ಓಂ ಕ್ರಿಕೆಟರ್ಸ್ ಇವರ ವತಿಯಿಂದ ಭದ್ರಾವತಿಯ ಜನಪ್ರಿಯ ಶಾಸಕರಾದ ಶ್ರೀ.ಬಿ.ಕೆ.ಸಂಗಮೇಶ್ವರ ಇವರ ಆಶ್ರಯದಲ್ಲಿ ಯುವ ಮುಖಂಡರಾದ ಕೆ.ಪಿ.ಗಿರೀಶ್ ಇವರ ಸಾರಥ್ಯದಲ್ಲಿ ಭದ್ರಾವತಿಯ ಕನಕ ಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೊಟ್ಟಮೊದಲ ರಾಜ್ಯ ಮಟ್ಟದ ಪ್ರತಿಷ್ಠಿತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಓಂ ಕಪ್-2021 ಪ್ರಶಸ್ತಿಯನ್ನು ಜೈ ಕರ್ನಾಟಕ ಬೆಂಗಳೂರು ತಂಡ ಜಯಿಸಿದೆ.
ಶಿವಮೊಗ್ಗದ ಖುಷಿ ಕಮ್ಯುನಿಕೇಶನ್ಸ್ ಅಜಯ್ ರಾವ್ ಸಾರಥ್ಯದಲ್ಲಿ ಎ.ಜೆ. ಜೈಕರ್ನಾಟಕ ನಾಮಾಂಕಿತದಲ್ಲಿ
ಕಣಕ್ಕಿಳಿದಿತ್ತು. ಭದ್ರಾವತಿಯ ಕನಕ ಮಂಟಪ ಮೈದಾನದಲ್ಲಿ ಉಕ್ಕಿನ ಹೊಡೆತಗಳಿಂದ ಮೂಲೆ
ಮೂಲೆಗೂ ಸಿಕ್ಸರ್ ಸಿಡಿಸಿ ರಂಜಿಸಿದ ಉತ್ತಪ್ಪ ಹಾಗೂ ಹ್ಯಾಟ್ರಿಕ್ ಹೀರೋ ಸಚಿನ್ ಮಹಾದೇವ್ ಹಾಗೂ ತಂಡದ ಸದಸ್ಯರ ಸಂಘಟಿತ ಹೋರಾಟದ ಫಲವಾಗಿ ಲೀಗ್ ಹಂತದಲ್ಲಿ ಬಲಾಢ್ಯ ತಂಡಗಳನ್ನು ಮಣಿಸಿ,ಫೈನಲ್ ನಲ್ಲಿ ಆರ್.ಕೆ.ಅಘೋರ ತಂಡವನ್ನು ಸೋಲಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಅರ್ಹವಾಗಿ ಫೈನಲ್ ನ ಪಂದ್ಯಶ್ರೇಷ್ಟ ಹಾಗೂ ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ದಿಲೀಪ್ ಉತ್ತಪ್ಪ ಪಡೆದರೆ,ಸೆಮಿಫೈನಲ್ ಪಂದ್ಯದ ಹ್ಯಾಟ್ರಿಕ್ ಸಹಿತ ಒಟ್ಟು 13 ವಿಕೆಟ್ ಗಳಿಸಿದ ಸಚಿನ್ ಮಹಾದೇವ್ ಬೆಸ್ಟ್ ಬೌಲರ್,ಆರ್.ಕೆ.ಅಘೋರ ತಂಡದ ಶರತ್
ಸರಣಿಶ್ರೇಷ್ಟ,ಒಂದೇ ಓವರ್ ನಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಅಪರೂಪದ ದಾಖಲೆ ಬರೆದ ನವಾಜ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.
ಅತ್ಯುತ್ತಮ ಫಾರ್ಮ್ ನಲ್ಲಿರುವ ಜೈ ಕರ್ನಾಟಕದ ಆಟಗಾರರು ದಾವಣಗೆರೆ ಶಾಮನೂರು ಡೈಮಂಡ್ & ಶಿವಗಂಗಾ ಕಪ್ ನ ರನ್ನರ್ ಅಪ್ ಪ್ರಶಸ್ತಿ, ಕೆ.ಆರ್.ಪುರಂ ನಲ್ಲಿ ನಡೆದ UK 9 ಸ್ಕ್ವೇರ್ ಕಪ್ ನಲ್ಲಿ ರನ್ನರ್ ಅಪ್ ಹಾಗೂ ಭದ್ರಾವತಿಯ ಓಂ ಕಪ್ ಪ್ರಶಸ್ತಿಯ ಸಹಿತ ಸತತ 3 ರಾಜ್ಯಮಟ್ಟದ ಟೂರ್ನಮೆಂಟ್ ನ ಫೈನಲ್ ಪ್ರವೇಶಿಸಿ ಪ್ರಶಸ್ತಿ ಗಳಿಸಿ ದಾಖಲೆ ಬರೆದಿದ್ದಾರೆ.
ಟೂರ್ನಮೆಂಟ್ ನೇರ ಪ್ರಸಾರವನ್ನು M.Sports ಬಿತ್ತರಿಸಿದರೆ,ಹಿರಿಯ ಪ್ರಸಿದ್ಧ ಕಾಮೆಂಟೇಟರ್ ಗಳಾದ ವಿನಯ್ ಉದ್ಯಾವರ ಹಾಗೂ ಪ್ರಶಾಂತ್ ಅಂಬಲಪಾಡಿ ವೀಕ್ಷಕ ವಿವರಣೆ ನಡೆಸಿದರು.