ಕ್ರಿಕೆಟ್ಸಹನಾ ಟ್ರೋಫಿ ಸತತ ಎರಡನೇ ಬಾರಿಗೆ ಚಾಂಪಿಯನ್ಸ್-ವಿನೂತನ ಮೈಲಿಗಲ್ಲು ಸ್ಥಾಪಿಸಿದ ಫ್ರೆಂಡ್ಸ್...

ಸಹನಾ ಟ್ರೋಫಿ ಸತತ ಎರಡನೇ ಬಾರಿಗೆ ಚಾಂಪಿಯನ್ಸ್-ವಿನೂತನ ಮೈಲಿಗಲ್ಲು ಸ್ಥಾಪಿಸಿದ ಫ್ರೆಂಡ್ಸ್ ಬೆಂಗಳೂರು

-

- Advertisment -spot_img
ಶಿವಮೊಗ್ಗ-ಪರಿಸರದ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಇವರು ಶಿವಮೊಗ್ಗದ ಗೋಪಾಳದ ಮೈದಾನದಲ್ಲಿ ಸತತ ಎರಡನೇ ಬಾರಿಗೆ ಆಯೋಜಿಸಿದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಸಹನಾ ಟ್ರೋಫಿ-2023 ಪ್ರಶಸ್ತಿಯನ್ನು ರೇಣು ಗೌಡರ ಮಾಲೀಕತ್ವದ ಫ್ರೆಂಡ್ಸ್ ಬೆಂಗಳೂರು ತಂಡ ಜಯಿಸಿದೆ.ಸಹನಾ ಟ್ರೋಫಿಯಲ್ಲಿ ಸತತ  ಎರಡನೇ ಬಾರಿಗೆ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸುವುದರ ಮೂಲಕ ವಿನೂತನ‌ ಮೈಲಿಗಲ್ಲನ್ನು ಸ್ಥಾಪಿಸಿದೆ.
ರಾಜ್ಯ ಮಟ್ಟದ ತಂಡಗಳ ಜೊತೆ ಶಿವಮೊಗ್ಗ ಜಿಲ್ಲೆಯ ತಂಡಗಳಿಗೂ ಸಮಾನವಕಾಶ ಸಹನಾ ಕ್ರಿಕೆಟ್ ಕ್ಲಬ್ ಕಲ್ಪಿಸಿತ್ತು.ಶನಿವಾರ ಶಿವಮೊಗ್ಗ ಪರಿಸರದ 8 ತಂಡಗಳು ಭಾಗವಹಿಸಿದ್ದು,ರವಿವಾರದಂದು ರಾಜ್ಯದ 6 ಪ್ರತಿಷ್ಠಿತ ತಂಡಗಳ ನಡುವೆ ರೋಚಕ‌ ಹಣಾಹಣಿ ನಡೆಯಿತು.
ಬಹುತೇಕ ಏಕ ಪಕ್ಷೀಯವಾಗಿ ಗೆಲುವನ್ನು ಸಾಧಿಸಿದ ಫ್ರೆಂಡ್ಸ್ ಬೆಂಗಳೂರು ಅಂತಿಮವಾಗಿ ಶಿವಮೊಗ್ಗ ಲಯನ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಫ್ರೆಂಡ್ಸ್ ಬೆಂಗಳೂರು 2 ಲಕ್ಷ ನಗದು,ದ್ವಿತೀಯ ಸ್ಥಾನಿ ಶಿವಮೊಗ್ಗ ಲಯನ್ಸ್ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು.
ಫೈನಲ್ ಪಂದ್ಯಶ್ರೇಷ್ಟ ಮತ್ತು ಬೆಸ್ಟ್  ಬ್ಯಾಟರ್ ಫ್ರೆಂಡ್ಸ್ ಬೆಂಗಳೂರಿನ  ಗಿಳಿಯಾರು ನಾಗ,ಬೆಸ್ಟ್ ಬೌಲರ್ ಶಿವು ಲಷ್ಕರ್ ಬಾಯ್ಸ್ ಹಾಗೂ ಪಂದ್ಯಾಟದಲ್ಲಿ ಸರ್ವಾಂಗೀಣ ಆಟ ಪ್ರದರ್ಶಿಸಿದ ಎಸ್.ಕೆ‌ ಲಯನ್ಸ್ ನ ಸಚಿನ್ ಹಿರೇಸರ ಸರಣಿಶ್ರೇಷ್ಟ ಗೌರವಕ್ಕೆ ಭಾಜನರಾದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿಸಹನಾ ಕ್ರಿಕೆಟ್ ಕ್ಲಬ್ ನ ಸಂಸ್ಥಾಪಕ ಬಸವೇಗೌಡ್ರು, ಶಿವ ಟೈರ್ ಮಾಲೀಕರು ಶಿವಕುಮಾರ್ ಎನ್, ಎನ್ ಎಸ್ ಮಂಜುನಾಥ್ ಆಯೋಜಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರು, ಶ್ರೀನಾಥ್ ಅಧ್ಯಕ್ಷರು ದಯಾ ಫ್ರೆಂಡ್ಸ್ ಫುಟ್ಬಾಲ್ ಕ್ಲಬ್, ವರದರಾಜ ಹಿರಿಯ ಸಹನಾ ಕ್ರಿಕೆಟ್ ಕ್ಲಬ್ ಆಟಗಾರರು, ಇಂದ್ರೇಶ್, ಫೈರೋಜ್, ಮಂಜುನಾಥ್, ವೆಂಕಟೇಶ್ ಹಾಗೂ ಸಹನಾ ಕ್ರಿಕೆಟ್ ಕ್ಲಬ್ ಆಟಗಾರರು ಉಪಸ್ಥಿತರಿದ್ದರು.ರೋಹನ್ ಕಾರ್ಯಕ್ರಮ ನಿರೂಪಿಸಿದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

5 + 10 =

Latest news

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’   ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಚಿತ್ರದುರ್ಗ ಇವರ ವತಿಯಿಂದ ಕರ್ನಾಟಕ...

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ ಬೆಂಗಳೂರು ಉತ್ತರದ ಯಲಹಂಕ ನ್ಯೂಟೌನ್‌ನ ಹೊಯ್ಸಳ ಮೈದಾನದಲ್ಲಿ ಮೇ 29, 30 ಮತ್ತು 31ರಂದು “ಯಲಹಂಕ...
- Advertisement -spot_imgspot_img

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ ಉಡುಪಿ ಜಿಲ್ಲೆಯ ಕಡಿಯಾಳಿ ಶಾಲಾ ಮೈದಾನದಲ್ಲಿ ಮೇ 24, 2026ರಂದು “ಸೈಮಂಡ್ಸ್ ಪ್ರೀಮಿಯರ್ ಲೀಗ್...

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್ ಕಟಪಾಡಿ : ಯುವಕ ಸೇವಾದಳ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ,...

Must read

- Advertisement -spot_imgspot_img

You might also likeRELATED
Recommended to you