ಹೊಸನಗರ ಬ್ರದರ್ಸ್ ಇವರ ಆಶ್ರಯದಲ್ಲಿ ಇಲ್ಲಿನ ನೆಹರೂ ಮೈದಾನದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಹೊನಲುಬೆಳಕಿನ “ಹೊಸನಗರ ಟ್ರೋಫಿ-2023” ಪ್ರಶಸ್ತಿಯನ್ನು ಜೈ ಕರ್ನಾಟಕ ಬೆಂಗಳೂರು ಜಯಿಸುವುದರ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿ ಹೊಸನಗರದಲ್ಲಿ ಹೊಸ ಅಧ್ಯಾಯ ಬರೆಯಿತು.
*ಮಾರ್ಕ್ ಮಹೇಶ್ ಬೌಲಿಂಗ್ ದಾಳಿಗೆ ಮುಗ್ಗರಿಸಿದ ನ್ಯಾಶ್*
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜೈ ಕರ್ನಾಟಕ ಬೆಂಗಳೂರು-ಡಿ.ಜೆ ನ್ಯಾಶ್ ಬೌಲರ್ ಗಳ ನೇರ ನಿಖರ ಎಸೆತಗಳಿಗೆ ರನ್ ಗಳಿಸಲು ಪರದಾಡಿದರೂ ಅಂತಿಮವಾಗಿ 5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 29 ರನ್ ಕಲೆಹಾಕಿತ್ತು.
ಚೇಸಿಂಗ್ ವೇಳೆ ನ್ಯಾಶ್ ತಂಡ ಮಾರ್ಕ್ ಮಹೇಶ್ ಅತ್ಯುತ್ತಮ ಬೌಲಿಂಗ್ ದಾಳಿಗೆ ಹಠಾತ್ ವಿಕೆಟ್ ಪತನ ಕಂಡಿತ್ತು.ಮಾರ್ಕ್ 2 ಓವರ್ ಗಳಲ್ಲಿ ಕೇವಲ 6 ರನ್ ನೀಡಿ 4 ಅಮೂಲ್ಯ ವಿಕೆಟ್ ಗಳನ್ನು ಪಡೆದುಕೊಂಡರು. ಕೊನೆಯ ಓವರ್ ನಲ್ಲಿ ನ್ಯಾಶ್ ಗೆಲುವಿಗೆ 8 ರನ್ ಅಗತ್ಯತೆಯ ಸಂದರ್ಭದಲ್ಲಿ ಮೊಹ್ಸಿನ್ ಕೇವಲ 3 ರನ್ ನೀಡಿ ಗೆಲುವಿಗೆ ಕಾರಣೀಭೂತರಾದರು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಜೈ ಕರ್ನಾಟಕ ಬೆಂಗಳೂರು 2,22,222 ರೂ,ದ್ವಿತೀಯ ಸ್ಥಾನಿ ಡಿ.ಜೆ ನ್ಯಾಶ್ 1,11,111 ರೂ,ತೃತೀಯ ಸ್ಥಾನಿ ಸೂರಜ್ ಇಲೆವೆನ್ 33,333 ಮತ್ತು ಚತುರ್ಥ ಸ್ಥಾನಿ ಜೈಹಿಂದ್ ಶಿವಮೊಗ್ಗ 22,222 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆದುಕೊಂಡರು.
ಫೈನಲ್ ಪಂದ್ಯಶ್ರೇಷ್ಟ ಮಾರ್ಕ್ ಮಹೇಶ್,ಬೆಸ್ಟ್ ಬ್ಯಾಟರ್ ಡೇವಿಡ್ ಜೈ ಕರ್ನಾಟಕ, ಬೆಸ್ಟ್ ಬೌಲರ್ ಸನತ್ ಕೋಡೂರು ಮತ್ತು ಪಂದ್ಯಾಟದುದ್ದಕ್ಕೂ ಶ್ರೇಷ್ಠ ಸವ್ಯಸಾಚಿ ಪ್ರದರ್ಶನ ನೀಡಿದ ಡಿ.ಜೆ ನ್ಯಾಶ್ ನ ಸ್ವಸ್ತಿಕ್ ನಾಗರಾಜ್ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಚಿನ್ನದ ಉಂಗುರವನ್ನು ಪಡೆದುಕೊಂಡರು.