14.2 C
London
Tuesday, May 14, 2024
Homeಕ್ರಿಕೆಟ್ಶಿವಮೊಗ್ಗ-ಉಕ್ಕಿನ ನಗರಿಯಲ್ಲಿ ಉತ್ತಪ್ಪ ಆರ್ಭಟ-ಸಚಿನ್ ಹ್ಯಾಟ್ರಿಕ್-ಜೈ ಕರ್ನಾಟಕ ಜಯಭೇರಿ

ಶಿವಮೊಗ್ಗ-ಉಕ್ಕಿನ ನಗರಿಯಲ್ಲಿ ಉತ್ತಪ್ಪ ಆರ್ಭಟ-ಸಚಿನ್ ಹ್ಯಾಟ್ರಿಕ್-ಜೈ ಕರ್ನಾಟಕ ಜಯಭೇರಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಓಂ ಕ್ರಿಕೆಟರ್ಸ್ ಇವರ ವತಿಯಿಂದ ಭದ್ರಾವತಿಯ ಜನಪ್ರಿಯ ಶಾಸಕರಾದ ಶ್ರೀ.ಬಿ‌.ಕೆ‌.ಸಂಗಮೇಶ್ವರ ಇವರ ಆಶ್ರಯದಲ್ಲಿ ಯುವ ಮುಖಂಡರಾದ ಕೆ.ಪಿ.ಗಿರೀಶ್ ಇವರ ಸಾರಥ್ಯದಲ್ಲಿ ಭದ್ರಾವತಿಯ ಕನಕ ಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೊಟ್ಟಮೊದಲ ರಾಜ್ಯ ಮಟ್ಟದ ಪ್ರತಿಷ್ಠಿತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಓಂ ಕಪ್-2021 ಪ್ರಶಸ್ತಿಯನ್ನು ಜೈ ಕರ್ನಾಟಕ ಬೆಂಗಳೂರು ತಂಡ ಜಯಿಸಿದೆ.
ಶಿವಮೊಗ್ಗದ ಖುಷಿ ಕಮ್ಯುನಿಕೇಶನ್ಸ್ ಅಜಯ್ ರಾವ್ ಸಾರಥ್ಯದಲ್ಲಿ ಎ‌.ಜೆ‌. ಜೈಕರ್ನಾಟಕ ನಾಮಾಂಕಿತದಲ್ಲಿ
ಕಣಕ್ಕಿಳಿದಿತ್ತು. ಭದ್ರಾವತಿಯ ಕನಕ ಮಂಟಪ ಮೈದಾನದಲ್ಲಿ ಉಕ್ಕಿನ ಹೊಡೆತಗಳಿಂದ ಮೂಲೆ
ಮೂಲೆಗೂ ಸಿಕ್ಸರ್ ಸಿಡಿಸಿ ರಂಜಿಸಿದ ಉತ್ತಪ್ಪ ಹಾಗೂ ಹ್ಯಾಟ್ರಿಕ್ ಹೀರೋ ಸಚಿನ್ ಮಹಾದೇವ್ ಹಾಗೂ ತಂಡದ ಸದಸ್ಯರ ಸಂಘಟಿತ ಹೋರಾಟದ ಫಲವಾಗಿ ಲೀಗ್ ಹಂತದಲ್ಲಿ ಬಲಾಢ್ಯ ತಂಡಗಳನ್ನು ಮಣಿಸಿ,ಫೈನಲ್ ನಲ್ಲಿ ಆರ್.ಕೆ‌.ಅಘೋರ ತಂಡವನ್ನು ಸೋಲಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಅರ್ಹವಾಗಿ ಫೈನಲ್ ನ ಪಂದ್ಯಶ್ರೇಷ್ಟ ಹಾಗೂ ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ದಿಲೀಪ್ ಉತ್ತಪ್ಪ ಪಡೆದರೆ,ಸೆಮಿಫೈನಲ್ ಪಂದ್ಯದ ಹ್ಯಾಟ್ರಿಕ್ ಸಹಿತ ಒಟ್ಟು 13 ವಿಕೆಟ್ ಗಳಿಸಿದ ಸಚಿನ್ ಮಹಾದೇವ್ ಬೆಸ್ಟ್ ಬೌಲರ್,ಆರ್.ಕೆ.ಅಘೋರ ತಂಡದ ಶರತ್
ಸರಣಿಶ್ರೇಷ್ಟ,ಒಂದೇ ಓವರ್ ನಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಅಪರೂಪದ ದಾಖಲೆ ಬರೆದ ನವಾಜ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.
ಅತ್ಯುತ್ತಮ ಫಾರ್ಮ್ ನಲ್ಲಿರುವ ಜೈ ಕರ್ನಾಟಕದ ಆಟಗಾರರು ದಾವಣಗೆರೆ ಶಾಮನೂರು ಡೈಮಂಡ್ & ಶಿವಗಂಗಾ ಕಪ್ ನ ರನ್ನರ್ ಅಪ್ ಪ್ರಶಸ್ತಿ, ಕೆ.ಆರ್.ಪುರಂ ನಲ್ಲಿ ನಡೆದ UK 9 ಸ್ಕ್ವೇರ್ ಕಪ್ ನಲ್ಲಿ ರನ್ನರ್ ಅಪ್ ಹಾಗೂ ಭದ್ರಾವತಿಯ ಓಂ ಕಪ್ ಪ್ರಶಸ್ತಿಯ ಸಹಿತ ಸತತ 3 ರಾಜ್ಯಮಟ್ಟದ ಟೂರ್ನಮೆಂಟ್ ನ ಫೈನಲ್ ಪ್ರವೇಶಿಸಿ ಪ್ರಶಸ್ತಿ ಗಳಿಸಿ ದಾಖಲೆ ಬರೆದಿದ್ದಾರೆ.
ಟೂರ್ನಮೆಂಟ್ ನೇರ ಪ್ರಸಾರವನ್ನು M.Sports ಬಿತ್ತರಿಸಿದರೆ,ಹಿರಿಯ ಪ್ರಸಿದ್ಧ ಕಾಮೆಂಟೇಟರ್ ಗಳಾದ ವಿನಯ್ ಉದ್ಯಾವರ ಹಾಗೂ ಪ್ರಶಾಂತ್ ಅಂಬಲಪಾಡಿ ವೀಕ್ಷಕ ವಿವರಣೆ ನಡೆಸಿದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

2 × 3 =