ಸಕಲೇಶಪುರ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ವತಿಯಿಂದ ಮೊದಲನೇ ವರ್ಷದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಅಗಲಿದ ಯುವರತ್ನ ಅಪ್ಪು-ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ,ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಈ ಪಂದ್ಯಾವಳಿ ಡಿಸೆಂಬರ್ 25 ಮತ್ತು 25 ರಂದು ನಡೆಯಲಿದೆ.
ಶನಿವಾರದಂದು ಸಕಲೇಶಪುರದ ಸ್ಥಳೀಯ 16 ತಂಡಗಳು ಹಾಗೂ ರವಿವಾರ ಮುಕ್ತ 16 ತಂಡಗಳು ಭಾಗವಹಿಸಲಿದ್ದು,ಪ್ರಥಮ ಬಹುಮಾನ ವಿಜೇತ ತಂಡ 33,333 ದ್ವಿತೀಯ ಸ್ಥಾನಿ 17,777 ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಸಕಲೇಶಪುರದ ಎಸ್.ಸಿ.ಎಲ್ ಗ್ರೂಪ್ಸ್ ಪ್ರಥಮ ಬಹುಮಾನ ಹಾಗೂ ಕಟ್ಟಾಯ-ಆಲೂರು ಸಕಲೇಶಪುರದ ಕಾಂಗ್ರೆಸ್ ಮುಖಂಡರಾದ ಶ್ರೀ ಮುರಳಿ ಮೋಹನ್ ದ್ವಿತೀಯ ಬಹುಮಾನವನ್ನು ಕೊಡಮಾಡಿದ್ದಾರೆ.
ವಿಶೇಷ ಆಕರ್ಷಣೆ ಎಂಬಂತೆ ಮಜಾಟಾಕೀಸ್ ನ ಹಾಸ್ಯ ಚಕ್ರವರ್ತಿ ತರಂಗ ವಿಶ್ವ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.