ್ ಮಾಡಬೇಕು ಮತ್ತು 500 ರನ್ ಗಳಿಸಿದ ನಂತರ ಆಂಗ್ಲರ ತಂಡವನ್ನು 211 ರನ್‌ಗಳಿಗೆ ಆಲೌಟ್ ಮಾಡಬೇಕಾಗುತ್ತದೆ. ಈ ಅಂಕಿಅಂಶಗಳು ಯಾವುದೂ ಸುಲಭವಲ್ಲ. ಪಾಕಿಸ್ತಾನ ಪವಾಡ ಮಾಡಬೇಕಿದೆ.
ಸದ್ಯ ಪಾಕಿಸ್ತಾನ ತಂಡ 8 ಅಂಕ ಹೊಂದಿದೆ. ಇಂಗ್ಲೆಂಡ್ ವಿರುದ್ಧ ಸರಳ ಗೆಲುವು ದಾಖಲಿಸಿದರೆ, ನಿವ್ವಳ ರನ್ ರೇಟ್‌ನಲ್ಲಿ ನ್ಯೂಜಿಲೆಂಡ್‌ಗಿಂತ ಹಿಂದೆ ಉಳಿಯುತ್ತದೆ. ಆ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡ ಅಗ್ರ ನಾಲ್ಕರಲ್ಲಿದೆ. ಸದ್ಯ ಪಾಕಿಸ್ತಾನ ತಂಡ ಸೆಮಿಫೈನಲ್‌ನಿಂದ ಹೊರಗುಳಿದಿದ್ದು, ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಅಗ್ರ ನಾಲ್ಕು ಸೆಮಿಫೈನಲ್ ಪಂದ್ಯವನ್ನು ಆಡಲಿದೆ ಎಂದು ಹೇಳಬಹುದು.
ಸೆಮಿಫೈನಲ್ ನಲ್ಲಿ ಮೊದಲ ಶ್ರೇಯಾಂಕದ ತಂಡವು ನಾಲ್ಕನೇ ಶ್ರೇಯಾಂಕದ ತಂಡವನ್ನು ಎದುರಿಸಲಿದೆ. ಇದರರ್ಥ ಭಾರತವು ನ್ಯೂಜಿಲ್ಯಾಂಡ್ ಎದುರಿಸುವ ಸಾಧ್ಯತೆಗಳು ಹೆಚ್ಚು. ಎರಡನೇ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ತಂಡವು ಮೂರನೇ ಶ್ರೇಯಾಂಕದ ತಂಡವನ್ನು ಎದುರಿಸಲಿದೆ. ಅಂದರೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಹಣಾಹಣಿ ನಡೆಯಲಿದೆ.
ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಸ್ಥಾನ ಬಹುತೇಕ ಫಿಕ್ಸ್..!
ಭಾರತ Vs ನ್ಯೂಜಿಲ್ಯಾಂಡ್
ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ.
ಯಾವ ತಂಡ ಫೈನಲ್ ತಲುಪುತ್ತದೆ ಎಂದು ಊಹಿಸಿ.
ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಬರಹಗಾರರು
ಟೀಂ ಸ್ಪೋರ್ಟ್ಸ್ ಕನ್ನಡ